ಡಾ ಹಂಸಲೇಖ 
ಸಿನಿಮಾ ಸುದ್ದಿ

'ಸಂಗೀತ ಕಲಹವನ್ನು ತಪ್ಪಿಸುತ್ತದೆ, ಶೀಘ್ರವೇ ಸರಿಗಮಪ ತಂಡವನ್ನು ಸೇರಿಕೊಳ್ಳುತ್ತೇನೆ': ಡಾ. ಹಂಸಲೇಖ

ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ದಲಿತ ಕೇರಿಗಳಿಗೆ ಹೋಗುತ್ತಿದ್ದ ಬಗ್ಗೆ ಮತ್ತು ಅವರ ಆಹಾರ ಪದ್ಧತಿ ಬಗ್ಗೆ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಇಂದು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶ ತೀರ್ಥ(Pejawar shree) ಸ್ವಾಮೀಜಿಗಳು ದಲಿತ ಕೇರಿಗಳಿಗೆ ಹೋಗುತ್ತಿದ್ದ ಬಗ್ಗೆ ಮತ್ತು ಅವರ ಆಹಾರ ಪದ್ಧತಿ ಬಗ್ಗೆ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ(Hamsalekha) ಇಂದು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಹಂಸಲೇಖ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಇತ್ತೀಚೆಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಸಹ ಹಾಜರಾಗಿದ್ದರು. ಈ ಬೆಳವಣಿಗೆಗಳಿಂದ ನೊಂದು ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಹಂಸಲೇಖ ಪರ ಮತ್ತು ವಿರೋಧ ಅಭಿಯಾನಗಳು ಆರಂಭವಾಗಿ ಸರಿಗಮಪ ರಿಯಾಲಿಟಿ ಶೋದಿಂದ ಅವರು ಹೊರಬಂದಿದ್ದಾರೆ, ಅವರನ್ನು ಶೋನ ತೀರ್ಪುಗಾರರ ಸ್ಥಾನದಿಂದ ತೆಗೆದುಹಾಕಬೇಕೆಂಬ ಒತ್ತಾಯಗಳೂ ಸಹ ಕೇಳಿಬಂದಿತ್ತು.

ಇದಕ್ಕೆಲ್ಲಾ ಇಂದು ತೆರೆ ಎಳೆದಿರುವ ಹಂಸಲೇಖ, ನನ್ನ ಆರೋಗ್ಯ ಸ್ಥಿರವಾಗಿದ್ದು, ಸರಿಗಮಪ ಸಂಗೀತ ರಿಯಾಲಿಟಿ ಶೋ ನನ್ನ ಪ್ರೀತಿಯ ಭೂಮಿಕೆ, ಮನಸ್ಸು-ಮನಸ್ಸುಗಳನ್ನು ನೇಯುವ ವೇದಿಕೆ, ತೊರೆಯುವುದಿಲ್ಲ, ಸದ್ಯದಲ್ಲಿಯೇ ತಂಡಕ್ಕೆ ಬೇಗ ಸೇರಿಕೊಳ್ಳುತ್ತೇನೆ ಎಂದು ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ