ರಚಿತಾ ರಾಮ್ ಮತ್ತು ದರ್ಶನ್ 
ಸಿನಿಮಾ ಸುದ್ದಿ

ಈ ಪೀಳಿಗೆಯಲ್ಲಿ 10 ವರ್ಷ ಕಮರ್ಷಿಯಲ್ ಹೀರೋಯಿನ್ ಆಗಿ ಉಳಿದುಕೊಂಡದ್ದು ದೊಡ್ಡ ಸಾಧನೆ: 'ಕ್ರಾಂತಿ' ನಾಯಕಿ ಬಗ್ಗೆ ದರ್ಶನ್ ಮಾತು

ಈಗಿನ ಪೀಳಿಗೆಯಲ್ಲಿ ಯಶಸ್ವಿ ನಾಯಕಿಯಾಗಿ 10 ವರ್ಷ ತುಂಬಿರುವುದು ದೊಡ್ಡ ಸಾಧನೆ ಎಂದು ಕ್ರಾಂತಿ ನಟಿ ರಚಿತಾ ರಾಮ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತಾಡಿದ್ದಾರೆ.

ಈಗಿನ ಪೀಳಿಗೆಯಲ್ಲಿ ಯಶಸ್ವಿ ನಾಯಕಿಯಾಗಿ 10 ವರ್ಷ ತುಂಬಿರುವುದು ದೊಡ್ಡ ಸಾಧನೆ ಎಂದು ಕ್ರಾಂತಿ ನಟಿ ರಚಿತಾ ರಾಮ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತಾಡಿದ್ದಾರೆ.

ಈ ಹಿಂದೆ ನಾಯಕಿಯರು ಎರಡು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಮೆರೆದ ಸಂದರ್ಭಗಳಿವೆ, ಆದರೆ ಈಗಿನ ಸಂದರ್ಭದಲ್ಲಿ ಅದು ಕಷ್ಟ, ಇಂದುಹೆಚ್ಚಿನ ನಾಯಕಿಯರು, 5 ರಿಂದ 7 ವರ್ಷಗಳ ವರೆಗೆ ಸಿನಿಮಾ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ, ರಚಿತಾ ಪ್ರತಿಭೆಮತ್ತು ಸಮರ್ಪಣಾ ಭಾವವೇ ಆಕೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ.

ನಾನು ಕಿರುತೆರೆಯಿಂದ ಬೆಳ್ಳಿಪರದೆಗೆ ಬಂದಿದ್ದೇನೆ, ದರ್ಶನ್ ಅವರ ಬುಲ್ ಬುಲ್ ಸಿನಿಮಾ ಮೂಲಕ ನಾನು ಸ್ಯಾಂಡಲ್ ವುಡ್ ಪ್ರವೇಶ ಮಾಡಿದೆ, ಸೆಪ್ಟಂಬರ್ 21 2012 ರಂದು ನನ್ನ ಮೊದಲ ಸಿನಿಮಾ ಶೂಟಿಂಗ್ ಆರಂಭವಾಗಿತ್ತು. 10 ವರ್ಷಗಳ ನಂತರ ಅದೇ ದಿನ ನಾನು ಕ್ರಾಂತಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ, ನನ್ನ ಸಿನಿಮಾ ತಂಡ ವೃತ್ತಿ ಜೀವನದ ವಾರ್ಷಿಕೋತ್ಸವ ಆಚರಿಸಿತು ಎಂದು ರಚಿತಾ ರಾಮ್ ತಿಳಿಸಿದ್ದಾರೆ. ಬುಲ್ ಬುಲ್ ಸಿನಿಮಾಗೂ ವಿ ಹರಿಕೃಷ್ಣ ಅವರ ಸಂಗೀತವಿತ್ತು, ಕ್ರಾಂತಿ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ, ಜೊತೆಗೆ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ.

ರಚಿತಾ ರಾಮ್

ಕ್ರಾಂತಿ ಸಿನಿಮಾ ಮುಂದಿನ ಕೆಲ ವರ್ಷಗಳ ವರೆಗೂ ನನ್ನ ಪ್ರಯಾಣವನ್ನು ವ್ಯಾಖ್ಯಾನಿಸಲಿದೆ. ನನ್ನ ವೃತ್ತಿ ಜೀವನದ 10ನೇ ವರ್ಷದಲ್ಲಿ ಕ್ರಾಂತಿ ಸಿನಿಮಾ ರಿಲೀಸ್ಆಗುತ್ತಿರುವುದು ನನ್ನ ಮೊದಲ ಸಿನಿಮಾ ಬಿಡುಗಡೆ ಆದಂತೆ ಅನಿಸುತ್ತಿದೆ. ಈ 10 ವರ್ಷಗಳಲ್ಲಿ ನಾನು ಗಳಿಸಿದ ಅನುಭವ ಕೇವಲ ಪ್ರಯೋಗವಾಗಿದೆ ಎನ್ನಿಸುತ್ತಿದೆ. ಒಬ್ಬ ಕಲಾವಿದೆಯಾಗಿ ನಾನು ನನ್ನ ಅಧ್ಯಯನ ಮಾಡಬೇಕು. ಜೊತೆಗೆ ಸಿನಿಮಾ ರಂಗವನ್ನು ಗಮನಿಸಬೇಕು ಎಂದಿದ್ದಾರೆ.

ಚಿತಾ ಮೊದಲಿನಿಂದಲೂ ಕಮರ್ಷಿಯಲ್ ಹೀರೋಯಿನ್ ಎಂದೇ ಪರಿಗಣಿಸಲ್ಪಟ್ಟಿದ್ದು, ಇಂದಿಗೂ ಆ ಸ್ಥಾನಮಾನವನ್ನು ಉಳಿಸಿಕೊಂಡು ಬಂದಿರುವ ಖುಷಿಯಲ್ಲಿದ್ದಾರೆ. "ದೀರ್ಘಕಾಲದವರೆಗೆ ಕಮರ್ಷಿಯಲ್ ನಾಯಕಿಯಾಗಿ ಉಳಿಯುವುದು  ಆಶೀರ್ವಾದ .ಒಂದೆರಡು ಸಿನಿಮಾಗಳ ಬಗ್ಗೆ ವಿಷಾದವಿದೆ, ಪ್ರತಿಯೊಬ್ಬ ನಿರ್ದೇಶಕರು ಕಥೆ ಬರೆಯುವಾಗ ನನ್ನನ್ನು ಅವರ ಮನಸ್ಸಿನಲ್ಲಿರಿಸಿಕೊಂಡಿರುವುದು ನನಗೆ ಖುಷಿಯಾಗಿದೆ. ನಾನು ಕಮರ್ಷಿಯಲ್ ಹೀರೋಯಿನ್ ಆಗಿದ್ದೇನೆ, ಹೀಗಾಗಿ ಅವರ ಕೈಗೆ ಸಿಗುವುದಿಲ್ಲ ಎಂದು ಹೇಳುತ್ತಿದ್ದರು. ಇದು ತಪ್ಪು ಗ್ರಹಿಕೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಇಷ್ಟು ವರ್ಷ ಇಲ್ಲಿರುವ ನನಗೆ ಕನ್ನಡ ಚಿತ್ರರಂಗದ ಮಾರುಕಟ್ಟೆ ಅರ್ಥವಾಗುತ್ತದೆ. ಇದಲ್ಲದೆ, ನಾನು ಮೊದಲು ನಟಿ, ನಂತರ ಮಾತ್ರ ನಾಯಕಿ. ನಾನು ಯಾವುದೇ ರೀತಿಯ ಪಾತ್ರದಲ್ಲಿ ಬೆರೆಯಬಲ್ಲೆ. ನಾನು ಸಂಭಾವನೆಯ ದೃಷ್ಟಿಯಿಂದ ಎಲ್ಲದಕ್ಕೂ ಬೆಲೆ ಕೊಡುವುದಿಲ್ಲ ಎಂದಿದ್ದಾರೆ. ಜನವರಿ 26 ರಂದು ಕ್ರಾಂತಿ ರಿಲೀಸ್ ಆಗಲಿದ್ದು, ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT