ಸಿನಿಮಾ ಸುದ್ದಿ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನ್ಮದಿನ: ಗಾನಗಂಧರ್ವನ ಗುಣಗಾನ

Sumana Upadhyaya

ಬೆಂಗಳೂರು: ಜೂನ್ 4, ಸಂಗೀತ ಮಾಂತ್ರಿಕ, ಸ್ವರ ಸಾಮ್ರಾಟ, ಸಂಗೀತ ಕಲಾವಿದರ ಆರಾಧ್ಯ ದೈವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವ.

ಗಾನಗಾರುಡಿಗನ 75ನೇ ಜನ್ಮದಿನ ಇಂದಾಗಿದ್ದು, ಅವರಿಲ್ಲದ ಮೊದಲ ಜನ್ಮದಿನೋತ್ಸವ, ಕಳೆದ ವರ್ಷ ಸೆಪ್ಟೆಂಬರ್ 25ರಂದು ಅವರು ಇಹಲೋಕ ತ್ಯಜಿಸಿದ್ದರು. ಕೊರೋನಾ ಸೋಂಕು ಬಂದು ಆಸ್ಪತ್ರೆಯಲ್ಲಿ ತಿಂಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟಿದ್ದರು.

ಆದರೆ ಇಂದು ಅವರ ಜಯಂತಿಯಂದು ಇಡೀ ಸಂಗೀತ ಲೋಕ, ಅಭಿಮಾನಿಗಳು, ಸಂಗೀತ ಪ್ರಿಯರು, ಗಣ್ಯರು, ಕಲಾವಿದರು, ಚಿತ್ರತಾರೆಯರು ಅವರನ್ನು ದೇಶಾದ್ಯಂತ ಸ್ಮರಿಸುತ್ತಿದ್ದಾರೆ.

5 ದಶಕಗಳ ಕಾಲ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದು, 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು 15ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಧೀಮಂತ ಗಾಯಕ ಎಸ್ ಪಿಬಿಯವರು. ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾದ ಎಸ್ ಪಿಬಿಯವರಿಗೆ ಜನರಿಂದ ಹೆಚ್ಚಿನ ಪ್ರೀತಿ, ಖ್ಯಾತಿ ಸಿಕ್ಕಿದ್ದು ಕರ್ನಾಟಕದಲ್ಲಿ ಎಂದರೆ ತಪ್ಪಾಗಲಾರದು.

ಜೂನ್ 4, 1946ರಲ್ಲಿ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 

SCROLL FOR NEXT