ಸಲಗ ಮತ್ತು ಕೋಟಿಗೊಬ್ಬ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಆಯುಧ ಪೂಜೆ ದಿನ ಬಂದ 'ಸಲಗ'; ಪ್ರದರ್ಶನ ಕಾಣದ ಕೋಟಿಗೊಬ್ಬ-3, ಅಭಿಮಾನಿಗಳ ನಿರಾಸೆ-ಆಕ್ರೋಶ

ಕೊರೋನಾ ಎರಡನೇ ಅಲೆ ತಗ್ಗಿದ ನಂತರ ಸರ್ಕಾರ ಥಿಯೇಟರ್ ಗಳಲ್ಲಿ ಶೇಕಡಾ 100ರ ಆಸನ ಭರ್ತಿಗೆ ಅನುಮತಿ ನೀಡಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ 'ನಿನ್ನ ಸನಿಹಕೆ' ಚಿತ್ರ ಬಿಡುಗಡೆಯಾಗಿ ಇಂದು ನವರಾತ್ರಿಯ ಆಯುಧ ಪೂಜೆಯ ಶುಭದಿನ ಎರಡೆರಡು ಚಿತ್ರಗಳು ತೆರೆಗೆ ಬರುತ್ತಿವೆ.

ಬೆಂಗಳೂರು: ಕೊರೋನಾ ಎರಡನೇ ಅಲೆ ತಗ್ಗಿದ ನಂತರ ಸರ್ಕಾರ ಥಿಯೇಟರ್ ಗಳಲ್ಲಿ ಶೇಕಡಾ 100ರ ಆಸನ ಭರ್ತಿಗೆ ಅನುಮತಿ ನೀಡಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ 'ನಿನ್ನ ಸನಿಹಕೆ' ಚಿತ್ರ ಬಿಡುಗಡೆಯಾಗಿ ಇಂದು ನವರಾತ್ರಿಯ ಆಯುಧ ಪೂಜೆಯ ಶುಭದಿನ ಎರಡೆರಡು ಚಿತ್ರಗಳು ತೆರೆಗೆ ಬರುತ್ತಿವೆ.

ಅದು ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರಗಳು. ದುನಿಯಾ ವಿಜಯ್ ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್ ಗಳ ಮುಂದೆ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಚಿತ್ರ ಗೆಲ್ಲಲಿ ಎಂದು ಆಶಿಸಿ ಹಾರೈಸುತ್ತಿದ್ದಾರೆ.

ಕೋಟಿಗೊಬ್ಬ-3 ಬಿಡುಗಡೆ ಸಂಶಯ?: ಆದರೆ ಕೋಟಿಗೊಬ್ಬ-3 ಚಿತ್ರಕ್ಕೆ ಥಿಯೇಟರ್ ಗಳ ಮುಂದೆ ಬೆಳ್ಳಂಬೆಳಗ್ಗೆ ಬಂದ ಕಿಚ್ಚನ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಕೋಟಿಗೊಬ್ಬ-3 ಬೆಳಗಿನ ಶೋ ಪ್ರದರ್ಶನವಾಗಿಲ್ಲ, ಪ್ರೇಕ್ಷಕರಿಗೆ ಟಿಕೆಟ್ ಸಿಕ್ಕಿಲ್ಲ. ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರ ಗಾಂಧಿನಗರ ಬಳಿಯಿರುವ ಕಚೇರಿಗೆ ಮುತ್ತಿಗೆ ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಡಾ ವಿಷ್ಣುವರ್ಧನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT