ಸಿನಿಮಾ ಸುದ್ದಿ

ನನ್ನ ಪ್ರತಿಯೊಂದು ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕೆಂದೇನೂ ಇಲ್ಲ: ಶ್ರೀನಿಧಿ ಶೆಟ್ಟಿ

Lingaraj Badiger

ಕೆಜಿಎಫ್‌ ಚಿತ್ರದ ಭಾರೀ ಯಶಸ್ಸಿನ ನಂತರ ನಟಿ ಶ್ರೀನಿಧಿ ಶೆಟ್ಟಿ ಮತ್ತೊಂದು ಬಹುಭಾಷಾ ಚಿತ್ರ ‘ಕೋಬ್ರಾ’ದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ತಮಿಳಿನಲ್ಲಿ ಆಕೆಯ ಚೊಚ್ಚಲ ಚಿತ್ರವಾಗಿದೆ. ಚಿತ್ರದ ಕಥೆ, ನಿರ್ದೇಶಕರು ಹಾಗೂ ನಟ ವಿಕ್ರಮ್ ಅವರು ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಎಂದು ಶ್ರೀನಿಧಿ ಹೇಳಿದ್ದಾರೆ.

“ನಾನು ಅಜಯ್ ಜ್ಞಾನಮುತ್ತು ಅವರ ಹಿಂದಿನ ಚಿತ್ರ ಇಮೈಕ್ಕಾ ನೋಡಿಗಳು ನೋಡಿದ್ದೆ ಮತ್ತು ಅದನ್ನು ತುಂಬಾ ಇಷ್ಟಪಟ್ಟೆ. ಇದು ಒಂದು ಥ್ರಿಲ್ಲರ್ ಆಗಿದ್ದು, ನಿರ್ದೇಶಕರ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ನನಗೆ ಸಹಾಯ ಮಾಡಿತು ಎಂದಿದ್ದಾರೆ.

"ವಿಕ್ರಮ್ ಬಗ್ಗೆ ಹೇಳುವುದಾದರೆ, ಅವರು ಸ್ವತಃ ಒಂದು ಬ್ರಾಂಡ್ ಆಗಿದ್ದಾರೆ ಮತ್ತು ಪ್ರೇಕ್ಷಕರನ್ನು ಆಕರ್ಷಿಸಲು ಅದು ಸಾಕು. ಹಾಗಾಗಿ ಕೋಬ್ರಾ ಚಿತ್ರ ಒಪ್ಪಿಕೊಂಡೆ" ಎಂದು ಶ್ರೀನಿಧಿ ತಿಳಿಸಿದ್ದಾರೆ.

“ವಿಕ್ರಮ್ ಅವರು ದಂತಕಥೆ ಮತ್ತು ಸ್ಫೂರ್ತಿ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಕೋಬ್ರಾ ಚಿತ್ರದಲ್ಲಿ ಅವರ ಅಭಿನಯವನ್ನು ನೋಡಿ ಬೆರಗಾಗಿದ್ದೆ. ವೈಯಕ್ತಿಕವಾಗಿ, ಅವರು ತುಂಬಾ ಕರುಣಾಮಯಿ ವ್ಯಕ್ತಿ. ವಿಕ್ರಮ್ ಮಗುವಿನಂತೆ, ಅವರು ಯಾವಾಗಲೂ ಸೆಟ್‌ಗಳಲ್ಲಿ ಮೋಜಿನ ವಾತಾವರಣವನ್ನು ಸೃಷ್ಟಿಸುತ್ತಾರೆ ಮತ್ತು ಅವರು ಉದಾರ ವ್ಯಕ್ತಿ. ತಮಿಳಿನಲ್ಲಿ ನನ್ನ ಮೊದಲ ಚಿತ್ರ ಅವರ ಜೊತೆಯಲ್ಲಿ ಮೂಡಿಬಂದಿರುವುದು ಖುಷಿ ತಂದಿದೆ’ ಎಂದು ಶ್ರೀನಿಧಿ ಹೇಳಿದ್ದಾರೆ.

ನನ್ನ ಪ್ರತಿಯೊಂದು ಚಿತ್ರವೂ ಬಹುಭಾಷೆ ಚಿತ್ರ ಆಗಿರಬೇಕು ಎಂದೇನೂ ಇಲ್ಲ. “ಕೆಜಿಎಫ್ ಕನ್ನಡ ಚಿತ್ರವಾಗಿ ಪ್ರಾರಂಭವಾಯಿತು, ಆದರೆ ಅಂತಿಮವಾಗಿ ಅದು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಯಿತು. ಒಂದು ಚಿತ್ರವು ಪ್ಯಾನ್-ಇಂಡಿಯಾ ಆಗಲು ಅದು ಪ್ರೇಕ್ಷಕರಿಂದ ಪಡೆಯುವ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಕೋಬ್ರಾ ಕನ್ನಡ ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ.

‘ಕೋಬ್ರಾ’ ಸಿನಿಮಾಗೆ ಆರ್​. ಅಜಯ್​ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಹಲವು ಗೆಟಪ್​ಗಳಲ್ಲಿ ವಿಕ್ರಮ್​ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಠಾಣ್​ ಕೂಡ ಈ ಸಿಮಾದಲ್ಲಿ ನಟಿಸಿರುವುದು ವಿಶೇಷ. ಎ.ಆರ್​. ಹೆರಮಾನ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕೋಬ್ರಾ’ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ.

SCROLL FOR NEXT