ಆಕ್ಸಿಜನ್ ಕಾನ್ಸನ್​ಟ್ರೇಟರ್ 
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದ ಕೋವಿಡ್ ಸೋಂಕಿತರಿಗೆ ಕೆವಿಎನ್ ಫೌಂಡೇಷನ್ ನಿಂದ ಉಚಿತ ಕಾನ್ಸನ್​ಟ್ರೇಟರ್ ವಿತರಣೆ

ಕೋವಿಡ್​ ಸೋಂಕಿನಿಂದ ಬಳಲುತ್ತಿರುವ ಕನ್ನಡ ಚಿತ್ರರಂಗದವರಿಗೆ ಕೆವಿಎನ್​ ಫೌಂಡೇಷನ್​ ಸ್ಪಂದಿಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ...

ಬೆಂಗಳೂರು: ಕೋವಿಡ್​ ಸೋಂಕಿನಿಂದ ಬಳಲುತ್ತಿರುವ ಕನ್ನಡ ಚಿತ್ರರಂಗದವರಿಗೆ ಕೆವಿಎನ್​ ಫೌಂಡೇಷನ್​ ಸ್ಪಂದಿಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಆಮ್ಲಜನಕ ಕಾನ್ಸನ್​ಟ್ರೇಟರ್​ಗಳನ್ನು ನೀಡುತ್ತಿದೆ.

ಸೋಂಕಿತರು ಗುಣಮುಖರಾಗುತ್ತಿದ್ದಂತೆ ಅದನ್ನು ಮರಳಿ ಕೆವಿಎನ್ ತಂಡಕ್ಕೆ ಮರಳಿಸಿದರೆ ಕೆಲಸ ಮುಗಿದಂತೆ. ಕಳೆದ ಒಂದು ತಿಂಗಳಿಂದ ಸಾರ್ವಜನಿಕರಿಗೆ ಕೆವಿಎನ್​ ಫೌಂಡೇಷನ್​ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಒದಗಿಸುತ್ತಿದೆ. ಸದ್ಯ 200 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳು ಇವರ ಬಳಿ ಇದ್ದು, ನ್ಯೂಯಾರ್ಕ್​ನಿಂದ ಹೆಚ್ಚುವರಿ 400 ಕಾನ್ಸನ್​ಟ್ರೇಟರ್​ಗಳು ಆಗಮಿಸಿವೆ. ಅವೆಲ್ಲವುಗಳ ಸದ್ಬಳಕೆ ಆಗಲಿ ಎಂಬುದು ಕೆವಿಎನ್​ ಫೌಂಡೇಷನ್ ಉದ್ದೇಶ.

ಪ್ರಸ್ತುತ ಕೇವಲ ಸಿನಿಮಾ, ಕಿರುತೆರೆ ಕೆಲಸಗಾರರು, ಕಲಾವಿದರು, ತಂತ್ರಜ್ಱರು, ಕ್ಯಾಬ್ ಚಾಲಕರು ಸೇರಿದಂತೆ ಒಟ್ಟಾರೆ ಸಿನಿಮಾರಂಗಕ್ಕೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ನಟಿ ಶ್ವೇತಾ ಚೆಂಗಪ್ಪ ಕೆವಿಎನ್​ ಫೌಂಡೇಷನ್​ ವತಿಯಿಂದ ಆಕ್ಸಿಜನ್ ಕಾನ್ಸನ್​ಟ್ರೇಟರ್ ಬಳಸಿಕೊಂಡಿದ್ದಾರೆ.

ಹಾಗಾದರೆ ಕಾನ್ಸನ್​ಟ್ರೇಟರ್​ ಪಡೆಯುವುದು ಹೇಗೆ?
www.kvnfoundation.com ವೆಬ್​ಸೈಟ್​ಗೆ ಹೋಗಿ ಸೂಕ್ತ ಮಾಹಿತಿಯನ್ನು ಅದರಲ್ಲಿ ಸಲ್ಲಿಕೆ ಮಾಡಿದರೆ, ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಮತ್ತು ಸಂಪರ್ಕ ಇರದೇ ಆಕ್ಸಿಜನ್ ಕಾನ್ಸನ್​ಟ್ರೇಟರ್ ಪಡೆಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಕಾನ್ಸನ್​ಟ್ರೇಟರ್​ ಪಡೆಯುವಾಗ ಓರಿಜಿನಲ್ ಆಧಾರ್ ಕಾರ್ಡ್​ ಅನ್ನು ನೀಡಬೇಕು. ಸ್ಯಾಚುರೇಷನ್ ಲೆವಲ್​ 90 ರಿಂದ 92 ಇದ್ದವರಿಗೆ ನೀಡಲಾಗುತ್ತದೆ. ವೈದ್ಯರು ನೀಡಿರುವ ಚೀಟಿಯೂ ತುಂಬ ಮಹತ್ವದ್ದು. ಇವರಿಗೆ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಅವಶ್ಯಕತೆ ಇದೆ ಎಂದು ಬರೆದ ನಂತರವಷ್ಟೇ ಅದನ್ನು ವಿತರಣೆ ಮಾಡಲಾಗುತ್ತದೆ.

5 ಲೀಟರ್​ನ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಗಳು ಕೆವಿಎನ್​ ಫೌಂಡೇಷನ್ ಬಳಿ ಇದ್ದು, ವಾರ, 15ದಿನಗಳ ಅಥವಾ ಸೋಂಕಿತರು ಗುಣಮುಖವಾಗುವ ತನಕ ಯಾವುದೇ ಹಣ ಪಾವತಿಸದೇ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಬಳಕೆ ಮಾಡಬಹುದು. ಗುಣಮುಖರಾದ ಬಳಿಕ ಅದನ್ನು ಕೆವಿಎನ್​ ಫೌಂಡೇಷನ್​ಗೆ ಮರಳಿಸಬೇಕಾಗುತ್ತದೆ. ಅಲ್ಲಿ ಅದರ ರೀ ಸೈಕಲ್ ಮಾಡಿ ಮತ್ತೆ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT