ಕಬ್ಜ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ'ಗೆ ಬಹುಭಾಷಾ ನಟ ನವಾಬ್ ಶಾ ಎಂಟ್ರಿ!

ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ ತನ್ನ ಮೇಕಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರೀಕರಣದ ಹಂತದಲ್ಲಿರುವಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಚಿತ್ರವನ್ನು ಆರ್‌. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. 

ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ ತನ್ನ ಮೇಕಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರೀಕರಣದ ಹಂತದಲ್ಲಿರುವಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಚಿತ್ರವನ್ನು ಆರ್‌. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. 

ಐದನೇ ಹಂತದ ಚಿತ್ರೀಕರಣ ಆರಂಭಿಸಿದೆ. ಚಿತ್ರದಲ್ಲಿ ಬಹುದೊಡ್ಡ ಮಟ್ಟದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ದೊಡ್ಡ ಕ್ಯಾನ್ವಾಸ್‌ನ ಚಿತ್ರ ಇದು. ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಇದನ್ನು ತೆರೆಗೆ ತರಲು ಪ್ಲಾನ್‌ ಮಾಡಲಾಗಿದೆ. ಈ ಕಾರಣಕ್ಕೆ ಬಹುಭಾಷಾ ನಟರ ದೊಡ್ಡ ಬಳಗವೇ ಚಿತ್ರದಲ್ಲಿ ಪಾತ್ರವಹಿಸುತ್ತಿದೆ. ಈಗ ಮತ್ತೊಬ್ಬ ನಟನ ಎಂಟ್ರಿಯಾಗಿದೆ. ನಟ ನವಾಬ್‌ ಶಾ ಬೆಂಗಳೂರಿಗೆ ಬಂದಿಳಿದಿದ್ದು, ಈಗಾಗಲೇ ‘ಕಬ್ಜ’ ಚಿತ್ರೀಕರಣದಲ್ಲಿ ಉಪೇಂದ್ರ ಜತೆ ಭಾಗಿಯಾಗಿದ್ದಾರೆ. ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಡಾನ್‌ ಪಾತ್ರದಲ್ಲಿ ನವಾಬ್‌ ಶಾ ನಟಿಸುತ್ತಿದ್ದಾರೆ.

ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್‌ನ ಅನೇಕ ನಟರನ್ನು ಈ ಚಿತ್ರಕ್ಕಾಗಿ ಕರೆತರುತ್ತಿದ್ದೇವೆ. ಅವರಲ್ಲಿ ಒಬ್ಬರು ನವಾಬ್‌ ಶಾ. ಇವರು ನಾಲ್ಕೈದು ರೌಡಿ ಗ್ಯಾಂಗ್‌ನ ಲೀಡರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ' ಎಂದಿದ್ದಾರೆ ನಿರ್ದೇಶಕ ಆರ್‌. ಚಂದ್ರು.

ಆರ್ ಚಂದ್ರು ದೀಪಾವಳಿಯಂದು ಬಹುಭಾಷಾ ಟೀಸರ್ ಅನ್ನು ಬಹಿರಂಗಪಡಿಸಲು ಯೋಜಿಸುತ್ತಿದ್ದಾರೆ. ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಎಜೆ ಶೆಟ್ಟಿ ಛಾಯಾಗ್ರಹಣ ಮತ್ತು ಮಹೇಶ್ ರೆಡ್ಡಿ ಸಂಕಲನವಿದೆ.

ಕಬ್ಜ ಸಿನಿಮಾದಲ್ಲಿ  ಜಗಪತಿ ಬಾಬು, ರಾಹುಲ್ ದೇವ್, ಅನೂಪ್ ರೇವಣ್ಣ, ಕಬೀರ್ ದುಹಾನ್ ಸಿಂಗ್, ಡ್ಯಾನಿಶ್ ಅಖ್ತರ್ ಸೈಫಿ, ಪ್ರದೀಪ್ ರಾವತ್, ಜಯಪ್ರಕಾಶ್, ಮತ್ತು ಕೋಟ ಶ್ರೀನಿವಾಸ್ ಮುಂತಾದವರು ನಟಿಸಿದ್ದಾರೆ. ಕಬ್ಜ ಚಿತ್ರವನ್ನು ಎಂಟಿಬಿ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT