ಸಿನಿಮಾ ಸುದ್ದಿ

ಆಸ್ಕರ್ 2022 ಪ್ರಶಸ್ತಿ: ಭಾರತದಿಂದ ತಮಿಳಿನ 'ಕೂಳಂಗಳ್'ಸಿನಿಮಾ ಅಧಿಕೃತ ಎಂಟ್ರಿ

Nagaraja AB

ನವದೆಹಲಿ: ಪಿ.ಎಸ್. ವಿನೋದ್ ರಾಜ್ ನಿರ್ದೇಶನದ  'ಕೂಳಂಗಳ್' ತಮಿಳು ಚಿತ್ರ  94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿಯಾಗಿದೆ.

ಮದ್ಯ ವ್ಯಸನಿ ಪತಿ, ಧೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಬಿಟ್ಟು ಹೋದ ನಂತರ ತನ್ನ ಮಗನೊಂದಿಗೆ ಆಕೆಯನ್ನು ಪತ್ತೆ ಹಚ್ಚಿ, ಮನೆಗೆ ಕರೆದುಕೊಂಡು ಬರುತ್ತಾನೆ. ಇದು ಈ ಸಿನಿಮಾದ ಕಥಾ ಹಂದರವಾಗಿದೆ. 

ವಿಘ್ನೇಶ್ ಶಿವನ್ ಮತ್ತು ನಯನ ತಾರಾ ನಿರ್ಮಿಸಿರುವ ಈ ಚಿತ್ರದಲ್ಲಿ ಹೊಸಬರ ತಾರಾ ಬಳಗವಿದೆ. ಶಿವಾನ್ ಟ್ವೀಟರ್ ನಲ್ಲಿ, ಚಿತ್ರ ಆಯ್ಕೆ ಕುರಿತ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 

ಇದನ್ನು ಕೇಳಲು ಅಲ್ಲಿ ಅವಕಾಶವಿದೆ! ನಮ್ಮ ಜೀವನದ ಕನಸು ನನಸಾಗಲು ಇನ್ನು ಎರಡು ಹಜ್ಜೆ ಮಾತ್ರ ಬಾಕಿಯಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಸಲ್ಲಿಸುವುದಾಗಿ ವಿನೋದ್ ರಾಜ್ ಹೇಳಿದ್ದಾರೆ.  

ಈ ವರ್ಷದ ಆರಂಭದಲ್ಲಿ ರೊಟ್ಟರ್ ಡಾಮ್ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಚಿತ್ರಕ್ಕಾಗಿ ಅತ್ಯುನ್ನತ ಟೈಗರ್ ಪ್ರಶಸ್ತಿಯನ್ನು 'ಕೂಳಂಗಳ್'  ಪಡೆದುಕೊಂಡಿತ್ತು. ಲಾಸ್ ಏಂಜಲೀಸ್ ನಲ್ಲಿ ಮಾರ್ಚ್ 22, 2022ರಲ್ಲಿ 94ನೇ ಆಸ್ಕರ್ ಅಕಾಡೆಮಿ ಅವಾರ್ಡ್ ಪ್ರದಾನ ಸಮಾರಂಭ ನಡೆಯಲಿದೆ.

SCROLL FOR NEXT