ಶಾನ್ವಿ ಶ್ರೀವಾತ್ಸವ್ 
ಸಿನಿಮಾ ಸುದ್ದಿ

'ಬ್ಯಾಂಗ್' ಸಿನಿಮಾ ಶೂಟಿಂಗ್ ಗೆ ಮರಳಿದ ನಟಿ ಶಾನ್ವಿ ಶ್ರೀವಾತ್ಸವ

ನಟಿ ಶಾನ್ವಿ ಶ್ರೀವಾತ್ಸವ ತಮ್ಮ ಬ್ಯಾಂಗ್ ಸಿನಿಮಾ ಶೂಟಿಂಗ್ ಗೆ ಮರಳಿದ್ದಾರೆ. ಕೊರೋನಾ ಎರಡನೇ ಅಲೆಯಿಂದಾಗಿ ನಟಿ ಶಾನ್ವಿ ಹಲವು ದಿನಗಳಿಂದ ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ.

ನಟಿ ಶಾನ್ವಿ ಶ್ರೀವಾತ್ಸವ ತಮ್ಮ ಬ್ಯಾಂಗ್ ಸಿನಿಮಾ ಶೂಟಿಂಗ್ ಗೆ ಮರಳಿದ್ದಾರೆ. ಕೊರೋನಾ ಎರಡನೇ ಅಲೆಯಿಂದಾಗಿ ನಟಿ ಶಾನ್ವಿ ಹಲವು ದಿನಗಳಿಂದ ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ.

ಜುಲೈ 16 ರಿಂದ ಶೂಟಿಂಗ್ ಪುನಾರಂಭವಾಗಲಿದ್ದು, ಶಾನ್ವಿ ಭಾಗವಹಿಸಲಿದ್ದಾರೆ.  ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದ ಬ್ಯಾಂಗ್ ಒಂದು  ದರೋಡೆಕೋರ ಚಿತ್ರ. ಸ್ಟಂಟ್ ಪ್ರಾಕ್ಟೀಸ್ ಗಾಗಿ ನಟಿ ಶಾನ್ವಿ ಆಗಮಿಸಿದ್ದಾರೆ.

ಹೊಡೆದಾಟದ ಚಿತ್ರಗಳ ಚಿತ್ರೀಕರಣ ಮಾಡಬೇಕು, ಇದಕ್ಕಾಗಿ ನಾನು ಶೂಟಿಂಗ್ ಪ್ರಾರಂಭಿಸುವ ಮೊದಲು ನನಗೆ ಕೆಲವು ಸಲಹೆಗಳು ಬೇಕಾಗುತ್ತವೆ ಎಂದು ಶಾನ್ವಿ ಹೇಳಿದ್ದಾರೆ. ಈ ಶೆಡ್ಯೂಲ್ ನಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ಭಾಗವಹಿಸುವುದಾಗಿ ಶಾನ್ವಿ ತಿಳಿಸಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿರುವ ಮಹಾವೇರಿಯಾರ್‌ನಲ್ಲಿ ಕೆಲವು ಬಾಕಿ ಉಳಿದಿರುವ ಪ್ಯಾಚ್‌ವರ್ಕ್ ಅನ್ನು ಹೊಂದಿದ್ದು, ಶೀಘ್ರದಲ್ಲೇ ಚಿತ್ರೀಕರಣ ಸೆಟ್ ಸೇರಲಿದ್ದಾರೆ. 

ಏತನ್ಮಧ್ಯೆ, ತನ್ನ ಮುಂದಿನ ಪ್ರಾಜೆಕ್ಟ್ ಗಳ ಕೆಲವು ಸ್ಕ್ರಿಪ್ಟ್ಗಳನ್ನು ಓದಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಲಾಕ್ ಡೌನ್ ನಂತರ ಶೂಟಿಂಗ್ ಗೆ ಮರಳಿರುವ ಶಾನ್ವಿ ಆಸಕ್ತಿದಾಯಕ ಕಥೆಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ದಿನೇಶ್ ಬಾಬು ನಿರ್ದೇಶನದ ಶಾನ್ವಿ ನಟನೆಯ ಕಸ್ತೂರಿ ಮಹಲ್ ಸಿನಿಮಾ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT