ರಿಷಬ್ ಶೆಟ್ಟಿ 
ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ನಟ ರಿಷಬ್ ಶೆಟ್ಟಿ ಔಟ್!, ದಿಗಂತ್ ಹೇಳಿದ್ದೇನು?

ನಟ ರಕ್ಷಿತ್‌ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್‌ನಡಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋಸ್‌ನಿಂದ ಹೊಸದೊಂದು ವಿಚಾರ ಕೇಳಿಬರುತ್ತಿದ್ದು, ಕಾಂತಾರ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

ನಟ ರಕ್ಷಿತ್‌ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್‌ನಡಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋಸ್‌ನಿಂದ ಹೊಸದೊಂದು ವಿಚಾರ ಕೇಳಿಬರುತ್ತಿದ್ದು, ಕಾಂತಾರ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ನಟ ದಿಗಂತ್ ಅವರು ಮಾಧ್ಯಮ ಸಂವಾದದಲ್ಲಿ ರಿಷಬ್ ಶೆಟ್ಟಿ ಅವರು ಈ ಪ್ರಾಜೆಕ್ಟ್‌ನಿಂದ ನಿರ್ಗಮಿಸಿರುವುದನ್ನು ಬಹಿರಂಗಪಡಿಸಿದ್ದು, ಚಿತ್ರತಂಡವು ರಿಷಬ್ ಅವರ ಪಾತ್ರಕ್ಕೆ ಮತ್ತೋರ್ವ ನಟನನ್ನು ಹುಡುಕುತ್ತಿದೆ ಎಂದಿದ್ದಾರೆ. ಆದರೆ, ಈ ಬೆಳವಣಿಗೆಯ ಬಗ್ಗೆ ಪ್ರೊಡಕ್ಷನ್ ಹೌಸ್, ನಿರ್ದೇಶಕ ಅಥವಾ ನಟ ಸ್ವತಃ ಏನನ್ನೂ ಬಹಿರಂಗಪಡಿಸಿಲ್ಲ.

ಆದಾಗ್ಯೂ, ಈ ಕಾಮಿಡಿ ಎಂಟರ್‌ಟೈನರ್‌ನಲ್ಲಿ ರಿಷಬ್ ಶೆಟ್ಟಿ ಬದಲಿಗೆ ನಟ ಯೋಗೇಶ್ ಅಲಿಯಾಸ್ ಲೂಸ್ ಮಾದ ಯೋಗಿ ಇರಲಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾದಲ್ಲಿ, ದಿಗಂತ್ ಜೊತೆಗೆ ಅಚ್ಯುತ್ ಕುಮಾರ್ ಸಹ ನಾಯಕರಾಗಿ ನಟಿಸಿದ್ದಾರೆ. ಯೋಗಿ ಅವರು ಕೊನೆಯದಾಗಿ ಡಾಲಿ ಧನಂಜಯ್ ಅಭಿನಯದ ಹೆಡ್‌ಬುಷ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಭಿಜಿತ್ ಅವರ ನಿರ್ದೇಶನದಲ್ಲಿ ಪ್ರಮುಖ ತಾರಾಗಣದೊಂದಿಗೆ ಸಿನಿಮಾ ಸೆಟ್ಟೇರಿರುವುದರಿಂದ, ಈ ಬೆಳವಣಿಗೆಯ ಬಗ್ಗೆ ಪ್ರೊಡಕ್ಷನ್ ಹೌಸ್‌ನಿಂದ ಅಧಿಕೃತ ದೃಢೀಕರಣವನ್ನು ಶೀಘ್ರದಲ್ಲೇ ನೀಡುವ ನಿರೀಕ್ಷೆಯಿದೆ.

ಜಿ.ಎಸ್. ಗುಪ್ತಾ ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿರುವ ನಟ ರಕ್ಷಿತ್ ಶೆಟ್ಟಿ, ಈ ಸಿನಿಮಾವು ಮದುವೆಗಳು ಮತ್ತು ಲವ್ ಲೈಫ್‌ ಅನ್ನು ಸ್ಟೈಲಿಶ್ ಮತ್ತು ವಿಡಂಬನಾತ್ಮಕವಾಗಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಬ್ಯಾಚುಲರ್ ಪಾರ್ಟಿಗೆ ಅರ್ಜುನ್ ರಾಮು ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಬ್ಯಾಚುಲರ್ ಪಾರ್ಟಿಯ ಇತರೆ ಪಾತ್ರಗಳಲ್ಲಿ ಪವನ್ ಕುಮಾರ್, ಸೌಮ್ಯ ಜಗನ್ಮೂರ್ತಿ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್, ರಘು ರಾಮನಕೊಪ್ಪ, ಶೋಭರಾಜ್ ಮತ್ತು ಗುರುಪ್ರಸಾದ್ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT