ಅನಿರುದ್ಧ್, ಎಸ್ ನಾರಾಯಣ್ 
ಸಿನಿಮಾ ಸುದ್ದಿ

ಅಂದು ಡಾ.ವಿಷ್ಣುವರ್ಧನ್ ಜೊತೆ, ಇಂದು ಅನಿರುದ್ಧ್ ಜೊತೆ ಎಸ್.ನಾರಾಯಣ್ 'ಸೂರ್ಯವಂಶ'

1999ರಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟಿಸಿದ್ದ 'ಸೂರ್ಯವಂಶ' ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರು ನಿರ್ದೇಶಿಸಿದ್ದ ಚಿತ್ರವದು. 

ಬೆಂಗಳೂರು: 1999ರಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟಿಸಿದ್ದ 'ಸೂರ್ಯವಂಶ' ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರು ನಿರ್ದೇಶಿಸಿದ್ದ ಚಿತ್ರವದು. 

ಅದೇ ಶೀರ್ಷಿಕೆ ಇಟ್ಟುಕೊಂಡು 23 ವರ್ಷಗಳ ನಂತರ ಈಗ ಎಸ್. ನಾರಾಯಣ್ ಅವರು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಅದು ಧಾರಾವಾಹಿ ನಿರ್ದೇಶನ. ಸೂರ್ಯವಂಶ ಹೆಸರಿನಲ್ಲಿ ಧಾರಾವಾಹಿ ಇನ್ನು ಕೆಲವು ದಿನಗಳಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.  

ಇಲ್ಲಿ ಮತ್ತೊಂದು ವಿಶೇಷವೆಂದರೆ ಅಂದು ವಿಷ್ಣು ಜೊತೆಗೆ ಮಾಡಿದ್ದ ಸೂರ್ಯವಂಶವನ್ನು ಇಂದು ಅವರ ಮಗನ ಸಮಾನ ಅಳಿಯ ಅನಿರುದ್ಧ್ ಜತ್ಕಾರ್ ಜೊತೆಗೆ ಮಾಡಲಿದ್ದಾರೆ. ಧಾರಾವಾಹಿಯಲ್ಲಿ ಎಸ್.ನಾರಾಯಣ್ ಮತ್ತು ಅನಿರುದ್ಧ್ ಇಬ್ಬರೂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಈ ಮೊದಲು ಅನಿರುದ್ಧ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಟಿಸುತ್ತಿದ್ದರು. ನಂತರ ಅದರ ನಿರ್ದೇಶಕರು ಮತ್ತು ನಿರ್ಮಾಪಕ ಆರೂರು ಜಗದೀಶ್ ರೊಂದಿಗಿನ ಮನಸ್ತಾಪದಿಂದಾಗಿ ಹೊರಬಂದರು. ಇದೀಗ ಹೊಸ ಪಯಣವನ್ನು ಅನಿರುದ್ಧ್ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?