ಸುದೀಪ್ 
ಸಿನಿಮಾ ಸುದ್ದಿ

26 ವರ್ಷದ ವೃತ್ತಿ ಜೀವನದಲ್ಲಿ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಜೊತೆಗೆ ವಿಭಿನ್ನವಾದ ಸಿನಿಮಾಗಳನ್ನು ಮಾಡಿದ್ದೇನೆ: ಸುದೀಪ್

ಸುದೀಪ್ ನಟನೆಯ ವಿಕ್ರಾಂತ್ ರೋಣ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಒಂದು ವಾರವಾಗಿದ್ದು, ಕರ್ನಾಟಕ ಸೇರಿದಂತೆ ತೆಲುಗು ಮತ್ತು ಹಿಂದಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸುದೀಪ್ ನಟನೆಯ ವಿಕ್ರಾಂತ್ ರೋಣ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಒಂದು ವಾರವಾಗಿದ್ದು, ಕರ್ನಾಟಕ ಸೇರಿದಂತೆ ತೆಲುಗು ಮತ್ತು ಹಿಂದಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.

3ಡಿ ಚಿತ್ರವು 100 ಕೋಟಿ ಕ್ಲಬ್‌ಗೆ ಸೇರಿದೆ ಮಾತ್ರವಲ್ಲದೆ  ಸುದೀಪ್ ಗೆ ಹೊಸ ಅಭಿಮಾನಿ ವರ್ಗ ಸೃಷ್ಟಿಯಾಗಿದೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಎಸ್ ರಾಜಮೌಳಿಯಂತಹವರು ಚಿತ್ರವನ್ನು ಹೊಗಳಿದ್ದಕ್ಕಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ನನ್ನ 26 ವರ್ಷದ ವೃತ್ತಿಜೀವನದಲ್ಲಿ, ನಾನು ಸಿನಿಮಾಗಳ ಹೊಸ ಹೊಸ ಪ್ರಯೋಗವನ್ನು ಆನಂದಿಸಿದ್ದೇನೆ. ವಿಕ್ರಾಂತ್ ರೋಣ ಕೂಡ ಅದರಲ್ಲಿ ಒಂದು,  ಒಬ್ಬ ನಟನಾಗಿ, ನಾವು ಯಾವಾಗಲೂ ನಾವೀನ್ಯತೆ ಮತ್ತು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತೇವೆ, ಅಂತಹ ಚಲನಚಿತ್ರಗಳ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ ಎಂದು ಸುದೀಪ್ ಹೇಳುತ್ತಾರೆ.

ಯಾವತ್ತೂ ಮೊದಲು ಆಕ್ರಮಣವಾಗೋದು ರಾಜನ ಮೇಲೆನೇ. ಹಾಗಾಗಿ, ಒಂದಷ್ಟು ಮಂದಿ ಏನೇನೋ ನೆಗೆಟಿವ್‌ ಮಾಡಿ “ಆಕ್ರಮಣ’ ಮಾಡುತ್ತಿದ್ದಾರೆ. ಆದರೆ, ಜನ ಇವತ್ತು ಈ ಸಿನಿಮಾ ಪರ ನಿಂತಿದ್ದಾರೆ. ನನ್ನ ಈ ಹಿಂದಿನ ಸಿನಮಾಗಳಿಗೆ ಈ ತರಹದ ಟ್ವೀಟ್‌, ಬೆಂಬಲ ನೋಡಿಲ್ಲ. “ಈಗ’ ನಂತರ ಜನ ಎರಡ್ಮೂರು ಬಾರಿ ನೋಡುತ್ತಿರುವ ಸಿನಿಮಾವಿದು ವೈಯಕ್ತಿಕವಾಗಿ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ. ಇಷ್ಟೆಲ್ಲಾ ಪ್ರೀತಿ ಸಿಗುವಾಗ ನಾನು ನೆಗೆಟಿವ್‌ ಬಗ್ಗೆ ಯಾಕೆ ಚಿಂತೆ ಮಾಡಬೇಕು.

ಏನಾದರೂ ಒಳ್ಳೆಯದು ಮಾಡಬೇಕೆಂದು ಪ್ರಕೃತಿ ನಿರ್ಧರಿಸಿದಾಗ ಅದರ ವಿರುದ್ಧ ಯಾರು ಏನು ಮಾಡಿದರೂ ಫ‌ಲಿಸೋದಿಲ್ಲ. ಇವತ್ತು “ವಿಕ್ರಾಂತ್‌ ರೋಣ’ನಿಗೆ ಸಿಗುತ್ತಿರುವ ಪ್ರೀತಿ ನೋಡಿ ಖುಷಿಯಾಗುತ್ತಿದೆ. ಕಮರ್ಷಿಯಲ್‌ ಆಗಿಯೂ ಚಿತ್ರ ಗೆದ್ದಿದೆ. ಜೊತೆಗೆ ಪ್ರೇಕ್ಷಕರು ಕೂಡಾ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ. ಇಡೀ ನಮ್ಮ ತಂಡ ಈ ಗೆಲುವಿನಿಂದ ತುಂಬಾ ಖುಷಿಯಾಗಿದೆ.

ನನ್ನ 26 ವರ್ಷದ ಕೆರಿಯರ್‌ನಲ್ಲಿ ನಾನು ಯಾವತ್ತೂ ಒಂದೇ ತೆರನಾದ ಸಿನಿಮಾ ಮಾಡಿಕೊಂಡು ಬಂದಿಲ್ಲ. ಔಟ್‌ ಅಂಡ್‌ ಔಟ್‌ ಮಾಸ್‌ ಕಮರ್ಷಿಯಲ್‌ ಜೊತೆಗೆ ವಿಭಿನ್ನವಾದ, ಹೊಸ ಪ್ರಯೋಗವನ್ನು ಮಾಡುತ್ತಲೇ ಬಂದಿದ್ದೇನೆ. ಒಂದೇ ತೆರನಾದ ಸಿನಿಮಾಗಳನ್ನು ಮಾಡುತ್ತಾ ಇದ್ದರೆ ನಾವು ಯಾವತ್ತೂ ಬೆಳೆಯೋದು, ಯಾವತ್ತೂ ಹೊಸತನಕ್ಕೆ, ಪ್ರಯೋಗಕ್ಕೆ ಒಡ್ಡಿಕೊಳ್ಳೋದು ಹೇಳಿ… ನನಗೆ ಈ ಸಿನಿಮಾ ಮಾಡಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

ಇವತ್ತು ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್‌ ಏರಿಕೆಯಾಗುತ್ತಿದೆ. ಪರಭಾಷೆಗಳಲ್ಲೂ ಅದ್ಭುತವಾದ ರೆಸ್ಪಾನ್ಸ್‌ ಇದೆ. ನಿರ್ಮಾಪಕ ಜಾಕ್‌ ಮಂಜು ನಿರ್ಮಾಪಕರಾಗಿ ಖುಷಿಯಾಗಿದ್ದಾರೆ. ಪ್ರತಿ ರಾಜ್ಯಗಳಿಂದಲೂ ನಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ಕಲೆಕ್ಷನ್‌ ಬರುತ್ತಿದೆ. ತುಂಬಾ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಮಾಡಿರುವ ಸಿನಿಮಾವಿದು. ಅನಾವಶ್ಯಕವಾಗಿ ನಾನಿಲ್ಲಿ ಆವರಿಸಿಕೊಂಡಿಲ್ಲ. ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಸ್ಕ್ರೀನ್‌ ಸ್ಪೆಸ್‌ ಇಲ್ಲಿ ಸಿಕ್ಕಿದೆ. ನಾನು ಸ್ಕ್ರಿಪ್ಟ್ಗೆ ಏನು ನ್ಯಾಯ ಸಲ್ಲಿಸಬೇಕಿತ್ತೋ, ಅದನ್ನು ಸಲ್ಲಿಸಿದ್ದೇನೆ. ಸುಖಾಸುಮ್ಮನೆ ಯಾವುದನ್ನೂ ಸೇರಿಸಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT