ಸಿರಿ ಲಂಬೋದರ ವಿವಾಹ ಸ್ಟಿಲ್ 
ಸಿನಿಮಾ ಸುದ್ದಿ

39 ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿದ 'ಸಿರಿ ಲಂಬೋದರ ವಿವಾಹ'

ಸೌರಭ್‌ ಕುಲಕರ್ಣಿ ನಿರ್ಮಾಣ ಮತ್ತು ನಿರ್ದೇಶನದ “ಸಿರಿ ಲಂಬೋದರ ವಿವಾಹ’ (ಎಸ್‌ಎಲ್‌ವಿ) ಸಿನಿಮಾದ ಟೀಸರ್‌ ಇತ್ತೀಚಿಗೆ ಬಿಡುಗಡೆಯಾಗಿದೆ. ನಟ ರಮೇಶ್‌ ಅರವಿಂದ್‌ ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ನಟ ಮತ್ತು ನಿರೂಪಕ ಸೌರಭ್ ಕುಲಕರ್ಣಿ ಸಿರಿ ಲಂಬೋದರ ವಿವಾಹ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಸೌರಭ್‌ ಕುಲಕರ್ಣಿ ನಿರ್ಮಾಣ ಮತ್ತು ನಿರ್ದೇಶನದ “ಸಿರಿ ಲಂಬೋದರ ವಿವಾಹ’ (ಎಸ್‌ಎಲ್‌ವಿ) ಸಿನಿಮಾದ ಟೀಸರ್‌ ಇತ್ತೀಚಿಗೆ ಬಿಡುಗಡೆಯಾಗಿದೆ. ನಟ ರಮೇಶ್‌ ಅರವಿಂದ್‌ ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ಮಾಪಕರು 39 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಯೋಜನೆಯ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್‌ಎಲ್‌ವಿ ತಂಡ ಬಿಡುಗಡೆ ಮಾಡಿದ ಮೊದಲ ಟೀಸರ್‌ನಲ್ಲಿ ರಮೇಶ್ ಅರವಿಂದ್ ಅವರು ಚಿತ್ರದ ಬಗ್ಗೆ ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಸೌರವ್  ಕುಲಕರ್ಣಿ ನಿರೂಪಕ ಸಂಜೀವ್ ಕುಲಕರ್ಣಿ ಅವರ ಮಗ, ಸೌರವ್ ಬಾಲ್ಯ ನಟರಾಗಿ ಎಂಟ್ರ ಕೊಟ್ಟಿದ್ದರು, ಗುರು ರಾಘವೇಂದ್ರ ವೈಭವ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಮನ ಗೆದ್ದಿದ್ದಾರೆ.

500 ಕ್ಕೂ ಹೆಚ್ಚು ಸ್ಟೇಜ್ ಶೋಗಳು ಮತ್ತು ಅನೇಕ ದೂರದರ್ಶನ ಕಾರ್ಯಕ್ರಮಗಳಿಗೆ ನಿರೂಪಕರಾಗಿರುವ ಸೌರಭ್ ನಮ್ಮನೆ ಪ್ರೊಡಕ್ಷನ್ಸ್‌ನಲ್ಲಿ ತಮ್ಮ ತಂಡದೊಂದಿಗೆ ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.

SLV ಚಿತ್ರದಲ್ಲಿ ಅಂಜನ್ ಎ ಭಾರದ್ವಾಜ್ ಮತ್ತು ದಿಶಾ ರಮೇಶ್ ನಾಯಕರಾಗಿ ನಟಿಸಿದ್ದಾರೆ ಮತ್ತು ರಾಜೇಶ್ ನಟರಂಗ, ಸುಂದರ್ ವೀಣಾ, ಪಿ ಡಿ ಸತೀಶ್ಚಂದ್ರ, ಶಿವು (ಮಜರಭಾರತ), ಮತ್ತು ಸದಾನಂದ ಕಾಳೆ (ಕಾಮಿಡಿ ಕಿಲಾಡಿಗಳು) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಅಂಶಗಳನ್ನು ಹೊಂದಿರುವ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾದಲ್ಲಿ  ಛಾಯಾಗ್ರಾಹಕರಾಗಿ ಕಿಟ್ಟಿ ಕೌಶಿಕ್ ಮತ್ತು ಮತ್ತು ಸಂಗೀತ ನಿರ್ದೇಶಕರಾಗಿ ಸಂಗರ್ಶ್ ಕುಮಾರ್ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಅಡ್ಡ ಬರುವ Iran ಸಣ್ಣ ಬೋಟ್ ಗಳ ಗುಂಡಿಟ್ಟು ಉಡಾಯಿಸಿ': ಅಮೆರಿಕ ಸೇನೆಗೆ Donald Trump ಆದೇಶ!

ಸ್ವಾತಂತ್ರ್ಯದ ನಂತರ ತಮಿಳುನಾಡು, ಪ.ಬಂಗಾಳದಲ್ಲಿ ದಾಖಲೆ ಪ್ರಮಾಣದ ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಚುನಾವಣಾ ಆಯೋಗ!

Hassan: 'ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ': ಎಚ್ ಡಿಕೆ ಮುಂದೆಯೇ HD Revanna ಕಣ್ಣೀರಿನ ಶಪಥ

IPL 2026: ಮತ್ತೆ ಮುಗ್ಗರಿಸಿದ MI, 103 ರನ್ ಅಂತರದಲ್ಲಿ CSKಗೆ ಜಯ!

IPL 2026: MI ವಿರುದ್ಧ ಸ್ಫೋಟಕ ಬ್ಯಾಟಿಂಗ್, ಶತಕದ ಮೂಲಕ ಐತಿಹಾಸ ನಿರ್ಮಿಸಿದ Sanju Samson, ಎಲೈಟ್ ಗ್ರೂಪ್ ಸೇರ್ಪಡೆ

SCROLL FOR NEXT