ನಟ ಧ್ರುವನ್ ಮತ್ತು ನಟಿ ಸೋನಾಲ್ 
ಸಿನಿಮಾ ಸುದ್ದಿ

'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ನಟ ಧ್ರುವನ್ ಅವರು ಈ ಹಿಂದೆ ಐರಾವತ ಮತ್ತು ತಾರಕ್  ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ಭಗವಾನ್ ಶ್ರೀಕೃಷ್ಣ ಪರಮಾತ್ಮ ಚಿತ್ರದ ಮೂಲಕ ಪಾದಾರ್ಪಣೆ ಮಾಡಲು ಹೊರಟಿರುವ ನಟ ಧ್ರುವನ್ ಬೆಂಗಳೂರಿನಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ್ದಾರೆ. 

ಧ್ರುವನ್ ನಟನೆಯ ಚೊಚ್ಚಲ ಚಿತ್ರ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. 

ನಟ ಧ್ರುವನ್ ಅವರು ಈ ಹಿಂದೆ ಐರಾವತ ಮತ್ತು ತಾರಕ್  ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ಭಗವಾನ್ ಶ್ರೀಕೃಷ್ಣ ಪರಮಾತ್ಮ ಚಿತ್ರದ ಮೂಲಕ ಪಾದಾರ್ಪಣೆ ಮಾಡಲು ಹೊರಟಿರುವ ನಟ ಧ್ರುವನ್ ಬೆಂಗಳೂರಿನಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ್ದಾರೆ. 

"ನಾವು 10 ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ, ಇದು ಉತ್ತಮ ಅನುಭವವಾಗಿದೆ" ಎಂದು ಧ್ರುವನ್ ಹೇಳುತ್ತಾರೆ.

ಈ ಹಿಂದೆ ಕಥಾ ವಿಚಿತ್ರ ಮತ್ತು ಚಿತ್ರದಲ್ಲಿ ನಿರ್ದೇಶನ ಮಾಡಿದ್ದ ಅನುಪ್ ಆಂಟನಿ ಅವರ ಮೂರನೇ ನಿರ್ದೇಶನದ ಚಿತ್ರ ಇದು. ಭಾರತ್ ಸಿನಿ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದಲ್ಲಿ ರಾಬರ್ಟ್-ಫೇಮ್ ಸೋನಾಲ್ ಮೊಂಟೆರೋ ನಟಿಸಿದ್ದಾರೆ. ಚಿತ್ರದ ಕೆಲವು ಸ್ಟಿಲ್‌ಗಳನ್ನು ಅನುಪ್ ಹಂಚಿಕೊಂಡಕೊಂಡಿದ್ದಾರೆ.

ಉಳಿದಂತೆ ಶೋಭರಾಜ್, ಯಶ್ ಶೆಟ್ಟಿ, ಯಶಸ್ ಸೂರ್ಯ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಸ್ವಾತಿ ಮತ್ತು ಬಾಲರಾಜವಾಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ನಮ್ಮ ಮುಂದಿನ ವೇಳಾಪಟ್ಟಿ ಮೈಸೂರಿನಲ್ಲಿ ನಡೆಯಲಿದೆ,

"ಭಗವಾನ್ ಶ್ರೀ ಕೃಷ್ಣ ಪರಮಾತ್ಮರ  ಲೋಕಲ್ ಕಥೆಯಾಗಿದ್ದು, ನಮ್ಮ ಸುತ್ತಮುತ್ತಲೇ ನಡೆಯುವ ಕಥೆಯಾಗಿದೆ. ಲೋಕಲ್ ಹುಡುಗನ ಪಾತ್ರದಲ್ಲಿ ಧ್ರುವನ್ ನಟಿಸಿದ್ದು, ಸೋನಾಲ್ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಅರುಣ್ ಸುರೇಶ್ ಮತ್ತು ಮನು ಗೌಡ ನಿರ್ವಹಿಸಲಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT