ವಿನೋದ್ ಪ್ರಭಾಕರ್ 
ಸಿನಿಮಾ ಸುದ್ದಿ

'ಮಾದೇವ'ನಾಗಿ ವಿನೋದ್ ಪ್ರಭಾಕರ್!

ಚಿರಂಜೀವಿ ಸರ್ಜಾ ಅವರ ಖಾಕಿ ಚಿತ್ರದ ಮೂಲಕ  ಚೊಚ್ಚಲ ನಿರ್ದೇಶಕನಾಗಿ ಗುರುತಿಕೊಂಡ ನವೀನ್ ರೆಡ್ಡಿ ಬಿ, ಈಗ ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಅವರ ಎರಡನೇ ಸಿನಿಮಾ ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ.

ಚಿರಂಜೀವಿ ಸರ್ಜಾ ಅವರ ಖಾಕಿ ಚಿತ್ರದ ಮೂಲಕ  ಚೊಚ್ಚಲ ನಿರ್ದೇಶಕನಾಗಿ ಗುರುತಿಕೊಂಡ ನವೀನ್ ರೆಡ್ಡಿ ಬಿ, ಈಗ ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಅವರ ಎರಡನೇ ಸಿನಿಮಾ ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ.

ಮಾದೇವ ಎಂಬ ಶೀರ್ಷಿಕೆಯ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಸಿನಿಮಾದ ಕೆಲವು ಸ್ಟಿಲ್ ಗಳನ್ನು ಸಿನಿಮಾ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.

ಇದು 80 ರ ದಶಕದ ಕಥೆಯನ್ನು ಒಳಗೊಂಡಿದ್ದು, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭಾವಾನಾತ್ಮಕ ಕಥೆಯಾಗಿದೆ. ಜೈಲು ಮತ್ತು ರೈಲಿನ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ ಎಂದು  ನಿರ್ದೇಶಕ ನವೀನ್ ರೆಡ್ಡಿ ತಿಳಿಸುತ್ತಾರೆ.

ಜುಲೈ 21 ರಂದು ಚಿತ್ರ ಸೆಟ್ಟೇರಲಿದ್ದು, ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ.ಬಾಲಕೃಷ್ಣ ತೋಟ ಛಾಯಾಗ್ರಹಣವಿದೆ. ನಿರ್ಮಾಪಕಿ ಗಾಯತ್ರಿ ಆರ್ ಹಳಲೆ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರದ್ದ್ಯೋತ್ತನ್ ಸಂಗೀತ ನೀಡಲಿದ್ದಾರೆ.

ಶೃತಿ, ಅಚ್ಯುತ್ ಕುಮಾರ್ ಮತ್ತು ಶುದ್ದಿ ಚಿತ್ರಕ್ಕಾಗಿ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ, ರಾಬರ್ಟ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ವಿನೋದ್ ಪ್ರಭಾಕರ್ ಅವರ ಮುಂದಿನ ಚಿತ್ರ ಲಂಕಾ ಸುರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಾಯಕಿ ಪಾತ್ರಕ್ಕಾಗಿ ಇನ್ನೂ ಆಯ್ಕೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

SCROLL FOR NEXT