ಪುರುಷೋತ್ತಮ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

'ಪುರುಷೋತ್ತಮ' ದಲ್ಲಿ ನಾನು ಮೊದಲ ಬಾರಿಗೆ ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ: ನಟಿ ಅಪೂರ್ವ

ಬಾಡಿಬಿಲ್ಡರ್ ರವಿ ಅಭಿನಯದ ಚೊಚ್ಚಲ ಚಿತ್ರ "ಪುರುಷೋತ್ತಮ" ಸಿನಿಮಾ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಅಪೂರ್ವ ಈ ಹಿಂದೆ "ವಿಕ್ಟರಿ-2" ನಂತಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟ ಅಜಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.

ಬಾಡಿಬಿಲ್ಡರ್ ರವಿ ಅಭಿನಯದ ಚೊಚ್ಚಲ ಚಿತ್ರ "ಪುರುಷೋತ್ತಮ" ಸಿನಿಮಾ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಅಪೂರ್ವಾ ಈ ಹಿಂದೆ "ವಿಕ್ಟರಿ-2" ನಂತಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟ ಅಜಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.

130 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿರುವ ಜಿಮ್ ರವಿ ಇದೇ ಮೊದಲ ಬಾರಿಗೆ "ಪುರುಷೋತ್ತಮ" ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮರನಾಥ್ ಎಸ್‌ವಿ ನಿರ್ದೇಶನದ ಈ ಚಿತ್ರ ಫೆಬ್ರವರಿ 14 ರಂದು ಮಹೂರ್ತ ಆಚರಿಸಿಕೊಂಡಿದೆ. ಅಪೂರ್ವ ಹಾಗೂ ಇತರೆ ಪಾತ್ರವರ್ಗ ಮತ್ತು ಸಿಬ್ಬಂದಿಗಳೊಂದಿಗೆ ಮೈಸೂರಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.

ತಂಡವು ಕೇವಲ 12 ದಿನಗಳ ಶೂಟಿಂಗ್ ಮಾತ್ರವೇ ಉಳಿದಿದ್ದರೂ, ಲಾಕ್‌ಡೌನ್ ಕಾರಣ ಚಿತ್ರೀಕರಣ ಸ್ಥಗಿತವಾಗಿದೆ. ಚಿತ್ರೋದ್ಯಮಿಗಳ ನಡುವೆ ಜಿಮ್ ರವಿ ಎಂದು ಜನಪ್ರಿಯವಾಗಿರುವ ರವಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ಪತ್ರಿಕೆಯೊಡನೆ ಮಾತನಾಡಿರುವ ನಟಿ "ಪುರುಷೋತ್ತಮ" ದಲ್ಲಿ ತನ್ನನ್ನು ವಿಭಿನ್ನ ಲೈಟ್ ಹಾಗೂ ಪಾತ್ರದಲ್ಲಿ ನೋಡಲಿದ್ದೀರಿ ಎಂದಿದ್ದಾರೆ.

ಇದು ರಿವೆಂಜ್ ಥ್ರಿಲ್ಲರ್, ಕಥೆಯು ನಾಯಕಿಯ ಸುತ್ತ ತಿರುಗುತ್ತದೆ. ಈ ಚಿತ್ರವು ನನ್ನನ್ನು ಪ್ರಬುದ್ಧ ಪಾತ್ರವೊಂದರಲ್ಲಿ ತೋರಿಸಲಿದೆ. ನನಗಿಂತ ಹಿರಿಯಳಾದ ವಿವಾಹಿತ ಮಹಿಳೆಯ ಜವಾಬ್ದಾರಿಯುತ ಪಾತ್ರವನ್ನು ನಾನು ಇಲ್ಲಿ ನಿರ್ವಹಿಸಿದ್ದೇನೆ. ಇದು ನನ್ನ ಮೊದಲ ಪ್ರಯತ್ನವಾಗಿರುವುದರಿಂದ, ಪ್ರತಿಯೊಂದು ಸೀನ್ ಸಹ ಒಂದು ಸವಾಲಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದರು. ಶ್ರೀಧರ್ ವಿ ಸಂಭ್ರಮ್ ಮತ್ತು ಡಿಒಪಿ ಕುಮಾರ್ ಆರ್ ಕ್ರಮವಾಗಿ ಸಂಗೀತ ಮತ್ತು ಛಾಯಾಗ್ರಹಣ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT