ಯಶಿಕಾ ಆನಂದ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ಯಶಿಕಾ ಆನಂದ್ ಕಾರು ಅಪಘಾತ: ಸ್ನೇಹಿತೆ ಸ್ಥಳದಲ್ಲೇ ಸಾವು, ನಟಿಗೆ ಗಂಭೀರ ಗಾಯ

ಬಿಗ್ ಬಾಸ್ ತಮಿಳು ಸ್ಪರ್ಧಿ ಯಶಿಕಾ ಆನಂದ್ ಕಾರು ಅಪಘಾತಕ್ಕೀಡಾಗಿ, ನಟಿ ಗಂಭೀರ ಗಾಯಗೊಂಡಿದ್ದು ಆಕೆಯ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಚೆನ್ನೈ: ಬಿಗ್ ಬಾಸ್ ತಮಿಳು ಸ್ಪರ್ಧಿ ಯಶಿಕಾ ಆನಂದ್ ಕಾರು ಅಪಘಾತಕ್ಕೀಡಾಗಿ, ನಟಿ ಗಂಭೀರ ಗಾಯಗೊಂಡಿದ್ದು ಆಕೆಯ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಸ್ನೇಹಿತರ ಜೊತೆಗೆ ಯಶಿಕಾ ಆನಂದ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಮಹಾಬಲಿಪುರಂ ಬಳಿ ಅಪಘಾತ ಸಂಭವಿಸಿದ್ದು, ಆಕ್ಸಿಡೆಂಟ್‌ನಲ್ಲಿ ಯಶಿಕಾ ಆನಂದ್ ಅವರ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶಿಕಾ ಆನಂದ್ ಗಂಭೀರವಾಗಿ ಗಾಯಗೊಂಡಿದ್ದಾರೆ.

'ಧುರುವಾಂಗಲ್ ಪಾಥಿನಾರು' ಮೂಲಕ ಖ್ಯಾತಿ ಗಳಿಸಿದ ನಟಿ ಯಶಿಕಾ ಆನಂದ್ ಪ್ರಯಾಣ ಮಾಡುತ್ತಿದ್ದ ಕಾರು ಜುಲೈ 25 ರಂದು ಮುಂಜಾನೆ 1 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ಮಹಾಬಲಿಪುರಂನ ಈಸ್ಟ್ ಕೋಸ್ಟ್ ರೋಡ್‌ನಲ್ಲಿ ಯಶಿಕಾ ಆನಂದ್ ಅವರ ಕಾರು ಅತಿ ವೇಗವಾಗಿ ಸಾಗುತ್ತಿತ್ತು. ಅತಿಯಾದ ವೇಗ ನಿಯಂತ್ರಣಕ್ಕೆ ಸಿಗದೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ಹಳ್ಳಕ್ಕೆ ಜಾರಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರತ್ಯಕ್ಷದರ್ಶಿಗಳು ಓಡಿ ಬಂದರು. ಅಷ್ಟರಲ್ಲಾಗಲೇ, ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಪ್ರತ್ಯಕ್ಷದರ್ಶಿಗಳು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದರು. ವರದಿಗಳ ಪ್ರಕಾರ, ಕಾರಿನಲ್ಲೇ ಸಿಲುಕಿದ್ದ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಭವಾನಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್