ಸಿನಿಮಾ ಸುದ್ದಿ

ಕರುನಾಡನ್ನು ನಕ್ಕು ನಲಿಸಿದ 'ದಿನೇಶ್ ದಿಗ್ಗಜರು' ತಂಡ ಕಾಮಿಡಿ ಕಿಲಾಡಿಗಳು ಸೀಸನ್ 2 ಚಾಂಪಿಯನ್!

Raghavendra Adiga

ಕರುನಾಡನ್ನೇ ನಕ್ಕುನಗಿಸಿದ ಕಾಮಿಡಿ ಕಿಲಾಡಿಗಳು ಸೀಸನ್ 2ನ ಗ್ರ್ಯಾಂಡ್ ಫಿನಾಲೆ ಮುಗಿದಿದ್ದು  ದಿನೇಶ್ ದಿಗ್ಗಜರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಆರು ತಂಡಗಳು ಭಾಗವಹಿಸಿದ ಈ ಕಾರ್ಯಕ್ರಮ ಜುಲೈ 7ಕ್ಕೆ ಪ್ರಾರಂಭವಾಗಿದ್ದು ರಕ್ಷಿತಾ ಪ್ರೇಮ್ ಮಾಲೀಕರಾಗಿ, ಸರಿಗಮಪ ವಿಜಿ ಮೆಂಟರ್ ಆಗಿದ್ದ ದಿನೇಶ್ ದಿಗ್ಗಜರು ತಂಡಕ್ಕೆ ಪ್ರಶಸ್ತಿ ಒಲಿದಿದೆ. ಈ ತಂಡದ ನಾಕರಾಗಿ ಅಪ್ಪಣ್ಣ ಇದ್ದು ವಿಜೇತ ತಂಡಕ್ಕೆ 10 ಲಕ್ಷ ಬಹುಮಾನ ಲಭಿಸಿದೆ.

ಇನ್ನು ಸೂರ್ಯ ನಾಯಕನಾಗಿದ್ದ ಬಾಲಣ್ಣ ಭಾಜ ಭತಂತ್ರಿ ಹಾಗೂ ನರಸಿಂಹರಾಜು ನಗೆ ತಂಡಗಳು ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿದೆ.

ಇನ್ನು ಮೊದಲ ರನ್ನರ್ ಅಪ್ ತಂಡಕ್ಕೆ 4 ಲಕ್ಷ ಹಾಗೂ ಎರಡನೇ ರನ್ನರ್ ಅಪ್ ತಂಡಕ್ಕೆ 1.5 ಲಕ್ಷ ರೂ. ಬಹುಮಾನ ಲಭಿಸಿದೆ.

SCROLL FOR NEXT