ನಟ ದೇವರಾಜ್ ಕುಮಾರ್, ನಟಿ ಸಮೃದ್ಧಿ ಶುಕ್ಲಾ 
ಸಿನಿಮಾ ಸುದ್ದಿ

'ತಾಜ್ ಮಹಲ್ 2' ನೈಜ ಕಥೆಯಾಧಾರಿತ ಚಿತ್ರ

ನಿರ್ದೇಶಕರಾಗಿ ಬದಲಾಗಿರುವ ಮೇಕಪ್ ಕಲಾವಿದ ದೇವರಾಜ್ ಕುಮಾರ್ ತಾಜ್ ಮಹಲ್ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ ಆಗಿದೆ.

ನಿರ್ದೇಶಕರಾಗಿ ಬದಲಾಗಿರುವ ಮೇಕಪ್ ಕಲಾವಿದ ದೇವರಾಜ್ ಕುಮಾರ್ ತಾಜ್ ಮಹಲ್ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ ಆಗಿದೆ. ಈ ಹಿಂದೆ ಅವರು ಡೆಂಜರ್ ಜೋನ್, ನಿಶಾದಾ 2 ಮತ್ತು ಅನುಷ್ಕಾ ಚಿತ್ರವನ್ನು ನಿರ್ದೇಶಿಸಿದ್ದರು. ಈ ರೋಮ್ಯಾಂಟಿಕ್ ಸಿನಿಮಾದ ಕಥೆ, ಚಿತ್ರಕಥೆಯನ್ನು ದೇವರಾಜ್ ಕುಮಾರ್ ಅವರೇ ಬರೆದಿದ್ದಾರೆ. ಅಲ್ಲದೇ, ಚೊಚ್ಚಲ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಸಮೃದ್ಧಿ ಶುಕ್ಲಾ

ತಾಜ್ ಮಹಲ್ 2 ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸೆಪ್ಟೆಂಬರ್ 2 ರಂದು ಚಿತ್ರ ಬಿಡುಗಡೆಗೆ ನಿರ್ಮಾಪಕರು ಎದುರು ನೋಡುತ್ತಿದ್ದಾರೆ.

ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ದೇವರಾಜ್, ತಾಜ್ ಮಹಲ್ 2 ಶೀರ್ಷಿಕೆಗೂ ಆರ್. ಚಂದ್ರು 2008ರಲ್ಲಿ ನಿರ್ದೇಶಿಸಿದ್ದ ತಾಜ್ ಮಹಲ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ, ಇದೊಂದು ರೋಮ್ಯಾಂಟಿಕ್ ಚಿತ್ರವಾವಾಗಿದೆ. ಕೊಯಂಬತ್ತೂರಿನಲ್ಲಿ ಸಂಭವಿಸಿದ ನೈಜ ಕಥೆಯಾಧಾರಿತ ಚಿತ್ರವಾಗಿದೆ ಎಂದರು. 

ಆ ಘಟನೆ ನನ್ನನ್ನು ತೀವ್ರವಾಗಿ ಕಾಡಿತ್ತು. ಅದನ್ನು ತಾಜ್ ಮಹಲ್ 2 ಮೂಲಕ ಪ್ರೇಕ್ಷಕರ ಮುಂದೆ ತೋರಿಸುತ್ತಿದ್ದೇವೆ. ಸಮೃದ್ಧಿ ಶುಕ್ಲಾ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಶ್ರೀ ಗಂಗಾಭಿಕಾ ಎಂಟರ್ ಪ್ರೈಸಸ್ ಸಹಕಾರವಿದೆ.

ಸಂಭಾಷಣೆ ಮತ್ತು ಸಾಹಿತ್ಯವವನ್ನು ಮನುವರಸಿ ನವಲಗುಂದ ಬರೆದಿದ್ದು, ವಿಕ್ರಮ್ ಸೆಲ್ವಂ ಸಂಗೀತ ಸಂಯೋಜಿಸಿದ್ದಾರೆ. ವಿನಸ್ ಮೂರ್ತಿ ಅವರ ಛಾಯಾಗ್ರಹಣವಿರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel