ಕಾಂತಾರ 
ಸಿನಿಮಾ ಸುದ್ದಿ

IMDb ಭಾರತೀಯ ಚಿತ್ರರಂಗದ ಅತ್ಯುತ್ತಮ 250 ಚಿತ್ರಗಳ ಪೈಕಿ ಅಗ್ರಸ್ಥಾನಕ್ಕೇರಿದ ಕಾಂತಾರ!

ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಚಿತ್ರಕ್ಕೆ ಮತ್ತೊಂದು ಗರಿ ಮೂಡಿದೆ. ಕಾಂತಾರ ಇದೀಗ 'ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ನವದೆಹಲಿ: ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಚಿತ್ರಕ್ಕೆ ಮತ್ತೊಂದು ಗರಿ ಮೂಡಿದೆ. ಕಾಂತಾರ ಇದೀಗ 'ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇತ್ತೀಚೆಗೆ IMDb ಟಾಪ್ 250 ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲಿ 'ಕಾಂತಾರ' ನಂ. 1 ಸ್ಥಾನವನ್ನು ಪಡೆದುಕೊಂಡಿದೆ. ಇದು ಅಭಿಮಾನಿಗಳಿಂದ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಬೆಳೆಯುತ್ತಿರುವಾಗ ಚಿತ್ರವು ಸಾಧಿಸಿದ ಮತ್ತೊಂದು ಸಾಧನೆಗೆ ಸೇರಿಸಿದೆ. ಶುಕ್ರವಾರದಿಂದ ವೀಕ್ಷಕರ ಸಂಖ್ಯೆಯು ಸುಮಾರು 40-50% ರಷ್ಟು ಹೆಚ್ಚಾಗಿದೆ.

ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾಂತಾರ ಇದೀಗ ವಿಶ್ವದಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ 6ನೇ ಕನ್ನಡ ಚಿತ್ರವಾಗಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹಾಲ್‌ಗಳು ಇನ್ನೂ ತುಂಬಿ ತುಳುಕುತ್ತಿದೆ. 

ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಚಿತ್ರದ ಕಲೆಕ್ಷನ್ ಮತ್ತಷ್ಟು ಜಾಸ್ತಿಯಾಗಲಿದೆ. ಇನ್ನು ಕಳೆದ ಶನಿವಾರ 14 ಕೋಟಿ ಹಾಗೂ ಭಾನುವಾರ 18 ಕೋಟಿ ಕಲೆಕ್ಷನ್ ಮಾಡಿದೆ.

ಕಾಂತಾರ ಹೊಗಳಿದ ಸೆಲೆಬ್ರಿಟಿಗಳು!
ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕಾಂತಾರವನ್ನು ಹೊಗಳಿದ್ದಾರೆ. 'ಕಾಂತಾರ' ಚಿತ್ರವು ಎಲ್ಲಾ ಕಡೆಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ಪ್ರಮುಖ ಸೆಲೆಬ್ರಿಟಿಗಳಾದ ಪ್ರಭಾಸ್, ಧನುಷ್, ಅನಿಲ್ ಕುಂಬ್ಳೆ, ಶಿಲ್ಪಾ ಶೆಟ್ಟಿ, ಕಂಗನಾ ರನೌತ್ ಮತ್ತು ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT