ಭಜರಂಗಿ 2 ಚಿತ್ರದಲ್ಲಿ ನಟಿ ಶೃತಿ 
ಸಿನಿಮಾ ಸುದ್ದಿ

'ಭಜರಂಗಿ 2' ಸಿನಿಮಾ 'ಭಜರಂಗಿ'ಯ ಮುಂದುವರಿದ ಭಾಗವಲ್ಲ: ನಿರ್ದೇಶಕ ಹರ್ಷ

ನೃತ್ಯ ಸಂಯೋಜಕರಾಗಿ ಹೆಸರು ಮಾಡಿರುವ ಹರ್ಷ ಅವರು ನಿರ್ದೇಶಕರಾಗಿಯೇ ಜನಪ್ರಿಯರಾಗಿದ್ದಾರೆ. ಎರಡೂ ಕೆಲಸ ಜನರಿಗೆ ಮನರಂಜನೆ ನೀಡುವುದಾಗಿದ್ದು ವಿಭಿನ್ನ ರೀತಿಯಲ್ಲಿ ಎಂದು ಹರ್ಷ ಭಾವಿಸಿದ್ದಾರೆ. 

ನೃತ್ಯ ಸಂಯೋಜಕರಾಗಿ ಹೆಸರು ಮಾಡಿರುವ ಹರ್ಷ ಅವರು ನಿರ್ದೇಶಕರಾಗಿಯೇ ಜನಪ್ರಿಯರಾಗಿದ್ದಾರೆ. ಎರಡೂ ಕೆಲಸ ಜನರಿಗೆ ಮನರಂಜನೆ ನೀಡುವುದಾಗಿದ್ದು ವಿಭಿನ್ನ ರೀತಿಯಲ್ಲಿ ಎಂದು ಹರ್ಷ ಭಾವಿಸಿದ್ದಾರೆ. 

ನೃತ್ಯ ಸಂಯೋಜನೆಯಾಗಲಿ ಅಥವಾ ನಿರ್ದೇಶನವಾಗಲಿ ಎರಡರಲ್ಲಿಯೂ ಹೇಳಿಕೊಡುವುದು ಪ್ರಧಾನವಾಗಿರುತ್ತದೆ. ವ್ಯತ್ಯಾಸವೆಂದರೆ ಸಮಯವಷ್ಟೆ. ನನ್ನ ಕೊರಿಯೊಗ್ರಫಿ 4 ನಿಮಿಷಗಳಲ್ಲಿ ಪ್ರಸ್ತುತಪಡಿಸಿದರೆ ನಿರ್ದೇಶನಕ್ಕೆ ಎರಡೂವರೆ ಗಂಟೆ ಸಮಯ ಬೇಕು ಎಂದು ಹೇಳುತ್ತಾರೆ.

ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರ ನಾಳೆ ತೆರೆಗೆ ಬರುತ್ತಿದೆ. 2013ರಲ್ಲಿ ತೆರೆಗೆ ಬಂದ ಭಜರಂಗಿ ಚಿತ್ರದ ಮುಂದುವರಿದ ಕಥೆ ಭಜರಂಗಿ 2 ಅಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ಆ ಚಿತ್ರದ ಹೆಸರಿನ ಜನಪ್ರಿಯತೆಗೆ ಭಜರಂಗಿ 2 ಎಂದಿಟ್ಟಿದ್ದೇವೆ ಎಂದರು.

ಪ್ರಕಾರವು ಒಂದೇ ಆಗಿರಬಹುದು, ಆದರೆ ಪ್ರತ್ಯೇಕವಾಗಿ, ಈ ಚಲನಚಿತ್ರವು ಫ್ಯಾಂಟಸಿ ಆಧಾರಿತವಾಗಿದೆ. ಭಜರಂಗಿಯಲ್ಲಿ ಜನರಿಗಾಗಿ ಉಳಿದುಕೊಂಡ ನಾಯಕ ಈ ಚಿತ್ರದಲ್ಲೂ ಹಾಗೆಯೇ ಉಳಿಯುತ್ತಾನೆ, ಆದರೆ ವಿಭಿನ್ನ ಪರಿಕಲ್ಪನೆಯೊಂದಿಗೆ ಇರುತ್ತಾನೆ ಎಂದು ನಿರ್ದೇಶಕರು ವಿವರಿಸುತ್ತಾರೆ.

ತಂಡದ ಬೆಂಬಲವಿಲ್ಲದೆ ಶಿವರಾಜಕುಮಾರ್ ಅಭಿನಯದ ಈ ಭಜರಂಗಿ 2 ಚಿತ್ರ ಸಾಧ್ಯವಾಗುತ್ತಿರಲಿಲ್ಲ. ಶಿವಣ್ಣ ಮತ್ತು ನಿರ್ಮಾಣ ಸಂಸ್ಥೆ ಜಯಣ್ಣ ಫಿಲಂಸ್‌ನ ಬೆಂಬಲ ಸಾಕಷ್ಟು ಇತ್ತು. “ನಾನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಚಿತ್ರದ ಎರಡನೇ ನಾಯಕ ಎಂದು ಪರಿಗಣಿಸುತ್ತೇನೆ, ಅವರು ಅದ್ಭುತವಾದ ಸಂಗೀತ ನೀಡಿದ್ದಾರೆ. ಜುಪಿಟರ್ ಗ್ರಾಫಿಕ್ಸ್‌ನ ಇಳಂಗೋವನ್ ಮತ್ತು ಸುಬಿಶ್ ಅವರ ವಿಶುವಲ್ ಎಫೆಕ್ಟ್‌ಗಳಲ್ಲಿ ಅದ್ಭುತ ಪ್ರಯತ್ನ ಸಾಗಿದೆ, ಇದು ಭಜರಂಗಿ 2 ರ ಮತ್ತೊಂದು ಹೈಲೈಟ್ ಆಗಿರುತ್ತದೆ ಎನ್ನುತ್ತಾರೆ ಹರ್ಷ.

ಇನ್ನು ಪ್ರಕಾಶ್ ಅವರ ಮೇಕಪ್, ರಾಜು ಅವರ ಕೇಶವಿನ್ಯಾಸ, ವಸ್ತ್ರ ವಿನ್ಯಾಸಕರು - ಯೋಗಿ ಜಿ ರಾಜ್ ಮತ್ತು ಗಣೇಶ್ ಮತ್ತು ಸಿನಿಮಾಟೋಗ್ರಾಫರ್ ಜೆ ಸ್ವಾಮಿ ಕಲಾವಿದರನ್ನು ಮತ್ತು ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದ್ದಾರೆ ಎಂದರು.

ಚಿತ್ರದಲ್ಲಿ ಶೃತಿ, ಭಾವನ, ಲೋಕಿ ಮತ್ತು ಇತರರನ್ನು ತುಂಬಾ ವಿಭಿನ್ನ ಪಾತ್ರವಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಈ ಚಿತ್ರದಲ್ಲಿ ತೆರೆಯಲ್ಲಿ ಕಾಣುತ್ತಿದ್ದಾರೆ. ನಿರ್ದೇಶಕನಾಗಿ ನಾನು ಪಾತ್ರ ಕಲಾವಿದರಿಗಿಂತ ಹೆಚ್ಚು ಗುರುತು ಪಡೆದಾಗ ಸಂಭ್ರಮಿಸುತ್ತೇನೆ. ಅದು ಈ ಚಿತ್ರದಲ್ಲಿದೆ ಎಂದರು.

ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಚೆಲುವರಾಜ, ಪ್ರಸನ್ನ, ಗಿರೀಶ್ ಮೊದಲಾದವರಿದ್ದಾರೆ. ಥಿಯೇಟರ್ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಕಲಾವಿದರಲ್ಲಿ ಹುದುಗಿರುವ ಶಕ್ತಿಯನ್ನು ಹೊರಹೊಮ್ಮಿಸಲು ಸಹಾಯವಾಗಲಿದೆ. ಅನೇಕ ಚಿತ್ರಗಳಲ್ಲಿ ಹೀರೋ ಮತ್ತು ವಿಲನ್ ಗಳ ಹಿಂದೆ ಸಾವಿರಾರು ಕಲಾವಿದರು ಇರುತ್ತಾರೆ ಅವರಲ್ಲಿ ನಟಿಸುವ ಶಕ್ತಿಯಿರುತ್ತದೆ, ಆದರೆ ಬೆಳಕಿಗೆ ಬಂದಿರುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಹರ್ಷ.

ನಾನು ಕೂಡ ಒಂದು ಕಾಲದಲ್ಲಿ ಹಿಂದೆ ನಿಂತುಕೊಂಡು ಡ್ಯಾನ್ಸ್ ಮಾಡುತ್ತಿದೆ. ಹೀಗಾಗಿ ನನಗೆ ಇಂತಹ ಕಲಾವಿದರ ಬಗ್ಗೆ ಅರ್ಥವಾಗುತ್ತದೆ. ರಸ್ತೆಗಳಲ್ಲಿ ಕೆಲವರನ್ನು ನಾನು ಗುರುತಿಸಿದ್ದೇನೆ, ಅಂತವರಲ್ಲಿ ಕೆಲವರು ತೆರೆ ಮೇಲೆ ಸೊಗಸಾಗಿ ಕಾಣಬಹುದು. ಅಂತವರನ್ನು ಹುಡುಕಿ ಕೂಡಲೇ ಸಂಪರ್ಕಿಸಿದ್ದೇನೆ. ಆದರೆ ನಾನು ಸಂಪರ್ಕಿಸಿದ ರೀತಿ ಅವರಿಗೆ ಭಯವಾಗಿದೆ. ಅವರನ್ನು ಹಿಡಿಯಲು ಹೀಗೆ ಮಾಡುತ್ತಿದ್ದೇನೆ ಎಂದು ಭಯಪಟ್ಟುಕೊಂಡಿದ್ದಾರೆ, ಆದರೆ ಇದೆಲ್ಲವೂ ಸಿನೆಮಾ ಮೇಲಿನ ಪ್ರೀತಿಗಾಗಿ ಎಂದು ಹರ್ಷ ಮಾತು ಮುಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT