ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ

ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಚಿತ್ರಕ್ಕೆ ವಿವಿಧ ಉತ್ಸವಗಳಲ್ಲಿ ಪ್ರಶಸ್ತಿಗಳ ಸುರಿಮಳೆಯೇ ಸುರಿದಿದೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಚಿತ್ರಕ್ಕೆ ವಿವಿಧ ಉತ್ಸವಗಳಲ್ಲಿ ಪ್ರಶಸ್ತಿಗಳ ಸುರಿಮಳೆಯೇ ಸುರಿದಿದೆ.

ರಿಷಬ್‌ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಸಿನಿಮಾ ಎನ್ಎಫ್'ಡಿಸಿ ಆಯೋಜಿತ ಫಿಲಂ ಬಜಾರ್‌ನ ವರ್ಕ್ ಇನ್ ಪ್ರೋಗ್ರೆಸ್‌ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡು, ಈಗ ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ 'ಯುವ ತೀರ್ಪುಗಾರರ ಅವಾರ್ಡ್' ಪಡೆದುಕೊಂಡಿದೆ.

ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯೇ ʼಶಿವಮ್ಮʼ.

ಈ ಚಿತ್ರ ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣವಾಗಿದ್ದು, ಸಂಪೂರ್ಣ ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ನಟಿಸಿದ್ದಾರೆ.

ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಶಿವಮ್ಮ ಚಿತ್ರವು ಈಗಾಗಲೇ ಹಲವಾರು ಚಿತ್ರೋತ್ಸವದಲ್ಲಿ ಆಯ್ಕೆ ಆಗಿದ್ದು, ಮತ್ತಷ್ಟು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.

ಯುವ ನಿರ್ದೇಶಕರುಗಳಿಗೆ ಕೈಜೋಡಿಸಿರುವ ರಿಷಬ್‌ ಉತ್ತಮ ಕಥೆ ಮತ್ತು ಸಾರಾಂಶ ಹೊಂದಿರುವ ಯುವ ನಿರ್ದೇಶಕರ ಸಿನಿಮಾಗಳ ನಿರ್ಮಾಣಕ್ಕೆ ʼರಿಷಬ್ ಶೆಟ್ಟಿ ಫಿಲಂಸ್ʼ ಮೂಲಕ ಸಾಥ್‌ ನೀಡುತ್ತಿದ್ದಾರೆ.

ʼಶಿವಮ್ಮʼ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಸಿನಿಮಾವನ್ನು ಜೈಶಂಕರ್‌ ಅರ್ಯರ ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಬೂಸಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್‌’ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಅತ್ಯುತ್ತಮ ಚಿತ್ರಕ್ಕೆ ನೀಡುವ ಪ್ರಶಸ್ತಿಯಾಗಿದೆ. ಒಂದು ಕಡೆ ಕಾಂತಾರ ಸೂಪರ್ ಹಿಟ್ ಆಗಿದ್ದು, ಇದೀಗ ರಿಷಬ್‌ ನಿರ್ಮಾಣದ ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು ಹೆಮ್ಮೆಯ ವಿಚಾರ.

ಶಿವಮ್ಮ ಸಿನಿಮಾವನ್ನು ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಜೈಶಂಕರ್ ಅರ್ಯರ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದು, ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸೌಮ್ಯನಂದ ಸಾಹಿ, ವಿಕಾಸ್ ಅರಸ್ ಛಾಯಾಗ್ರಹಣ ಮತ್ತು ಶ್ರೇಯಾಂಕ್ ನಂಜಪ್ಪ ಶಬ್ದ ವಿನ್ಯಾಸ ಚಿತ್ರಕ್ಕಿದೆ.

ಏತನ್ಮಧ್ಯೆ, ಚಿತ್ರ ನಿರ್ಮಾಣ ಸಂಸ್ಥೆಯು ಕನ್ನಡ ಕಿರುಚಿತ್ರ ದಿ ಎಕೋ ಎನ್ನುವ ಚಿತ್ರವನ್ನು ಘೋಷಿಸಿದೆ. ಈ ಚಿತ್ರವನ್ನು ಪ್ರವೀಣ್ ಶಿವಣ್ಣ ನಿರ್ದೇಶಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ