ಸಾಯಿ ಕುಮಾರ್ 
ಸಿನಿಮಾ ಸುದ್ದಿ

ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆಯ 'ರಾಕ್ಷಸರು' ಡಿಸೆಂಬರ್ 16 ರಂದು ರಿಲೀಸ್

ಡೈಲಾಗ್ ಕಿಂಗ್' ಸಾಯಿಕುಮಾರ್ ನಟನೆಯ 'ರಾಕ್ಷಸರು' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ.

ಡೈಲಾಗ್ ಕಿಂಗ್' ಸಾಯಿಕುಮಾರ್ ನಟನೆಯ 'ರಾಕ್ಷಸರು' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ.

ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳು ಕಳೆದಿವೆ.  25 ವರ್ಷದ ಹಿಂದ ತೆರೆಕಂಡ ಪೊಲೀಸ್ ಸ್ಟೋರಿ ನನಗೆ ಹೆಸರು ತಂದುಕೊಟ್ಟಿತ್ತು. ನನ್ನ ತಂದೆ-ತಾಯಿ ಕೂಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ನನಗಿಂತ ಒಳ್ಳೆಯ ಧ್ವನಿ, ಎತ್ತರ, ವರ್ಚಸ್ಸು ಇದ್ದರೂ ಕೂಡ ಹೀರೋ ಆಗೋಕೆ ಆಗಲಿಲ್ಲ. ನನ್ನ ತಾಯಿ ಡಾ ರಾಜ್‌ಕುಮಾರ್ ಜೊತೆ ಕೆಲಸ ಮಾಡಿದವರು.

ಕುಟುಂಬಕ್ಕಾಗಿ ತಾಯಿ ನಟನೆಯನ್ನು ತ್ಯಾಗ ಮಾಡಿದ್ದರು. ನನ್ನ ಮಕ್ಕಳು ನಟನೆಗೆ ಬಂದರೆ ನನ್ನ ತರ ಆಗುತ್ತಾರೆ ಅಂತ ಅಪ್ಪ ನಮಗೆ ಚಿತ್ರರಂಗ ಬೇಡ ಎಂದಿದ್ದರು. ತಾಯಿಗೆ ಮಾತ್ರ ನಾವು ನಟಿಸಲಿ ಎನ್ನೋದಿತ್ತು. ಬಿಎ, ಎಂಬಿಎ, ಎಂಫಿಲ್, ಎನ್‌ಸಿಸಿ ಮಾಡಿದ್ದರೂ ಕೂಡ ನಾನೇನೋ ಸಾಧನೆ ಮಾಡಬೇಕು ಎಂದು ಅಮ್ಮ ಬಯಸಿದ್ದಳು" ಎಂದು ಸಾಯಿಕುಮಾರ್ ಹೇಳಿದ್ದಾರೆ.

ಹೆತ್ತವರು ಸಿನಿಮಾ ನಂತರ ನಿರ್ದೇಶಕರು ಮತ್ತು ನಟ ಸಾಯಿ ಕುಮಾರ್ ಮತ್ತೆ ಒಂದಾಗಿದ್ದಾರೆ. “ನನಗೆ ಭಾವನಾತ್ಮಕ ಕಥೆಗಳ ಬಗ್ಗೆ ಒಲವು ಇದೆ. ಇದೇ ಮೊದಲ ಬಾರಿಗೆ ನಾನು ಕ್ರೈಮ್ ಥ್ರಿಲ್ಲರ್ ಅನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸಾಯಿಕುಮಾರ್ ಈ ಚಿತ್ರದ ಮುಖವಾಗಿರುವುದರಿಂದ ನನಗೆ ಸಂತೋಷವಾಗಿದೆ ಎಂದು ನಿರ್ದೇಶಕ ಅಜಯ್ ಕುಮಾರ್ ತಿಳಿಸಿದ್ದಾರೆ.

ಎರಡು ಹಾಡುಗಳಿರುವ ಈ‌ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!