ಸಿನಿಮಾ ಬಂಡಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಸಿನಿಮಾ ಬಂಡಿ' ಚಿತ್ರದಲ್ಲಿ ಕರ್ನಾಟಕದ ಸೌಗಂಧ!

ಇತ್ತೀಚೆಗಷ್ಟೇ ಒಟಿಟಿ ಪ್ಲಾಟ್'ಫಾರಂನಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ 'ಸಿನಿಮಾ ಬಂಡಿ' ಸಮಂತಾ ಅಕ್ಕಿನೇನಿ ಸೇರಿದಂತೆ ವಿವಿಧ ನಟ-ನಟಿಯರು ಪ್ರಶಂಸೆ ಪಡೆದುಕೊಳ್ಳುತ್ತಿದ್ದು, ಚಿತ್ರದ ತುಂಬೆಲ್ಲಾ ಕರ್ನಾಟಕದ ಕಲಾವಿದರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ. 

ಇತ್ತೀಚೆಗಷ್ಟೇ ಒಟಿಟಿ ಪ್ಲಾಟ್'ಫಾರಂನಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ 'ಸಿನಿಮಾ ಬಂಡಿ' ಸಮಂತಾ ಅಕ್ಕಿನೇನಿ ಸೇರಿದಂತೆ ವಿವಿಧ ನಟ-ನಟಿಯರು ಪ್ರಶಂಸೆ ಪಡೆದುಕೊಳ್ಳುತ್ತಿದ್ದು, ಚಿತ್ರದ ತುಂಬೆಲ್ಲಾ ಕರ್ನಾಟಕದ ಕಲಾವಿದರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ. 

ಪ್ರವೀಣ್ ಕಂದ್ರೇಗುಲಾ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಹೆಚ್ಚು ವೀಕ್ಷಣೆಯಾದ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. 

ಹೆಚ್ಚು ಪ್ರಶಂಸೆಗೆ ಪಾತ್ರವಾಗಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಸೇರಿದಂತೆ ಬಹುತೇಕ ಪಾತ್ರಗಳಲ್ಲಿ ಕನ್ನಡದ ಕಲಾವಿದರೇ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬೆಂಗಳೂರು ಮತ್ತು ಕೋಲಾರದ ಕನ್ನಡವನ್ನು ಬಳಕೆ ಮಾಡಿರುವುದರಿಂದ ಬೆಂಗಳೂರಿನವರಿಗೆ ಇದು ಕನ್ನಡ ಸಿನಿಮಾನ ಅಥವಾ ತೆಲುಗು ಸಿನಿಮಾ ಎಂದೆನಿಸುವಂತಿದೆ. ಆಟೋ ಚಾಲಕನೊಬ್ಬನ ಜೀವನ ಕಥೆಯನ್ನು ಇಟ್ಟುಕೊಂಡು ಚಿತ್ರವನ್ನು ಸಿದ್ಧಪಡಿಸಲಾಗಿದೆ. 

ಬೆಂಗಳೂರಿನಲ್ಲಿ 3 ವರ್ಷಗಳಿದ್ದೆ. ಈ ವೇಳೆ ಅಂಗಡಿ ಮಾಲೀಕರೊಬ್ಬರು ಕನ್ನಡ ಹಾಗೂ ತೆಲುಗು ಮಿಶ್ರತ ಭಾಷೆ ಮಾತನಾಡುತ್ತಿದ್ದುದ್ದನ್ನು ನೋಡಿದ್ದೆ. ಬಹಳ ಇಷ್ಟವಾಗಿತ್ತು. ಈ ರೀತಿಯ ಭಾಷೆಯನ್ನು ತೆಲುಗು ಚಿತ್ರಗಳಲ್ಲಿ ಯಾರೂ ಬಳಕೆ ಮಾಡಿಲ್ಲ. ಅಲ್ಲದೆ, ಹೊಸ ಪ್ರತಿಭೆ, ಹೊಸ ಪ್ರದೇಶ, ಹೊಸ ಭಾಷೆಗಾಗಿ ನಾನು ಎದುರು ನೋಡುತ್ತಿದ್ದೆ. ಹೀಗಾಗಿ ಕನ್ನಡ ಮಿಶ್ರಿತ ತೆಲುಗು ಭಾಷೆಯನ್ನು ಬಳಕೆ ಮಾಡಿಕೊಂಡೆ. ಇನ್ನು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕಾಸ ವಸಿಷ್ಠ (ವೀರಬಾಬು) ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದಾರೆ. ಚಿತ್ರದಲ್ಲಿ ಭಾಷೆ ಬಳಕೆ ಮುಖ್ಯವಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕದ ಕಲಾವಿದರೂ ನಟಿಸಿದ್ದಾರೆಂದು ಪ್ರವೀಣ್ ಅವರು ಹೇಳಿದ್ದಾರೆ. 

ಕೋಲಾರದಲ್ಲಿ ನಡೆಸಿದ ಚಿತ್ರೀಕರಣ ಕುರಿತು ಮಾತನಾಡಿದ ಅವರು, ಕಥೆಗೆ ಸರಿಹೊಂದುವ ಗ್ರಾಮ ಬೇಕಿತ್ತು. ಹೀಗಾಗಿ ಮುಳಬಾಗಿಲನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಗೊಲ್ಲಪಲ್ಲಿ ಸಣ್ಣ ಗ್ರಾಮವಾಗಿದ್ದು, ಗ್ರಾಮದಲ್ಲಿ ಕೇವಲ 20 ಮನೆಗಳಷ್ಟೇ ಇವೆ. ಹೀಗಾಗಿ ಈ ಪ್ರದೇಶ ಚಿತ್ರೀಕರಣಕ್ಕೆ ಉತ್ತಮವಾಗಿತ್ತು. ಇಡೀ ಗ್ರಾಮ ಕೂಡ ನಮಗೆ ಚಿತ್ರೀಕರಣಕ್ಕೆ ಬೆಂಬಲ ನೀಡಿತ್ತು. ಕನ್ನಡದ ತಿಥಿ ಚಿತ್ರ ನಮಗೆ ಪ್ರೇರಣೆಯಾಗಿತ್ತು. ಚಿತ್ರಕ್ಕೆ ಪ್ರೇಕ್ಷರಿಂದ ಬರುತ್ತಿರುವ ಪ್ರತಿಕ್ರಿಯೆ ಸಾಕಷ್ಟು ಸಂತಸವನ್ನು ತಂದಿದೆ. ಪ್ರಮುಖವಾಗಿ ಈ ಸಾಂಕ್ರಾಮಿಕ ರೋಗ ಸಂದರ್ಭದಲ್ಲೂ ಉತ್ತಮ ಪ್ರತಿಕ್ರಿಯೆ ಬಂದಿರುವುದು ಬಹಳ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. 

ಚಿತ್ರಕ್ಕೆ ಚಿತ್ರಕಥೆಯೇ ಕಿಂಗ್ ಎಂಬುದನ್ನು ಸಿನಿಮಾ ಬಂಡಿ ಸಾಬೀತುಪಡಿಸಿದೆ. ಒಳ್ಳೆಯ ಚಿತ್ರಗಳನ್ನು ಜನರು ಗುರ್ತಿಸುತ್ತಾರೆ. ಇಂತಹ ಚಿತ್ರಗಳಿಗೆ ಒಟಿಟಿ ಉತ್ತಮ ವೇದಿಕೆಯಾಗಿದೆ. ಪ್ರತೀಯೊಬ್ಬ ನಿರ್ದೇಶನಕನಿಗೂ ತನ್ನ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಇದು ಅತ್ಯಂತ ಕಠಿಣ ಸಮಯವಾಗಿದ್ದು, ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT