ಸಿನಿಮಾ ಸುದ್ದಿ

ಆಗಸ್ಟ್‌ 6 ರಿಂದ ಒಟಿಟಿಯಲ್ಲಿ ಕನ್ನಡ ಬಿಗ್ ಬಾಸ್ ಮೊದಲ ಸೀಸನ್: ಈ ಬಗ್ಗೆ ಸುದೀಪ್ ಹೇಳಿದ್ದೇನು? 

Shilpa D

ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿನಲ್ಲಿರುವ ನಟ ಕಿಚ್ಚ ಸುದೀಪ್, ಬಿಗ್ ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್ ನಡೆಸಿಕೊಳ್ಳಲು ಸಜ್ಜಾಗಿದ್ದಾರೆ.

ಕನ್ನಡ ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ವೂಟ್ ಒಟಿಟಿಯಲ್ಲಿ ಬಿಗ್ ಬಾಸ್‌ನ ಮೊದಲ ಸೀಸನ್ ಆರಂಭ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 6 ರಿಂದ ಈ ರಿಯಾಲಿಟಿ ಶೋ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಇದೂವರೆಗೂ ಟಿವಿಯಲ್ಲಿ ನೋಡಿದವರಿಗೆ ಒಟಿಟಿಯಲ್ಲಿ ಈ ಸೀಸನ್ ಹೇಗಿರುತ್ತೆ? ಅನ್ನೋ ಕುತೂಹಲವಂತೂ ಇದ್ದೇ ಇರುತ್ತೆ.

24 ಗಂಟೆ ಪ್ರಸಾರ ಆಗುವ ರಿಯಾಲಿಟಿ ಶೋ ಅಂದಾಗ ಅದರದ್ದೇ ಸವಾಲುಗಳಿರುತ್ತೆ. ಈ ವೇಳೆ ಕೆಲವು ದೃಶ್ಯಗಳಿಗೆ, ಡೈಲಾಗ್‌ಗಳಿಗೆ ಕತ್ತರಿ ಹಾಕುವುದು ಅಸಾಧ್ಯ. ಇದಕ್ಕೆ ತಂಡ ಹೇಗೆ ಸಿದ್ಧವಾಗಿದೆ? ಅನ್ನೋ ಕುತೂಹಲವಿದ್ದೇ ಇರುತ್ತೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಬಿಗ್ ಬಾಸ್ ಮೊದಲ ಸೀಸನ್‌ಗೆ ಎದುರಾಗುವ ಸವಾಲುಗಳ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಬೀಪ್ ಇರೋದೇ ಇಲ್ಲ ಎಂದು ಹೇಳಿದ್ದಾರೆ.ಈ ಬಿಗ್ ಬಾಸ್ ಒಟಿಟಿ ಸೀಸನ್‍ನಲ್ಲಿ ಬಿಗ್‍ಬಾಸ್ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದರ ಕುರಿತು ವೀಕ್ಷಕರು ಅಂತಿಮ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅವರು, 24/7 ಸ್ಪರ್ಧಿಗಳನ್ನು ನೋಡುತ್ತಾರೆ ಮತ್ತು ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತಾರೆ. ಇದು ಸ್ಪರ್ಧಿಗಳು ಆಟವನ್ನು ಆಡುವ ವಿಧಾನವನ್ನು ಬದಲಾಯಿಸುತ್ತದೆ. ಇದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ’’ ಎಂದು ಹೇಳಿದರು.

ವಯಾಕಾಂ18 ರ ಕನ್ನಡ ಕ್ಲಸ್ಟರ್‍ ಬ್ಯುಸಿನೆಸ್ ಹೆಡ್ ಪರಮ್ ಅವರು ಮಾತನಾಡಿ, "ಈ ಸ್ಪರ್ಧೆಯಲ್ಲಿ ನಮಗೆ ಉತ್ತಮ ಸ್ಪರ್ಧಿಗಳ ಮಿಶ್ರಣ ದೊರೆತಿದೆ. ಈ ಮನೆಯೊಳಗಿರುವವರು ಯುವ ಮತ್ತು ಡಿಜಿಟಲ್ ಸ್ನೇಹಿಯಾಗಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದೇವೆ. 24/7 ಲೈವ್ ಸ್ಟ್ರೀಮಿಂಗ್ ಇರುವುದರಿಂದ ಹೆಚ್ಚು ಸಂವಾದಾತಕತೆಯಿಂದ ಕೂಡಿರುತ್ತದೆ. ಈ ಮೂಲಕ ಆಗಸ್ಟ್ 6 ರಿಂದ ರೋಮಾಂಚಕಾರಿ ಪ್ರಯಾಣ ಆರಂಭವಾಗಲಿದೆ ಎಂಬ ಖಾತರಿ ನನಗಿದೆ" ಎಂದರು.

6 ವಾರಗಳ ಕಾಲ ನಡೆಯಲಿರುವ ಕಾರ್ಯಕ್ರಮವು ಸುಮಾರು 16 ಸ್ಪರ್ಧಿಗಳನ್ನು ಹೊಂದಿರುತ್ತದೆ. ಹಾಗೂ ಶೋನಲ್ಲಿ ಒಂದಕ್ಕಿಂತ ಹೆಚ್ಚು ವಿಜೇತರು ಇರುತ್ತಾರೆ. ವಿಜೇತರು ಒಟಿಟಿ ಕಾರ್ಯಕ್ರಮದ ನಂತರ ನಡೆಯಲಿರುವ ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಗಳಾಗಿ ಪ್ರವೇಶಿಸಲು ಅವಕಾಶವನ್ನು ಪಡೆಯುತ್ತಾರೆ.

SCROLL FOR NEXT