ಶೈನ್ ಶೆಟ್ಟಿ 
ಸಿನಿಮಾ ಸುದ್ದಿ

ರಂಜಿತ್ ರಾವ್ ನಿರ್ದೇಶನದ 'ಪ್ರಾಯಶಃ' ಸಿನಿಮಾದಲ್ಲಿ ಶೈನ್ ಶೆಟ್ಟಿ ಅತಿಥಿ ಪಾತ್ರ!

ರಂಜಿತ್ ರಾವ್ ಚೊಚ್ಚಲ ನಿರ್ದೇಶನದ ಪ್ರಾಯಶ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ರಂಜಿತ್ ರಾವ್ ಚೊಚ್ಚಲ ನಿರ್ದೇಶನದ ಪ್ರಾಯಶ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಪ್ರಾಯಶಃ ಸಿನಿಮಾ ಕ್ರೈಮ್ ಥ್ರಿಲ್ಲರ್ ಕಥೆಯನ್ನೊಳಗೊಂಡಿದ್ದು, ರಂಜಿತ್ ರಾವ್ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ಈ ಹಿಂದೆ ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ರಂಜಿತ್ ರಾಯ್ ಪ್ರಾಯಶಃ ಸಿನಿಮಾದಲ್ಲಿ ಅರಮನೆ ಮತ್ತು ಯಾರಿವಳು ಧಾರಾವಾಹಿ ನಾಯಕ ರಾಹುಲ್ ಹಾಗೂ ಸವರ್ಣ ದೀರ್ಘ ಸಂಧಿ ನಾಯಕಿ ಕೃಷ್ಣ ಭಟ್ ಜೋಡಿಯಾಲಿದ್ದಾರೆ.

ಪ್ರಾಯಶಃ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೈನ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಬೇಕಿತ್ತು, ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ಪಾತ್ರಗಳ ವಿವರಣೆ ನೀಡಲು ವಾಯ್ಸ್ ಓವರ್ ನೀಡಿದ್ದಾರೆ. 

ಲಾಕ್ ಡೌನ್ ಗೂ ಮೊದಲು ಚಿತ್ರತಂಡ ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಿದೆ. ಶೀಘ್ರವೇ ಹಾಡೊಂದನ್ನು ರಿಲೀಸ್ ಮಾಡಲು ಚಿಂತಿಸಿದೆ. ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದ್ದು, ಪ್ರಸ್ತುತ ಡಿಟಿಎಸ್ ಮತ್ತು ಡಿಐ ನಡೆಯುತ್ತಿದೆ, ಮೇಡ್ ಅಂಡರ್ ಆರ್ಹಾ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ.

ಚಿತ್ರದಲ್ಲಿ ಪ್ರಶಾಂತ್ ಪಾಟೀಲ್ ಕ್ಯಾಮೆರಾ ಕೆಲಸ ನಿರ್ವಹಿಸುತ್ತಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ನಟ ಶೋಭರಾಜ್ ಪವೂರ್, ಮಧು ಹೆಗ್ಡೆ, ಸುನಿಲ್ ಸಾಗರ್ ಮತ್ತು ವಿನೀತ್ ಮುಖ್ಯಭೂಮಿಕೆಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ 'ಮುಕುಟ'ದಂತಿದ್ದ ಖಾರ್ಗ್ ಮೇಲೆ ಬಾಂಬ್ ದಾಳಿ: ದ್ವೀಪ ಸಂಪೂರ್ಣ ಧ್ವಂಸ; ಮಾಹಿತಿ ಹಂಚಿಕೊಂಡ ಟ್ರಂಪ್

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

ಮಂಡಿಯೂರಿದ ಕೇಂದ್ರ ಸರ್ಕಾರ: ಜೈಲಿನಲ್ಲಿದ್ದ Sonam Wangchuk ಗೆ ಕೊನೆಗೂ ಬಂಧನದಿಂದ ಮುಕ್ತಿ: ಕೇಂದ್ರ ಹೇಳಿದ್ದೇನು?

ಇರಾನ್ ಜೊತೆಗೆ ಸರಣಿ ಮಾತುಕತೆ: ಹಾರ್ಮುಜ್ ಜಲಸಂಧಿ ದಾಟಿದ LPG ಹೊತ್ತ ಭಾರತದ 2 ಹಡಗುಗಳು!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

SCROLL FOR NEXT