ರವಿಚಂದ್ರನ್ 
ಸಿನಿಮಾ ಸುದ್ದಿ

ಫುಡ್ ಕಿಟ್ ನೀಡುವ ಮೂಲಕ ಅವಮಾನ; ಪಬ್ಲಿಸಿಟಿಗಾಗಿ ಈ ಕೆಲಸ: ಹಿರಿಯ ನಟ ರವಿಚಂದ್ರನ್ ಅಸಮಾಧಾನ

ನನ್ನ ಜೇಬಿನಲ್ಲಿ ಒಂದು ರೂಪಾಯಿ ಇದ್ದರೆ ನಾಳೆಯೇ ಶೂಟಿಂಗ್ ಆರಂಭಿಸುತ್ತೇನೆ ಎಂದು ನಟ ರವಿಚಂದ್ರನ್ ಹೇಳಿದ್ದಾರೆ, ಬೇರೆ ಇಂಡಸ್ಟ್ರಿಗಳ ರೀತಿ ಸಿನಿಮಾ ರಂಗವೂ ಹೋರಾಟ ನಡೆಸುತ್ತಿದೆ ಎಂದು ಹಿರಿಯ ನಟ ರವಿಚಂದ್ರನ್ ಹೇಳಿದ್ದಾರೆ.

ನನ್ನ ಜೇಬಿನಲ್ಲಿ ಒಂದು ರೂಪಾಯಿ ಇದ್ದರೆ ನಾಳೆಯೇ ಶೂಟಿಂಗ್ ಆರಂಭಿಸುತ್ತೇನೆ ಎಂದು ನಟ ರವಿಚಂದ್ರನ್ ಹೇಳಿದ್ದಾರೆ, ಬೇರೆ ಇಂಡಸ್ಟ್ರಿಗಳ ರೀತಿ ಸಿನಿಮಾ ರಂಗವೂ ಹೋರಾಟ ನಡೆಸುತ್ತಿದೆ ಎಂದು ಹಿರಿಯ ನಟ ರವಿಚಂದ್ರನ್ ಹೇಳಿದ್ದಾರೆ.

ಕನ್ನಡ ಸಿನಿಮಾರಂಗಕ್ಕೆ ಬೇಕಿರುವುದು ಫುಡ್ ಕಿಟ್ ಅಲ್ಲ ಬದಲಿಗೆ ಕೆಲಸ ಎಂದು ಹೇಳಿದ್ದಾರೆ, ಕೆಲವು ಜನ ಕಷ್ಟ ಪಡುತ್ತಿರುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ, ಆದರೆ ಅವರಿಗೆ ಕೆಲಸ ಬೇಕಾಗಿದೆ. ಫುಡ್ ಕಿಟ್ ನೀಡುವ ಮೂಲಕ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮಿಗಿಲಾಗೆ ಕೆಲವರು ಪಬ್ಲಿಸಿಟಿಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಕಣ್ಣೊರೆಸುವ ತಂತ್ರವಾಗಿದೆ,  ನಿಮಗೆ ದಾನ ಮಾಡುವ ಮನಸ್ಸಿದ್ದರೇ ಅದನ್ನು ಪಬ್ಲಿಸಿಟಿ ಮಾಡುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಲಾಕ್‌ಡೌನ್ ಅನ್ನು ಏಪ್ರಿಲ್‌ನಲ್ಲಿ ಮೊದಲೇ ಜಾರಿಗೊಳಿಸಬೇಕಾಗಿತ್ತು. ಜನರು ಮನೆಯೊಳಗೆ ಇರಬೇಕೆಂದು ಸರ್ಕಾರ ಬಯಸಿದರೆ, ಅವರು ಅಗತ್ಯವಿರುವವರಿಗೆ ಸಹಾಯ ಮಾಡಲು ಹೊರಡಬೇಕು.

ಮತಕ್ಕಾಗಿ ಹಣ ನೀಡಲು ಬರುವ ರಾಜಕಾರಣಿಗಳಿಗೆ ಈಗ ಏಕೆ ಬರಲು ಆಗುತ್ತಿಲ್ಲ ಎಂದು ಪ್ರಶ್ನಿಸಿರುವ ರವಿಚಂದ್ರನ್ ನಾನು ಒಬ್ಬ ವ್ಯಕ್ತಿ, ಒಂದು ವೇಳೆ ನನ್ನ ಕೈಯ್ಯಲ್ಲಿ ಒಂದು ರೂಪಾಯಿ ಸಿಕ್ಕರೇ ನಾಳೆಯೇ ಶೂಟಿಂಗ್ ಆರಂಭಿಸುತ್ತೇನೆ, ಲಾಕ್ ಡೌನ್ ಎಲ್ಲವನ್ನು ತಡೆಹಿಡಿದಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!