ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಹೆಸರು ಬದಲಿಸಿದರೂ ಬದುಕುಳಿಯಲಿಲ್ಲ ಪುನೀತ್ ರಾಜಕುಮಾರ್!

ಮೊದಲು ಅಪ್ಪುವಿಗಿದ್ದ ಹೆಸರು ಲೋಹಿತ್ ಆಗಿತ್ತು, ಅಲ್ಪಾಯುಷ್ಯದ ಹೆಸರೆಂದು ಹಿರಿಯರ ಸೂಚನೆಯಂತೆ ಸತ್ಯ ಹರಿಶ್ಚಂದ್ರ ಸಿನಿಮಾ ಬಳಿಕ ಬದಲಿಸಲಾಗಿತ್ತು.

ಮೊದಲು ಅಪ್ಪುವಿಗಿದ್ದ ಹೆಸರು ಲೋಹಿತ್ ಆಗಿತ್ತು, ಅಲ್ಪಾಯುಷ್ಯದ ಹೆಸರೆಂದು ಹಿರಿಯರ ಸೂಚನೆಯಂತೆ ಸತ್ಯ ಹರಿಶ್ಚಂದ್ರ ಸಿನಿಮಾ ಬಳಿಕ ಬದಲಿಸಲಾಗಿತ್ತು.

ಡಾ. ರಾಜ್​ಕುಮಾರ್​ ಅವರು  ಪುನೀತ್​ ಎಂದು ಹೆಸರು ಬದಲಾಯಿಸಿದ್ದರು. ಇದಕ್ಕೆ ಬಹಳ ಮುಖ್ಯ ಕಾರಣವೂ ಇತ್ತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಇದನ್ನು ಕೇಳಿ ಸಾಕಷ್ಟು ಮಂದಿ ಅಚ್ಚರಿ ಹೊರ ಹಾಕಿದ್ದಾರೆ. ಲೋಹಿತಾಶ್ವ ಎಂದರೆ ಅಲ್ಪಾಯುಷಿ ಎಂಬರ್ಥ ಇದೆಯಂತೆ. ಈ ಕಾರಣಕ್ಕೆ ಡಾ. ರಾಜ್​ ಈ ಹೆಸರನ್ನು ಬದಲಿಸಿದ್ದರು.

ರಾಜ್​ಕುಮಾರ್​ ಅವರಿಗೆ ಮಗನಿಗೆ ಲೋಹಿತ್ ಎಂದು ಹೆಸರು ಇಡಬೇಕು ಅನಿಸಿದ್ದು ‘ಸತ್ಯ ಹರಿಶ್ಚಂದ್ರ’ ಸಿನಿಮಾದಿಂದ. ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ. ಈ ಹೆಸರು ರಾಜ್​ಕುಮಾರ್​ಗೆ ತುಂಬಾನೇ ಇಷ್ಟವಾಗಿತ್ತು. ಈ ಕಾರಣಕ್ಕೆ  ಮಗನಿಗೆ ಲೋಹಿತ್ ಎಂದು ಹೆಸರು ಇಟ್ಟಿದ್ದರು ಅಣ್ಣಾವ್ರು. ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ವ ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಈ ಕಾರಣಕ್ಕೆ ರಾಜ್​ಗೆ ಹೆಸರು ಬದಲಿಸಲು ಸೂಚಿಸಿದ್ದರು.

ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರು ಲೋಹಿತ್ ಎಂದು ಹೆಸರಿಟ್ಟ ಬಗ್ಗೆ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ, ಲೋಹಿತ್​ ಅನ್ನೋದು ಅಲ್ಪಾಯುಷಿಗೆ ಇರುವಂತಹ ಹೆಸರು. ಹೀಗಾಗಿ  ಪುನೀತ್ ಎಂದು ಬದಲಿಸಲು ಸೂಚಿಸಿದ್ದರು. ಆಗ ಲೋಹಿತ್ ಅನ್ನೋ ಹೆಸರನ್ನು ಅಣ್ಣಾವ್ರು ಬದಲಿಸಿದ್ದರು. ಈ ಬಗ್ಗೆ ಡಾ. ರಾಜ್ ಕುಟುಂಬದ ಸಂಬಂಧಿ, ನಟ, ಶಾಸಕ ಕುಮಾರ್ ಬಂಗಾರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಬಾಲನಟ ಆಗಿದ್ದಾಗಿನಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದರು. ಆ ದಿನಗಳಲ್ಲಿ ಅವರನ್ನು ಲೋಹಿತ್​ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಬಳಿಕ ಪುನೀತ್​ ರಾಜ್​ಕುಮಾರ್​ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು. ಆದರೆ ಹೆಸರು ಬದಲಾಯಿಸಿದರು ಪುನೀತ್ ಬದುಕುಳಿಯಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ