ಸಿನಿಮಾ ಸುದ್ದಿ

ಪುನೀತ್ ಗೆ ಕೊಟ್ಟ ಅಪಾಯಿಂಟ್ ಮೆಂಟ್ ಗಾಗಿ ಕಾಯುತ್ತೇನೆ: ಅಗಲಿಕೆಗೂ 2 ದಿನ ಮುನ್ನಾ ಸಿಎಂಗೆ ಕರೆ ಮಾಡಿದ್ದರು ಅಪ್ಪು!

Shilpa D

ಬೆಂಗಳೂರು: ಕನ್ನಡ ಹೃದಯ ಮಿಡಿಯುವ ವರೆಗೂ ಅಪ್ಪು ನಿತ್ಯ ನಿರಂತರ ಜೀವಂತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.

'ಮದಗಜ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ ಸಾಧನೆ ಮುಖ್ಯ. ಹಲವಾರು ಸಾಧಕರು ಕಿರಿ ವಯಸ್ಸಿನಲ್ಲಿಯೇ ಅಗಲಿದ್ದಾರೆ. ಆದರೆ ತಮ್ಮ ಹೆಜ್ಜೆ ಗುರುತುಗಳನ್ನು ನೆನಪಿನಂಗಳ ದಲ್ಲಿ ಬಿಟ್ಟು ಹೋಗುತ್ತಾರೆ.

ಅಪ್ಪು ಕೂಡ ನಮ್ಮೆಲ್ಲರಲ್ಲೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ನಟ ಪುನೀತ್ ರಾಜ್ ಕುಮಾರ್ ಕುರಿತು ನುಡಿದರು. ಸ್ವಾಮಿ ವಿವೇಕಾನಂದರ ನುಡಿಯಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ನಿಜವಾದ ಸಾಧಕ ಸಾವಿನ ನಂತರವೂ ಬದುಕುತ್ತಾನೆ. ಅಪ್ಪು ಅಂತಹ ಸಾಧಕರ ಸಾಲಿಗೆ ಸೇರಿದವರು ಎಂದರು.

ಅಗಲಿಕೆಗೆ ಎರಡು ದಿನ ಮುನ್ನ ಪುನೀತ್ ಸಿ ಎಂ ಬಸವರಾಜ ಬೊಮ್ಮಾಯಿಗೆ ಪೋನ್ ಮಾಡಿದ್ದರು. ಅಂದು ಫೋನ್ ಮಾಡಿ ಏನು ಕೇಳಿದ್ದರು ಅನ್ನುವುದನ್ನು ಮುಖ್ಯಮಂತ್ರಿಗಳು  ರಿವೀಲ್ ಮಾಡಿದ್ದಾರೆ. ಅಪ್ಪು ಪೋನ್ ಮಾಡಿ ಮಾತಾಡಿದ್ದರ ಬಗ್ಗೆ ಹೇಳಿದ್ದರು.

ಪುನೀತ್ ರಾಜ್‌ಕುಮಾರ್ ಅಗಲಿದ ಎರಡು ದಿನ ಮುನ್ನವಷ್ಟೇ ಸಿ ಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದ್ದರು.  ಸಿ ಎಂ ಬಳಿ ಒಂದು ಮನವಿಯನ್ನೂ ಮಾಡಿಕೊಂಡಿದ್ದರು. ಅದನ್ನೇ ಬಸವರಾಜ ಬೊಮ್ಮಾಯಿ ಮದಗಜ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ.

"ಪುನೀತ್ ಸಾವಿಗೂ ನನಗೆ ಎರಡು ದಿನ ಮುಂಚೆ ಮಾಡಿದ್ರು. ಮಾಮಾ ಟೂರಿಸಂ ಬಗ್ಗೆ ವೆಬ್‌ ಸೈಟ್ ಮಾಡುತ್ತೇನೆ. ನೀವೇ ಬಂದು ಉದ್ಘಾಟನೆ ಮಾಡಬೇಕು ಅಂದಿದ್ದರು, ಮೊನ್ನೆ ತಾನೆ ಬಂದಿದ್ದೇನೆ. ಮತ್ತೆ ನಾನ್ಯಾಕೆ ಅಂದಿದ್ದೆ. ಇಲ್ಲಾ ನೀವೆ ಬರಬೇಕು. ಆ ಬಗ್ಗೆ ಮಾತಾಡುವುದಕ್ಕೆ ನೀವು ನನಗೆ ಟೈಮ್ ಕೊಡಬೇಕು ಅಂದಿದ್ದರು" ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.

ಅಕ್ಟೋಬರ್ 29ರಂದೇ ಪುನೀತ್ ರಾಜ್‌ಕುಮಾರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಬೇಕಿತ್ತು. ಅಂದೇ ಬಂದು ಟೂರಿಸಂ ವೆಬ್ ಸೈಟ್ ಬಗ್ಗೆ ಮಾತಾನಾಡುತ್ತೇನೆ ಅಂತ ಹೇಳಿದ್ದರು. ಅದರೇ ಅಂದೇ ಪುನೀತ್ ರಾಜ್‌ಕುಮಾರ್ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಪುನೀತ್ ಅಂದುಕೊಂಡಿದ್ದ ವೆಬ್ ಸೈಟ್ ಮೂಲಕ ಅಪ್ಪು ಕಂಡ ಕನಸು ನನಸಾಗಿಯೇ ಉಳಿದು ಹೋಯ್ತು.

ಅಕ್ಟೋಬರ್ 29ರಂದು ಸಿಎಂ ಬಸರಾಜ ಬೊಮ್ಮಾಯಿ ಅರ್ಧ ಗಂಟೆ ಅಪಾಯಿಂಟ್ಮೆಂಟ್ ಕೊಟ್ಟಿದ್ದರು. "ಅಂದು ಪುನೀತ್ ಸಿಎಂ ಭೇಟಿ ಮಾಡಿ ತನ್ನ ಟೂರಿಸಂ ವೆಬ್‌ ಸೈಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಿತ್ತು. ಆದರೆ, ಅಪ್ಪು ಅಂದು ಬರಲೇ ಇಲ್ಲ. ಅಂದು ಕೊಟ್ಟ ಅಪಾಯಿಂಟ್ಮೆಂಟ್‌ಗೆ ನಾನು ಕಾಯಲು ಸಿದ್ಧನಿದ್ದೇನೆ" ಎಂದು ಸಿಎಂ ಹೇಳಿದ್ದಾರೆ.

SCROLL FOR NEXT