ಮುಂಬೈ: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ, ಭಾರತದ ಲಿಜೆಂಡರಿ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಮತ್ತಿತರ ಚಿತ್ರಗಳು 'ಭಾರತದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ ಎಂದು ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ (ಎಫ್ಐಪಿಆರ್ ಇಎಸ್ ಸಿಐ) ಘೋಷಿಸಿದೆ.
ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ 1973ರಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಸಾರ್ವಕಾಲಿಕ ಅತ್ಯುತ್ತಮ ಟಾಪ್ 10 ಚಿತ್ರಗಳ ಪೈಕಿ 1955ರಲ್ಲಿ ಬಿಡುಗಡೆಯಾದ ಪಥೇರ್ ಪಾಂಚಾಲಿ' ಪ್ರಥಮ ಸ್ಥಾನ ಪಡೆದಿದೆ. ರಹಸ್ಯವಾಗಿ 30 ಸದಸ್ಯರಿಂದ ಈ ಸಮೀಕ್ಷೆ ನಡೆಸಿದ್ದಾಗಿ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.
ಉಳಿದಂತೆ ಪಟ್ಟಿಯಲ್ಲಿರುವ ಇತರ ಚಿತ್ರಗಳು ಇಂತಿವೆ:
1960 ರಲ್ಲಿ ಬಿಡುಗಡೆಯಾದ ಋತ್ವಿಕ್ ಘಾಟಕ್ ಅವರ 'ಮೇಘೆ ಢಾಕಾ ತಾರಾ' (ಬಂಗಾಳಿ)
1969ರಲ್ಲಿ ತೆರೆಗೆ ಬಂದ ಮೃಣಾಲ್ ಸೇನ್ ರ 'ಭುವನ್ ಶೋಮ್' (ಹಿಂದಿ)
1981ರಲ್ಲಿ ಬಿಡುಗಡೆಯಾದ ಅಡೂರ್ ಗೋಪಾಲಕೃಷ್ಣನ್ ರ 'ಎಲಿಪ್ಪತಯಂ' (ಮಲಯಾಳಂ)
1973 ರಲ್ಲಿ ಬಿಡುಗಡೆಯಾದ ಎಂಎಸ್ ಸತ್ಯು ಅವರ 'ಗರ್ಮ್ ಹವಾ' (ಹಿಂದಿ)
1964ರಲ್ಲಿ ತಯಾರದ ರೇ ಅವರ 'ಚಾರುಲತಾ' (ಬಂಗಾಳಿ)
1974ರಲ್ಲಿ ಬಿಡುಗಡೆಯಾದ ಶ್ಯಾಮ್ ಬೆನಗಲ್ ರ ಅಂಕುರ್' (ಹಿಂದಿ)
1954ರಲ್ಲಿ ನಿರ್ಮಾಣವಾದ ಗುರುದತ್ ಅವರ 'ಪ್ಯಾಸ' (ಹಿಂದಿ)
1975 ರಲ್ಲಿ ರಮೇಶ್ ಸಿಪ್ಪಿ ನಿರ್ದೇಶನದ 'ಶೋಲೆ' (ಹಿಂದಿ)