ಪ್ರುಭುದೇವಾ, ಬಾಲಕೃಷ್ಣ, ಶಿವಣ್ಣ 
ಸಿನಿಮಾ ಸುದ್ದಿ

ಪುನೀತ್  ಪಾರ್ಥಿವ ಶರೀರ ನೋಡಿ ಕಣ್ಣೀರು ಹಾಕಿದ ಸೂಪರ್ ಸ್ಟಾರ್ ಬಾಲಕೃಷ್ಣ, ಪ್ರಭುದೇವಾ

ತೆಲುಗು ಚಿತ್ರರಂಗದ ದಿಗ್ಗಜ ನಟರಾದ ನಂದಮೂರಿ ಬಾಲಕೃಷ್ಣ, ಪ್ರಭುದೇವಾ ಅವರ ಸಹೋದರ ಪ್ರಸಾದ್, ರಾಣಾ ದಗ್ಗುಬಾಟಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. 

ಬೆಂಗಳೂರು: ಕಂಠೀರವ ಸ್ಟೇಡಿಯಂನಲ್ಲಿ  ಸ್ಯಾಂಡಲ್ ವುಡ್ ಸೇರಿ ಭಾರತೀಯ ಚಿತ್ರರಂಗದ  ವಿವಿಧ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪುನೀತ್ ಅವರ ಸ್ನೇಹಿತರು, ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ ಅಗಲಿದ ನಟನ ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ತೆಲುಗು ಚಿತ್ರರಂಗದ ದಿಗ್ಗಜ ನಟರಾದ ನಂದಮೂರಿ ಬಾಲಕೃಷ್ಣ, ಪ್ರಭುದೇವಾ ಅವರ ಸಹೋದರ ಪ್ರಸಾದ್, ರಾಣಾ ದಗ್ಗುಬಾಟಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. 

ಶಿವಣ್ಣರನ್ನು ತಬ್ಬಿಕೊಂಡು ಗೋಳಾಡಿದ ನಂದಬಾರಿ ಬಾಲಕೃಷ್ಣ, ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿಗೆ ಸಾಂತ್ವನ ಹೇಳಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಂದೇ ತಾಯಿ ಮಕ್ಕಳಲ್ಲಿದ್ದರೂ ಸಹೋದರರಂತೆ ಇದ್ದೇವು.  ದೇವರು ಏಕೆ ಇಂತಹ ಅನ್ಯಾಯ ಮಾಡಿದ ಅನಿಸುತ್ತಿದೆ.  ಪುನೀತ್ ಕಲಾ ಸೇವೆಗೆ ಜೊತೆಗೆ ಸಮಾಜ ಸೇವೆ ಮಾಡಿದ್ದಾರೆ, ಕುಣ್ಣು ಕೂಡಾ ದಾನ ಮಾಡಿದ್ದಾರೆ. ಲೇಪಾಕ್ಷಿಗೆ ಹಲವು ಬಾರಿ ಬಂದಿದ್ದರು. ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸುತ್ತಿದ್ದರೂ ಬರುತ್ತಿದ್ದರು. ಇಂದು ಅವರು ನಮ್ಮನ್ನು ಆಗಲಿರಬಹುದು. ಆದರೆ,  ಮನಸ್ಸಿನಲ್ಲಿ ಶಾಶ್ವತವಾಗಿ  ಇರುತ್ತಾರೆ ಎಂದು ಕಂಬನಿ ಮಿಡಿದರು.

ಪುನೀತ್ ನನ್ನನ್ನು ಮಾಮ ಎಂದು ಕರೆಯುತ್ತಿದ್ದರು. ಮೈಸೂರಿನಲ್ಲಿ ರಾಜ ಕುಮಾರ್ ಚಿತ್ರವನ್ನು ನೋಡಿದ್ದೆ, ಅವರ ನಿಧನದಿಂದ ದೇಶ, ಹಾಗೂ ನಾಡಿಗೆ ಅಪಾರ ನೋವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT