ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ಶೀಘ್ರವೇ ರಿಚರ್ಡ್ ಆ್ಯಂಥೋಣಿ ಚಿತ್ರೀಕರಣ ಆರಂಭ: ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಸದ್ಯ ನಿರ್ದೇಶಕ ಹೇಮಂತ್ ಎಂ ರಾವ್ ಅವರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ.

ರಕ್ಷಿತ್ ಶೆಟ್ಟಿ ಸದ್ಯ ನಿರ್ದೇಶಕ ಹೇಮಂತ್ ಎಂ ರಾವ್ ಅವರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ.

ಸದ್ಯ ಚಿತ್ರದ ಅರ್ದದಷ್ಟು ಶೂಟಿಂಗ್ ಮುಗಿಸಿದ್ದು, ಕ್ಲೈಮ್ಯಾಕ್ಸ್ ಭಾಗಗಳ ಚಿತ್ರೀಕರಣ ಬಾಕಿಯಿದೆ, ಇನ್ನೂ 15 ದಿನಗಳ ಶೂಟಿಂಗ್ ಬಾಕಿಯಿದ್ದು, ಇನ್ನೂ ಒಂದು ಅಥವಾ 2 ತಿಂಗಳಲ್ಲಿ ಶೂಟಿಂಗ್ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಸಿನಿಮಾದ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ತಮ್ಮ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ದೇಹದ ಬದಲಾವಣೆ ಜೊತೆಗೆ ಪಾತ್ರದ ಜೊತೆಗಿನ ಆಂತರಿಕ ಸಂಘರ್ಷ ನನಗೆ ದೊಡ್ಡ ಸವಾಲಾಗಿತ್ತು, ನಾಯಕ ಮನು ಬಹಳಷ್ಟು ನೋವು  ಸಹಿಸಿಕೊಳ್ಳುತ್ತಾನೆ,  ಪಾತ್ರ ಮುಗಿದ ನಂತರವೂ ಅದೇ ಭಾವನೆ ನನ್ನಲ್ಲಿ ಉಳಿದಿದೆ, ಇದು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ರಕ್ಷಿತ್ ತಿಳಿಸಿದ್ದಾರೆ.

ರಕ್ಷಿತ್  ಆಧ್ಯಾತ್ಮಿಕ ಪ್ರಯಾಣದಲ್ಲಿದ್ದಾರೆ ಮತ್ತು ಇದು ಬರಹಗಾರ ಮತ್ತು ನಟನಾಗಿ ಅವರಿಗೆ ಸಹಾಯ ಮಾಡುತ್ತಿದೆ ಎಂದು ಅವರು ನಂಬುತ್ತಾರೆ.

ಇದು ಖಂಡಿತವಾಗಿಯೂ ನನ್ನ ನಟನೆಗೆ ಸಹಾಯ ಮಾಡುತ್ತದೆ, ಇದು ಬರಹಗಾರನಾಗಿ ನನ್ನನ್ನು ಪುನರುಜ್ಜೀವನಗೊಳಿಸುತ್ತದೆ. ಇದು ನನ್ನನ್ನು ಕಾಲ್ಪನಿಕ ಜಗತ್ತಿಗೆ ಎಳೆಯುತ್ತದೆ  ಎಂದು ಹೇಳಿದ್ದಾರೆ.

ಸಪ್ತ ಸಾಗರದಾಚೆ ಚಿತ್ರ ಮುಗಿಸಿದ ನಂತರ ರಕ್ಷಿತ್ ಅವರು ರಿಚರ್ಡ್ ಆಂಥೋಣಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಈ ಯೋಜನೆಗೆ ಬೆಂಬಲ ನೀಡುತ್ತಿದೆ.

ಸ್ಕ್ರಿಪ್ಟ್ ಅನ್ನು ಈಗಾಗಲೇ ನಾನು ಪ್ರೀತಿಸುತ್ತಿದ್ದೇನೆ, ನಾನು ಪಾತ್ರವನ್ನು ಮಾಡಲು ಪ್ರಾರಂಭಿಸಿದಾಗ ನಾನು ರಿಚಿಯೊಂದಿಗೆ ಪ್ರೀತಿಯಲ್ಲಿ ಬೀಳಬಹುದು ಎಂದು ನಾನು ಭಾವಿಸುತ್ತೇನೆ ಎಂದು ರಕ್ಷಿತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ತಮಿಳುನಾಡು ಜನತೆಗೆ CM ವಿಜಯ್ ಬಂಪರ್‌ ಗಿಫ್ಟ್;‌ ಸರ್ಕಾರಿ ನೌಕರರಿಗೆ 3ನೇ ಮಗುವಿಗೂ 1 ವರ್ಷ ಮಾತೃತ್ವ ರಜೆ; ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ!