ರಮೇಶ್ ಅರವಿಂದ್ ಮತ್ತು ನಾಜರ್ 
ಸಿನಿಮಾ ಸುದ್ದಿ

‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್ ತಂದೆಯಾಗಿ ಹಿರಿಯ ನಟ ನಾಜರ್

ರಮೇಶ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರದ ಚಿತ್ರೀಕರಣ ಡಿ.13ರಿಂದ ಪ್ರಾರಂಭವಾಗಿ, 10 ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ರಮೇಶ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರದ ಚಿತ್ರೀಕರಣ ಡಿ.13ರಿಂದ ಪ್ರಾರಂಭವಾಗಿ, 10 ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಈ ಚಿತ್ರಕ್ಕೆ ಇದೀಗ ತಮಿಳು ನಟ ನಾಜರ್ ಸೇರ್ಪಡೆಯಾಗಿದ್ದು, ರಮೇಶ್ ತಂದೆಯಾಗಿ ನಟಿಸುತ್ತಿದ್ದಾರೆ. ನಾಜರ್ ಮತ್ತು ರಮೇಶ್ ಸುಮಾರು 30 ವರ್ಷಗಳ ಸ್ನೇಹಿತರಾಗಿದ್ದು, ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಜರ್ ಸೇರ್ಪಡೆಯ ಬಗ್ಗೆ ಮಾತನಾಡುವ ನಿರ್ದೇಶಕ ಆಕಾಶ್ ಶ್ರೀವತ್ಸ, ‘ಶಿವಾಜಿಯ ತಂದೆ ವಿಜಯೇಂದ್ರ ಸುರತ್ಕಲ್ ಆಗಿ ನಾಜರ್ ನಟಿಸುತ್ತಿದ್ದಾರೆ.

ಅವರು ಸಹ ಪೊಲೀಸ್ ಇಲಾಖೆಯಲ್ಲಿ ಐಜಿಯಾಗಿ ನಿವೃತ್ತರಾಗಿರುತ್ತಾರೆ. ಮೊದಲ ಭಾಗದಲ್ಲಿ ಅವರ ಪಾತ್ರವೇಕೆ ಕಾಣಿಸಲಿಲ್ಲ ಎಂದು ಇಲ್ಲಿ ಗೊತ್ತಾಗುತ್ತದೆ. ಪತ್ತೆದಾರಿಕೆಯ ಜತೆಗೆ ಇಲ್ಲಿ ಅಪ್ಪ-ಮಗನ ಕಥೆಯೂ ಇದೆ.

ಅವರಿಬ್ಬರ ನಡುವೆ ಕಾರಣಾಂತರಗಳಿಂದ ಮಾತುಕತೆ ನಿಂತು ಹೋಗಿರುತ್ತದೆ. ಇಬ್ಬರೂ ಜೀವನವನ್ನು ನೋಡುವ ರೀತಿ ಬೇರೆಯಾಗಿದ್ದು, ಅದೇ ಘರ್ಷಣೆಗೆ ಕಾರಣವಾಗಿರುತ್ತದೆ. ಅದರ ಬಗ್ಗೆ ಈ ಭಾಗದಲ್ಲಿ ಹೇಳುತ್ತಿದ್ದೇವೆ’ ಎನ್ನುತ್ತಾರೆ.

‘ಶಿವಾಜಿ ಸುರತ್ಕಲ್ 2’ ಚಿತ್ರಕ್ಕೆ ಆಕಾಶ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ವಿುಸುತ್ತಿರುವ ಈ ಚಿತ್ರದಲ್ಲಿ ರಮೇಶ್ ಜತೆಗೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ ಮುಂತಾದವರು ನಟಿಸುತ್ತಿದ್ದಾರೆ. 2022ರ ಜನವರಿ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು, ವಿಡಿಯೋ ವೈರಲ್

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!