ಸಿನಿಮಾ ಸುದ್ದಿ

ಲವ್ ಮಾಕ್ಟೇಲ್ ಕನ್ನಡ ಚಿತ್ರ ವೀಕ್ಷಿಸಿ, ಹೊಗಳಿದ ಆಸಿಸ್ ಪತ್ರಕರ್ತೆ; ಕನ್ನಡದಲ್ಲೇ 'ಈ ಸಲ ಕಪ್ ನಮ್ದೇ' ಅಂದ್ರು!

Srinivasamurthy VN

ಸಿಡ್ನಿ: ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರ ಇದೀಗ ವಿದೇಶದಲ್ಲೂ ಸದ್ದು ಮಾಡುತ್ತಿದ್ದು, ಚಿತ್ರವನ್ನು ವೀಕ್ಷಿಸಿದ ಆಸ್ಚ್ರೇಲಿಯಾದ ಪತ್ರಕರ್ತೆಯೊಬ್ಬರು ಚಿತ್ರವನ್ನು ಹೊಗಳಿ ಟ್ವಿಟರ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹೌದು.. ಆಸ್ಟ್ರೇಲಿಯಾದ ಕ್ರೀಡಾ ವರದಿಗಾರ್ತಿ ಕ್ಲೋಯ್-ಅಮಂಡಾ ಬೈಲಿ ಕನ್ನಡದ ಲವ್ ಮಾಕ್ಟೇಲ್ ಚಿತ್ರವನ್ನು ವೀಕ್ಷಿಸಿದ್ದು, ಅಷ್ಟು ಮಾತ್ರವಲ್ಲದೇ ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ. 

ಈ ಕುರಿತು ಟ್ವಿಟರ್ ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ಈಗಷ್ಟೇ ನಾನು ಲವ್ ಮಾಕ್ಟೇಲ್ ಚಿತ್ರವನ್ನು ವೀಕ್ಷಿಸಿದೆ. ಸ್ನೇಹಿತರೇ ನೀವು ಹೇಳಿದ್ದು ಸರಿ... ಇದೊಂದು ಅತ್ಯುತ್ತಮ ಚಿತ್ರ. ಚಿತ್ರದುದ್ದಕ್ಕೂ ನಾನು ನಗುತ್ತಿದ್ದೆ. ಆದರೆ ಚಿತ್ರದ ಅಂತಿಮ ಭಾಗ ದುಃಖವಾದರೂ ನೋಡಲು ಖುಷಿಯಾಗುತ್ತದೆ.  ಚಿತ್ರದ ಸಂಗೀತ ಉತ್ತಮವಾಗಿದ್ದು, ಸಾಕಷ್ಟು ಕಾಮಿಡಿ ಸನ್ನಿವೇಶಗಳಲ್ಲಿ ಸಾಕಷ್ಟು ನಕ್ಕಿದ್ದೇನೆ. ಮನುಷ್ಯನ ಜೀವನದ ಎಲ್ಲ ಭಾವನೆಗಳನ್ನೂ ಈ ಚಿತ್ರಹೊಂದಿದೆ. ಪಾರ್ಟ್ 2 ಕೂಡ ಸಿದ್ಧವಾಗುತ್ತಿದೆ ಎಂದು ನನ್ನ ಸ್ನೇಹಿತರಿಂದ ತಿಳಿಯಿತು ಎಂದು ಟ್ವೀಟ್ ಮಾಡಿದ್ದಾರೆ.

'ಈ ಸಲ ಕಪ್ ನಮ್ದೇ'
ಇನ್ನು ಇದೇ ವೇಳೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಆರ್ಧಕ್ಕೇ ನಿಂತುಹೋಗಿದ್ದ ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ಮುಂದುವರೆಸುವ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿರುವ ಕ್ಲೋಯ್-ಅಮಂಡಾ ಬೈಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡಕ್ಕೆ ಬೆಂಬಲ ಸೂಚಿಸಿ ಈ ಸಲ ಕಪ್ ನಮ್ದೇ ಎಂಬ ವ್ಯಾಕ್ಯವನ್ನು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. 

SCROLL FOR NEXT