ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಪ್ರೀತಿ ಮತ್ತು ಬ್ರೇಕ್‌ಅಪ್‌ಗಳ ವಿಡಂಬನೆ 'ಟ್ರಿಬಲ್ ರೈಡಿಂಗ್': ನಿರ್ದೇಶಕ ಮಹೇಶ್ ಗೌಡ

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಟ್ರಿಬಲ್ ರೈಡಿಂಗ್ ನಿರ್ದೇಶಕ ಮಹೇಶ್ ಗೌಡ ಅವರ ಮೊದಲ ಚಿತ್ರವಾಗಿರಬಹುದು ಆದರೆ ನಿರ್ದೇಶಕರು ಮುಂಗಾರು ಮಳೆಯ ದಿನದಿಂದಲೂ ನಟನನ್ನು ತಿಳಿದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಟ್ರಿಬಲ್ ರೈಡಿಂಗ್ ನಿರ್ದೇಶಕ ಮಹೇಶ್ ಗೌಡ ಅವರ ಮೊದಲ ಚಿತ್ರವಾಗಿರಬಹುದು ಆದರೆ ನಿರ್ದೇಶಕರು ಮುಂಗಾರು ಮಳೆಯ ದಿನದಿಂದಲೂ ನಟನನ್ನು ತಿಳಿದಿದ್ದಾರೆ.

ಯೋಗರಾಜ್ ಭಟ್ ಅವರ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ ಅವರು ನಂತರ ಸೂರಿ ಅವರ ದುನಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹ ಸಹಾಯಕರಾಗಿ ಕೆಲಸ ಮಾಡಿದ್ದರು. ನಂತರ ವಿನೋದ್ ಪ್ರಭಾಕರ್ ಅವರ ರಗಡ್ ಚಿತ್ರದ ಮೂಲಕ ನಿರ್ದೇಶನಕ್ಕೀಳಿದರು. ಟ್ರಿಬಲ್ ರೈಡಿಂಗ್ ಅವರ ಎರಡನೇ ಚಿತ್ರವಾಗಿದೆ.

ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರು, ಈ ಪಾತ್ರಕ್ಕೆ ಗಣೇಶ್‌ನ ಬಹುಮುಖತೆಯು ಸಂಪೂರ್ಣವಾಗಿ ಸರಿಹೊಂದುತ್ತದೆ ಎಂದು ಭಾವಿಸಿದ್ದು ಅವರನ್ನೇ ಟ್ರಿಬಲ್ ರೈಡಿಂಗ್‌ಗೆ ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು. ಅವರು ಟ್ರಿಬಲ್ ರೈಡಿಂಗ್‌ನಲ್ಲಿ ವೈದ್ಯರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಮಹೇಶ್ ಹೇಳುತ್ತಾರೆ. ಅವರ ಚಲನಚಿತ್ರಗಳು ಸಾಮಾನ್ಯವಾಗಿ ಪ್ರೀತಿ, ಹಾಸ್ಯ ಮತ್ತು ಸೆಂಟಿಮೆಂಟ್‌ಗಳೊಂದಿಗೆ ಬೆರೆಯುತ್ತವೆ.

ತಮ್ಮ ಚಿತ್ರಕ್ಕೆ ಟ್ರಿಬಲ್ ರೈಡಿಂಗ್ ಶೀರ್ಷಿಕೆ ಇಟ್ಟಿದ್ದರ ಹಿಂದಿನ ಕಲ್ಪನೆಯನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ(ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್), ಅವರ ಪಾತ್ರಗಳಿಗೆ ರಮ್ಯಾ, ರಕ್ಷಿತಾ ಮತ್ತು ರಾಧಿಕಾ ಎಂದು ಪಾತ್ರಗಳಿಗೆ ಹೆಸರಿಟ್ಟಿದ್ದು ಹೀಗಾಗಿ ಈ ಶೀರ್ಷಿಕೆ ಇಡಲಾಗಿದೆ. ಚಿತ್ರದಲ್ಲಿ ರಶ್ಮಿಕಾ ಎಂಬ ಅಚ್ಚರಿಯ ಪಾತ್ರವೂ ಇದೆ. ಈ ನಾಲ್ಕನೇ ನಾಯಕಿ ಬೆಳ್ಳಿ ಪರದೆ ಮೇಲೆ ಬಹಿರಂಗಗೊಳ್ಳಲಿದೆ ಎಂದು ನಿರ್ದೇಶಕರು ಹೇಳುತ್ತಾರೆ.

ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಸಸ್ಪೆನ್ಸ್, ಕಾಮಿಡಿ, ಆ್ಯಕ್ಷನ್ ಮತ್ತು ಹಾಡುಗಳ ಉತ್ತಮ ಪ್ಯಾಕೇಜು ಇದೆ ಎನ್ನುತ್ತಾರೆ ನಿರ್ದೇಶಕರು. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ಗೋಪಾಲ್ ಅವರು ಬಂಡವಾಳ ಹೂಡಿರುವ ಟ್ರಿಬಲ್ ರೈಡಿಂಗ್ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT