ನೀಲಿ ಹಕ್ಕಿ ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಗಣೇಶ್ ಹೆಗ್ಡೆ ನಿರ್ದೇಶನದ 'ನೀಲಿ ಹಕ್ಕಿ' ಪ್ರದರ್ಶನ

ಜೂನ್ 4 ಮತ್ತು 13ರ ನಡುವೆ ನಡೆಯಲಿರುವ ಈ ವರ್ಷದ ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಗಣೇಶ್ ಹೆಗ್ಡೆ ಅವರ ಚೊಚ್ಚಲ ನಿರ್ದೇಶನದ 'ನೀಲಿ ಹಕ್ಕಿ' ಸೇರಿದಂತೆ ಕನ್ನಡದ ಮೂರು ಚಲನಚಿತ್ರಗಳು ವರ್ಚುಯಲ್ ನಲ್ಲಿ ಪ್ರದರ್ಶನ ಕಾಣಲಿವೆ.

ಬೆಂಗಳೂರು: ಜೂನ್ 4 ಮತ್ತು 13ರ ನಡುವೆ ನಡೆಯಲಿರುವ ಈ ವರ್ಷದ ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ  
ಗಣೇಶ್ ಹೆಗ್ಡೆ ಅವರ ಚೊಚ್ಚಲ ನಿರ್ದೇಶನದ 'ನೀಲಿ ಹಕ್ಕಿ' ಸೇರಿದಂತೆ ಕನ್ನಡದ ಮೂರು ಚಲನಚಿತ್ರಗಳು ವರ್ಚುಯಲ್ ನಲ್ಲಿ ಪ್ರದರ್ಶನ ಕಾಣಲಿವೆ.

ಒಂದು ಮೊಟ್ಟೆಯ ಕಥೆ, ಲೂಸಿಯಾ, ಗುಂಟು ಮೂಟೆಯಂತಹ ಕಮರ್ಷಿಯಲ್ ಸಿನಿಮಾಗಳೊಂದಿಗೆ ತಮ್ಮ ಚೊಚ್ಚಲ ನಿರ್ದೇಶನದ
'ನೀಲಿ ಹಕ್ಕಿ' ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ  ಪ್ರದರ್ಶನ ಕಾಣುತ್ತಿರುವುದು ದೊಡ್ಡ ಅವಕಾಶವಾಗಿದೆ
ಎಂದು ಗಣೇಶ್ ಹೇಳಿದ್ದಾರೆ.

ನಿರ್ದೇಶಕರು ಚೊಚ್ಚಲ 'ನೀಲಿ ಹಕ್ಕಿ' ಚಿತ್ರದಲ್ಲಿ ಚಿತ್ರದಲ್ಲಿ ಸರಳ ಹಾಗೂ ಪ್ರಾಮಾಣಿಕತೆಯ ಕಥೆ ಹೇಳುವ ಉದ್ದೇಶ ಹೊಂದಿದ್ದಾರೆ. ಈ ಚಿತ್ರವು 10 ವರ್ಷದ ಬಾಲಕನ ಜರ್ನಿಯನ್ನು ಗುರುತಿಸುತ್ತದೆ. ಆತನ ತನ್ನ ಹೆತ್ತವರ ದುರಾಶೆಯ ಮೇಲೆ ತನ್ನ ತನ್ನ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ. ಜಾಗತೀಕರಣವೂ ಈ ಚಿತ್ರದ ಅತ್ಯಂತ ಸಣ್ಣ ಭಾಗವಾಗಿದೆ. ಇದು 10 ವರ್ಷದ ಬಾಲಕನ ದೂರದೃಷ್ಟಿಯಿಂದ ಹೈಲೆಟ್ ಆಗಿದೆ. ಇದು ಮಗುವಿಗೆ ಯಾವ ರೀತಿಯ ಸ್ವಾತಂತ್ರ್ಯ ಅಥವಾ ಹಕ್ಕುಗಳನ್ನು ನೀಡುತ್ತದೆ ಚರ್ಚಿಸುತ್ತದೆ ಎಂದು ಗಣೇಶ್ ಹೇಳಿದ್ದಾರೆ.

ಗೋಪಾಲ ಕೃಷ್ಣ ದೇಶಾಪಂಡೆಯೊಂದಿಗೆ ಅಮನ್ ಎಸ್ ಕರ್ಕೆರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ನಿಧಿ ಹೆಗ್ಡೆ ಮತ್ತು ನರೇಶ್ ಭಟ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಕಥಾ ಹಂದರ ಚಿತ್ರವಾಗಿದೆ. ಸಿನಿಮಾಟೋಗ್ರಾಫರ್ ವಿಶು ಸೇರಿದಂತೆ 30 ಮಂದಿ ನೀಲಿಹಕ್ಕಿ ಚಿತ್ರತಂಡದಲ್ಲಿದ್ದು, ಇಡೀ ಸಿನಿಮಾ ಶಿರಸಿ ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣಗೊಂಡಿದೆ. ಗಗನ್ ಬಂಡೇರಿಯಾ ಸಂಗೀತ ಸಂಯೋಜಿಸಿದ್ದು, ಪ್ರಶಾಂತ್ ಅವರ ಸಂಕಲನವಿದೆ. 

ಸೆನ್ಸಾರ್ ಬೋರ್ಡ್ ನಿಂದ ಯು ಸರ್ಟಿಫಿಕೇಟ್ ಸಿಕ್ಕಿದ್ದು, ಇದೀಗ ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ  ಸಿನಿಮಾ
ಪ್ರದರ್ಶನ ಕಾಣಲಿದೆ. ನೀಲಿಹಕ್ಕಿಯನ್ನು ವೀಕ್ಷಿಸಿದ ನಟ ರಕ್ಷಿತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆಗೆ
ಸದ್ಯ ಸೂಕ್ತ ಸಂದರ್ಭದಲ್ಲಿ ಅಂತಹ ಸಂದರ್ಭ ಬಂದಾಗ ನಿರ್ಧರಿಸುತ್ತೇವೆ. ಕಲಾತ್ಮಕ ಸಿನಿಮಾವಾಗಿ ಬಂಧಿಸಲು ಇಷ್ಟಪಡುವುದಿಲ್ಲ, ಆದಾಗ್ಯೂ, ಒಟಿಟಿ ಯಲ್ಲಿ ಬಿಡುಗಡೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಗಣೇಶ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

SCROLL FOR NEXT