ತಮಿಳು ಚಿತ್ರ ಸಾಹಿತಿ ಪಿರೈಸೂದನ್ 
ಸಿನಿಮಾ ಸುದ್ದಿ

ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ನಿಧನ

ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ಚೆನ್ನೈ: ತಮಿಳಿನ ಜನಪ್ರಿಯ ಚಲನಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ತಿರುವನೂರು ಜಿಲ್ಲೆಯ ನನ್ನಿಲಂನಲ್ಲಿ ಫೆಬ್ರವರಿ 6, 1956ರಲ್ಲಿ ಜನಿಸಿದ್ದ  ಪಿರೈಸೂದನ್, 1984 ರಲ್ಲಿ ಬಿಡುಗಡೆಯಾದ ಸಿರೈ ಚಲನಚಿತ್ರಕ್ಕಾಗಿ ದಿವಂಗತ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್ ಸಂಗೀತ ನೀಡಿರುವ ರಸತಿ ರೋಸಪೂ ಹಾಡನ್ನು ಬರೆಯುವ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ರಜನಿಕಾಂತ್ ಗಾಗಿ ಅಭಿನಯದ ರಾಜಾದಿ ರಾಜಾದ ಮೀನಮ್ಮ ಮೀನಮ್ಮ ಸೇರಿದಂತೆ ಹಲವಾರು ಹಿಟ್ ಹಾಡುಗಳನ್ನು ಪಿರೈಸೂದನ್ ಬರೆದಿದ್ದಾರೆ. ಸುಮಾರು 400 ಚಿತ್ರಗಳಿಗಾಗಿ ಸುಮಾರು 1,400 ಹಾಡುಗಳಲ್ಲದೇ, ಸುಮಾರು 5000 ಭಕ್ತಿಗೀತೆಗಳನ್ನು ಬರೆದಿದ್ದಾರೆ. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel