ಸಲ್ಮಾನ್ ಖಾನ್, ಕಮಲ್ ಹಾಸನ್, ಚಿರಂಜೀವಿ 
ಸಿನಿಮಾ ಸುದ್ದಿ

ವಿಕ್ರಮ್ ಸಕ್ಸಸ್: ಸಲ್ಮಾನ್ ಖಾನ್ ಸಮ್ಮುಖದಲ್ಲಿ ಕಮಲ್ ಹಾಸನ್ ಸನ್ಮಾನಿಸಿದ ಚಿರಂಜೀವಿ

ಇಂಗ್ಲೆಂಡ್ ನಲ್ಲಿ  ಸಾರ್ವಕಾಲಿಕ ಅತಿ ಹೆಚ್ಚಿನ ಗಳಿಕೆ ಕಂಡ ತಮಿಳು ಚಿತ್ರವಾಗಿ 'ವಿಕ್ರಮ್' ಹೊರಹೊಮ್ಮಿರುವ  ಸುದ್ದಿಯ ನಡುವೆ ಸಿನಿಮಾದ ಬಿಗ್ ಸಕ್ಸಸ್ ಗಾಗಿ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಭಾನುವಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಮ್ಮುಖದಲ್ಲಿ ಕಮಲ್ ಹಾಸನ್ ಅವರನ್ನು ಸನ್ಮಾನಿಸಿದ್ದಾರೆ. 

ಚೆನ್ನೈ:  ಇಂಗ್ಲೆಂಡ್ ನಲ್ಲಿ  ಸಾರ್ವಕಾಲಿಕ ಅತಿ ಹೆಚ್ಚಿನ ಗಳಿಕೆ ಕಂಡ ತಮಿಳು ಚಿತ್ರವಾಗಿ 'ವಿಕ್ರಮ್' ಹೊರಹೊಮ್ಮಿರುವ  ಸುದ್ದಿಯ ನಡುವೆ ಸಿನಿಮಾದ ಬಿಗ್ ಸಕ್ಸಸ್ ಗಾಗಿ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಭಾನುವಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಮ್ಮುಖದಲ್ಲಿ ಕಮಲ್ ಹಾಸನ್ ಅವರನ್ನು ಸನ್ಮಾನಿಸಿದ್ದಾರೆ. 

ಈ ಕುರಿತು ಟ್ವೀಟರ್ ನಲ್ಲಿ ಫೋಟೋ  ಹಂಚಿಕೊಂಡಿರುವ ಚಿರಂಜೀವಿ, ವಿಕ್ರಮ್ ಅದ್ಬುತ ಸಕ್ಸಸ್ ಗಾಗಿ ಸಲ್ಲುಬಾಯಿ ಅವರೊಂದಿಗೆ ನನ್ನ ಆತ್ಮೀಯ ಹಳೆಯ ಮಿತ್ರ ಕಮಲ್ ಹಾಸನ್ ಅವರನ್ನು ಸನ್ಮಾನಿಸಿದ್ದು, ಖುಷಿ ತಂದಿದೆ ಎಂದಿದ್ದಾರೆ.

 ಕಳೆದ ರಾತ್ರಿ ತಮ್ಮ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನಿರ್ದೇಶಕ ಲೋಕೇಶ್ ಮತ್ತು ಅವರ ತಂಡ ಪಾಲ್ಗೊಂಡಿತ್ತು. ಎಂತಹ ತೀವ್ರತೆ ಹಾಗೂ ಥ್ರಿಲ್ಲಿಂಗ್ ಸಿನಿಮಾ ಅದು! ಕುಡೋಸ್ ಮೈ ಫ್ರೆಂಡ್, ನಿನಗೆ ಹೆಚ್ಚಿನ ಬಲ ತಂದಿದೆ ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.

ಜೂನ್ 7 ರಂದು ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಲೆಕ್ಸನ್ ಇಎಸ್ 300ಹೆಚ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಮಾರನೇ ದಿನ ನಟ ಸೂರ್ಯ ಅವರಿಗೆ ರೋಲೆಕ್ಸ್ ಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?