ಸಿನಿಮಾ ಸುದ್ದಿ

ವಿಜಯ್ ಪ್ರಕಾಶ್ ಹಾಡಿರುವ ಕಲಾವಿದನ ಸೋಲು ಗೆಲುವು ಕುರಿತ 'ಆರಾಮ್ಸೆ' ಆಲ್ಬಂ ಸಾಂಗ್ ವೈರಲ್

ಕನಸುಗಳನ್ನು ಹೊತ್ತು  ಚಿತ್ರರಂಗಕ್ಕೆ ಬರುವ ಕಲಾವಿದನ ಮನಸ್ಸಿನ ತೊಳಲಾಟವನ್ನು ವಿವರಿಸುವ ವಿಡಿಯೋ ಆಲ್ಬಮ್ ಆರಾಮ್ಸೆ (Aaramse)  ಸದ್ಯ ಯೂಟ್ಯೂಬ್‍ನಲ್ಲಿ (You Tube) ವೈರಲ್ ಆಗಿದೆ.

ಬೆಂಗಳೂರು: ಮಾಯಾನಗರಿ ಎಂದು ಕರೆಸಿಕೊಳ್ಳುವ ಸಿನಿಮಾ ರಂಗದಲ್ಲಿ ಕೆಲವರು ರಾತ್ರೋರಾತ್ರಿ ಸ್ಟಾರ್ ಆದರೆ, ಇನ್ನು ಕೆಲವರು ಪ್ರತಿಭೆ ಇದ್ದರೂ ಅವಕಾಶ ಸಿಗದೇ ಕಣ್ಮರೆಯಾಗುತ್ತಾರೆ. ಹೀಗೆ ಕನಸುಗಳನ್ನು ಹೊತ್ತು  ಚಿತ್ರರಂಗಕ್ಕೆ ಬರುವ ಕಲಾವಿದನ ಮನಸ್ಸಿನ ತೊಳಲಾಟವನ್ನು ವಿವರಿಸುವ ವಿಡಿಯೋ ಆಲ್ಬಮ್ ಆರಾಮ್ಸೆ (Aaramse)  ಸದ್ಯ ಯೂಟ್ಯೂಬ್‍ನಲ್ಲಿ (You Tube) ವೈರಲ್ ಆಗಿದೆ.

ಅಭಿಷೇಕ್ ಮಠದ್ ಅವರು ಈ ಹಾಡನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. 'ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಅಂದ ಮಾತ್ರಕ್ಕೆ ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು ಎನ್ನುವ ಅಂಶ ಹಾಡಿನಲ್ಲಿದೆ. 

ಸ್ಯಾಂಡಲ್‌ವುಡ್‌ ಸೇರಿದಂತೆ ಬಹುಭಾಷೆಯಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್, ಈ ಹಾಡಿಗೆ ಧ್ವನಿ ನೀಡಿದ್ದಾರೆ.  

'ಈ ಹಾಡಿನ ಸಾಹಿತ್ಯ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಗಿ, ಅವರು ಖುಷಿಯಿಂದ ಹಾಡಿದರು. ನಂತರ ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದರು. ಗಾಯಕ ವಿಜಯ್​ ಪ್ರಕಾಶ್ ನಮಗೆ ಬಹಳ ಬೆಂಬಲ ನೀಡಿದರು' ಎನ್ನುತ್ತಾರೆ ಅಭಿಷೇಕ ಮಠದ್.

ಅಭಿಷೇಕ್ ಈ ಹಿಂದೆ ದಿಗಂತ್ ಜೊತೆಗೆ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅದಕ್ಕೆ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ನಂತರ ಚಂದನ್ ಶೆಟ್ಟಿ ಜೊತೆಗೆ ಟಕಿಲಾ, ಬಡಪಾಯಿ ಕುಡುಕ ಸಾಂಗ್‌ಗಳನ್ನು ಮಾಡಿದ್ದಾರೆ. ಈಚೆಗೆ ಅದಿತಿ ಪ್ರಭುದೇವ ಅವರೊಂದಿಗೆ ಪರ್ಫೆಕ್ಟ್ ಗರ್ಲ್ ಎಂಬ ಸಾಂಗ್ ಮಾಡಿದ್ದರು ಅಭಿಷೇಕ್‌. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT