ಎಂಆರ್ ದೀಕ್ಷಿತ್ 
ಸಿನಿಮಾ ಸುದ್ದಿ

'ಡೆಡ್ಲಿ-3' ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಆರ್ ದೀಕ್ಷಿತ್ ಎಂಟ್ರಿ!

ಎಂಆರ್ ದೀಕ್ಷಿತ್ ರವಿ ಶ್ರೀವತ್ಸ ಅವರ ಡೆಡ್ಲಿ-3 ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಪರಿಚಯವಾಗಲಿದ್ದಾರೆ. 

ಎಂಆರ್ ದೀಕ್ಷಿತ್ ರವಿ ಶ್ರೀವತ್ಸ ಅವರ ಡೆಡ್ಲಿ-3 ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಪರಿಚಯವಾಗಲಿದ್ದಾರೆ. ಮೇ.31 ರಂದು ಸ್ವತಃ ನಿರ್ದೇಶಕ ರವಿ ಶ್ರೀವತ್ಸ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿ, ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನ್ನೂ ಬಿಡುಗಡೆ ಮಾಡಿದ್ದರು. 

ನಟ ಆದಿತ್ಯ ಅವರೊಂದಿಗೆ ರವಿ ಶ್ರೀವತ್ಸ ಡೆಡ್ಲಿ ಸೋಮಾ ಸರಣಿಯನ್ನು ನಿರ್ದೇಶಿಸಿದ್ದರು.ಈಗ ಹೊಸ ನಾಯಕ ನಟನೊಂದಿಗೆ ಸರಣಿಯ ಮೂರನೇ ಭಾಗವನ್ನು ನಿರ್ದೇಶಿಸಲಿದ್ದಾರೆ. 

ಇದಕ್ಕೂ ಮುನ್ನ ದೀಕ್ಷಿತ್ ಗೆ ರವಿ ಶ್ರೀವತ್ಸಾ ಎಂಆರ್ ಎಂಬ ಸಿನಿಮಾವನ್ನು ನಿರ್ದೇಶಿಸುವ ಯೋಜನೆ ಹೊಂದಿದ್ದರು. ಇದು ಮುತ್ತಪ್ಪ ರೈ ಅವರ ಜೀವನಾಧಾರಿತ ಕಥೆ ಹೊಂದಿದ ಸಿನಿಮಾ ಆಗಿತ್ತು. ಆದರೆ ಹಲವಾರು ವಿವಾದಗಳ ಕಾರಣದಿಂದಾಗಿ ಆ ಸಿನಿಮಾದ ಯೋಜನೆ ಚಿತ್ರೀಕರಣಕ್ಕೂ ಮುನ್ನವೇ ಸ್ಥಗಿತಗೊಂಡಿತು. 

ಈ ಹಿನ್ನೆಲೆಯಲ್ಲಿ ಡೆಡ್ಲಿ ಸರಣಿಯ ಮೂಲಕ ದೀಕ್ಷಿತ್ ನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ರವಿ ಶ್ರೀವತ್ಸ ಯೋಜನೆ ಹೊಂದಿದ್ದು, ಅಂಡರ್ ವರ್ಲ್ಡ್, ಪ್ರೀತಿ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel