ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಶಶಾಂಕ್ ನಿರ್ದೇಶನದ ಪ್ರೇಮಕಥೆ 'ಲವ್ 360' ಆಗಸ್ಟ್ 19ರಂದು ತೆರೆಗೆ

ನಿರ್ದೇಶಕ ಶಶಾಂಕ್ ಅವರು ನಿರ್ದೇಶಿಸಿದ್ದ ಯಶ್, ರಾಧಿಕಾ ಪಂಡಿತ್, ಶುಭಾ ಪೂಂಜಾ ಅಭಿನಯದ ಲವ್ ಸ್ಟೋರಿ 'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ 14 ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕರು ಮತ್ತೊಂದು ಪ್ರೇಮಕಥೆ ಚಿತ್ರ 'ಲವ್ 360' ಬಿಡುಗಡೆಗೆ ಕಾತರರಾಗಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 19ರಂದು ತೆರೆಗೆ ಬರಲಿದೆ. 

ಬೆಂಗಳೂರು: ನಿರ್ದೇಶಕ ಶಶಾಂಕ್ ಅವರು ನಿರ್ದೇಶಿಸಿದ್ದ ಯಶ್, ರಾಧಿಕಾ ಪಂಡಿತ್, ಶುಭಾ ಪೂಂಜಾ ಅಭಿನಯದ ಲವ್ ಸ್ಟೋರಿ 'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ 14 ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕರು ಮತ್ತೊಂದು ಪ್ರೇಮಕಥೆ ಚಿತ್ರ 'ಲವ್ 360' ಬಿಡುಗಡೆಗೆ ಕಾತರರಾಗಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 19ರಂದು ತೆರೆಗೆ ಬರಲಿದೆ. 

ಧನಂಜಯ್-ರಚಿತಾ ರಾಮ್ ಅವರ ಮಾನ್ಸೂನ್ ರಾಗ ಚಿತ್ರ ಬಿಡುಗಡೆ ದಿನವೇ ಈ ಚಿತ್ರ ಕೂಡ ತೆರೆಗೆ ಬರುತ್ತಿದೆ. ಹೊಸ ನಾಯಕ-ಪ್ರವೀಣ್ ಮತ್ತು ಲವ್ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ, ಲವ್ 360 ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದೆ. 

ನಿರ್ದೇಶಕ ಶಶಾಂಕ್ ಪ್ರಕಾರ, ಹುಡುಗ-ಹುಡುಗಿಯ ಪ್ರೇಮಕಥೆ ಇದಾಗಿದ್ದು, ಎಲ್ಲಾ ಸಂದರ್ಭಗಳಲ್ಲಿ ಹೇಗೆ ಪರಸ್ಪರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನು ಕಥೆ ಒಳಗೊಂಡಿದೆ. ಲವ್ 360 ಒಂದು ಕಾಲ್ಪನಿಕ ಕಥೆಯಾಗಿದೆ ಎಂದಷ್ಟೇ ಹೇಳಿದರು. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಅಭಿಲಾಷ್ ಕಲಾತಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!