ಸಿನಿಮಾ ಸುದ್ದಿ

ಪ್ರಮೋದ್ ಅಭಿನಯದ 'ಬಾಂಡ್ ರವಿ' ಚಿತ್ರ ಡಿಸೆಂಬರ್ 9ಕ್ಕೆ ಬಿಡುಗಡೆ

Manjula VN

ನಟ ಪ್ರಮೋದ್ ಅಭಿನಯದ ಬಾಂಡ್ ರವಿ ಸಿನಿಮಾ ಡಿಸೆಂಬರ್ 9ಕ್ಕೆ ಬಿಡುಗಡೆಯಾಗಲಿದೆ.

ಶುಕ್ರವಾರ, ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.

ರೊಮ್ಯಾಂಟಿಕ್-ಆಕ್ಷನ್ ಎಂಟರ್‌ಟೈನರ್ ಎಂದು ಬಿಂಬಿಸಲಾಗಿರುವ ಬಾಂಡ್ ರವಿ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿಯಾಗಿದ್ದಾರೆ. ರವಿ ಕಾಳೆ, ರವಿ ಪ್ರಕಾಶ್, ಶೋಬ್ರಾಜ್ ಮತ್ತು ವಿಜಯ್ ಚೆಂಡೂರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನರಸಿಂಹ ಮೂರ್ತಿ ನಿರ್ಮಿಸಿರುವ ಈ ಚಿತ್ರಕ್ಕೆ ಮನೋ ಮೂರ್ತಿ (ಮುಂಗಾರು ಮಳೆ) ಸಂಗೀತ ಮತ್ತು ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಚಿತ್ರವನ್ನು ಪ್ರಜ್ವಲ್ ಎಸ್ಪಿ ನಿರ್ದೇಶಿಸಿದ್ದಾರೆ.

SCROLL FOR NEXT