ಆಶಿಕಾ ರಂಗನಾಥ್ 
ಸಿನಿಮಾ ಸುದ್ದಿ

ಪಿಆರ್ ಕೆ ಬ್ಯಾನರ್ ನ ಮೆಡಿಕಲ್ ಥ್ರಿಲ್ಲರ್ 'O2' ನಲ್ಲಿ ಆಶಿಕಾ ರಂಗನಾಥ್!

ಕಮರ್ಷಿಯಲ್ ಸಿನಿಮಾ ಮತ್ತು ವಿಷಯಾಧಾರಿತ ಕತೆಗಳ ನಡುವೆ ಹಗ್ಗ ಜಗ್ಗಾಟ ನಡೆಸುತ್ತಿರುವ ನಟಿ ಆಶಿಕಾ ರಂಗನಾಥ್, ಪಿಆರ್ ಕೆ ಪ್ರೊಡಕ್ಷನ್ ನ ಮೆಡಿಕಲ್ ಥ್ರಿಲ್ಲರ್ 'O2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಮರ್ಷಿಯಲ್ ಸಿನಿಮಾ ಮತ್ತು ವಿಷಯಾಧಾರಿತ ಕತೆಗಳ ನಡುವೆ ಹಗ್ಗ ಜಗ್ಗಾಟ ನಡೆಸುತ್ತಿರುವ ನಟಿ ಆಶಿಕಾ ರಂಗನಾಥ್, ಪಿಆರ್ ಕೆ ಪ್ರೊಡಕ್ಷನ್ ನ ಮೆಡಿಕಲ್ ಥ್ರಿಲ್ಲರ್ 'O2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಾಘವ್ ಮತ್ತು ಪ್ರಶಾಂತ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ನಟ ಪುನೀತ್ ರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್ ಕೆ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಒಬ್ಬ ಕಲಾವಿದನಾಗಿ ನನ್ನ ಅನುಭವದೊಂದಿಗೆ, ನನ್ನ ಸ್ಕ್ರಿಪ್ಟ್ ಆಯ್ಕೆಗಳು ಹೇಗೆ ಬದಲಾಗಿವೆ ಎಂಬುದನ್ನು ನಾನು ನೋಡಿದ್ದೇನೆ. ಮೇಲಾಗಿ, ವಿಷಯ ಆಧಾರಿತ ಸಿನಿಮಾ, ಒಟಿಟಿ ಯಲ್ಲಿ ರಿಲೀಸ್ ನೊಂದಿಗೆ ಪಾಲ್ಗೋಳ್ಳಲು ಇದು ಸಕಾಲ ಎಂದು ನಾನು ಭಾವಿಸಿದೆ, ಮತ್ತು O2 ಆ ನಿಟ್ಟಿನಲ್ಲಿ ನನ್ನ ಮೊದಲ ಪ್ರಯತ್ನವಾಗಿದೆ ಎಂದು ನಟಿ ಆಶಿಕಾ ರಂಗನಾಥ್ ಹೇಳಿದ್ದಾರೆ.

ಸದ್ಯ ತಮಿಳು ಸಿನಿಮಾದಲ್ಲಿ ಆಶಿಕಾ ಬ್ಯುಸಿಯಾಗಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಗುಣಂ ನಿರ್ದೇಶನ ಸಿನಿಮಾದಲ್ಲಿ ಅಥರ್ವ ಮುರುಳಿಗೆ ನಾಯಕಿಯಾಗಿದ್ದಾರೆ.  ರಾಘವ್ ಮತ್ತು ಪ್ರಶಾಂತ್ ಬರೆದಿರುವ ಕಥೆ ನನಗೆ ತುಂಬಾ ಇಷ್ಟವಾಯಿತು.

"ಸಾಮಾನ್ಯವಾಗಿ, ನಾಯಕಿಯ ಪಾತ್ರವವನ್ನು  ಪಾತ್ರವನ್ನು ಬಲಿಪಶುವಾಗಿ ತೋರಿಸಲಾಗುತ್ತದೆ. O2 ನಾನು ಸಾಮಾನ್ಯ ನಾಯಕಿಯಾಗಿ ಕಾಣಿಸಿಕೊಳ್ಳದ ಚಿತ್ರವಾಗಿದೆ ಎಂದು ಹೇಳಿದ್ದಾರೆ.

O2 ಸಿನಿಮಾ ನನಗೆ ವಿಶೇಷ ಪಾತ್ರ ನೀಡಿದೆ, ಈ ಕಥೆ ನನಗೆ ತುಂಬಾ ಹತ್ತಿರವಾಗಿದೆ, ಸದ್ಯ ರೈಮೋ, ಅವತಾರ್ ಪುರುಷ ಮತ್ತು ಮದಗಜ ಸಿನಿಮಾಗಳಲ್ಲಿ ಆಶಿಕಾ ನಟಿಸುತ್ತಿದ್ದಾರೆ. ವೈವಿಧ್ಯಮಯವಾದ ಕಥೆಗಳೊಂದಿಗೆ ತಮ್ಮ ಬಹುಮುಕ ಪ್ರತಿಬೆಯನ್ನು ತೋರಿಸಲು ಆಶಿಕಾ ಸಿದ್ದರಾಗುತ್ತಿದ್ದಾರೆ. 

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ ಮುಂದಿನ ಚಿತ್ರ O2, ಕವಲುದಾರಿ, ಮಾಯಾಬಜಾರ್ ಮತ್ತು ಫ್ರೆಂಚ್ ಬಿರಿಯಾನಿ ನಂತರ, ಅವರ ಬ್ಯಾನರ್ ನಿಂದ ಬರುವ ಮತ್ತೊಂದು ಆಸಕ್ತಿದಾಯಕ  ಸಿನಿಮಾವಾಗಿದೆ. ತಂಡವು ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ, ಅಕ್ಟೋಬರ್‌ನಲ್ಲಿ ಪ್ರಾಜೆಕ್ಟ್ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT