ಸಿನಿಮಾ ಸುದ್ದಿ

ದರ್ಶನ್ 'ಹೀರೋಯಿಸಂ' ಏನಿದ್ದರೂ ಸಿನಿಮಾಗಳಲ್ಲಿ ತೋರಿಸಲಿ: ಇಂದ್ರಜಿತ್ ಲಂಕೇಶ್

Raghavendra Adiga

ಬೆಂಗಳೂರು: ಹೀರೋಯಿಸಂ ಏನಿದ್ದರೂ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ, ಇದು ನಿಜ ಜೀವನ, ಸಾಕ್ಷಿಗಳನ್ನು ಪೋಲೀಸರ ಎದುರು ಇಡಬೇಕೆ ಹೊರತು ಗಂಡಸ್ತನ ನಿರೂಪಿಸಲು ಆಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ದರ್ಶನ್ ಗೆ ಪ್ರತ್ಯುತ್ತರ ನೀಡಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರು ಅಪ್ಪನಿಗೇ ಹುಟ್ಟಿದ್ದರೆ ನನ್ನ ಧ್ವನಿ ಇರುವ ಆಡಿಯೋವನ್ನು ಇಂದೇ ರಿಲೀಸ್ ಮಾಡಲಿ ಎಂದು ನಟ ದರ್ಶನ್ ಮೈಸೂರಿನಲ್ಲಿ ಮಾಧ್ಯಮದವರೆದುರು ಸಲಾಲು ಹಾಕಿದ ಬೆನ್ನಲ್ಲೇ ಇಂದ್ರಜಿತ್ ಈ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಗೂಂಡಾಗಿರಿ ಎನ್ನುವ ಪದ ಬಳಕೆ ಮಾಡಿದ್ದೆ. ಆದರೆ ಎಲ್ಲಿಯೂ "ಗಾಂಡೂಗಿರಿ" ಎಂದಿಲ್ಲ. ಕಲಾವಿದರು ಅನಕ್ಷರಸ್ಥರು ಎಂದು ಹೇಳಿಲ್ಲ. ಸಮಾಜಕ್ಕೆ ಕನ್ನಡಿಯಂತೆ, ಮಾದರಿಯಾಗಿರಬೇಕು ಎಂದು ಹೇಳಿದ್ದೆ" ಎಂದು ಇಂದ್ರಜಿತ್ ಸಮರ್ಥನೆ ನೀಡಿದ್ದಾರೆ.

ಇಂದು ಆಸ್ತಿ ವಿಷಯ ಬಂದಿದೆ, ಮುಂದೇನು ಬರುತ್ತದೆಯೋ ಎಂದು ದರ್ಶನ್ ವಿಚಲಿತರಾಗಿದ್ದಾರೆ ಎಂದು ನಿರ್ದೇಶಕರು ನಟನಿಗೆ ಟಾಂಗ್ ನೀಡಿದ್ದಾರೆ.

ದರ್ಶನ್ ಪದ ಬಳಕೆ ಸರಿಯಿಲ್ಲ

ವರನಟ ಡಾ, ರಾಜ್  ಅವರು ಕನ್ನಡ ನಾಡು, ನುಡಿ ಬಗೆಗೆ ಅಪಾರ ಅಭಿಮಾನ ಹೊಂದಿದ್ದರು. ಆದರೆ ದರ್ಶನ್ ಅವರ ಪದ ಬಳಕೆ ಸರಿಯಾಗಿಲ್ಲ. ಅವರೇನಾದರೂ ತೊಂದರೆ ಅನುಭವಿಸುತ್ತಿದ್ದರೆ ಅಥವಾ ಡಿಸ್ಟರ್ಬ್ ಆಗಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಲಲಿ ಎಂದು ಇಂದ್ರಜಿತ್ ಸಲಹೆ ನೀಡಿದ್ದಾರೆ.

ಸರ್ವರ್ ಸಹ ಅಭಿಮಾನಿಯಾಗಿರಬಹುದು

ಹೋಟೆಲ್ ಸರ್ವರ್ ಸಹ ಅವರ ಅಭಿಮಾನಿಯೇ ಇರಬಹುದು. ಆದರೆ ಅವರ ಮೇಲೆ ಕೈ ಮಾಡಿದ್ದೇಕೆ? ನೀವು ಗಂಡಸ್ತನ ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ ಇಂದ್ರಜಿತ್ ನೀವು ಅರುಣಾ ಕುಮಾರಿಯವರನ್ನು ತೋಟಕ್ಕೆ ಕರೆಸಿಕೊಂಡಿದೀರೋ ಇಲ್ಲವೋ? ಧರ್ಮಸ್ಥಳದ ಮಂಜುನಾಥಸ್ವಾಮಿಯ ಎದುರು ಪ್ರಮಾಣ ಮಾಡಿ ಎಂದು ನಟನಿಗೆ ಸವಾಲೆಸೆದಿದ್ದಾರೆ.

SCROLL FOR NEXT