ನಟ ಜಯಂ ರವಿ 
ಸಿನಿಮಾ ಸುದ್ದಿ

ತಮಿಳಿನ ಖ್ಯಾತ ನಟ ಜಯಂ ರವಿಗೆ ಕೋವಿಡ್ ಪಾಸಿಟಿವ್, ಚಿತ್ರರಂಗದ ಹಲವರಲ್ಲಿ ತಳಮಳ

ನಿರ್ದೇಶಕ ಮಣಿರತ್ನಂ ಅವರ ಬ್ಲಾಕ್‌ಬಸ್ಟರ್ ಹಿಟ್ 'ಪೊನ್ನಿಯಿನ್ ಸೆಲ್ವನ್ 1' ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರವನ್ನು ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚೆನ್ನೈ: ನಿರ್ದೇಶಕ ಮಣಿರತ್ನಂ ಅವರ ಬ್ಲಾಕ್‌ಬಸ್ಟರ್ ಹಿಟ್ 'ಪೊನ್ನಿಯಿನ್ ಸೆಲ್ವನ್ 1' ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರವನ್ನು ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಜಯಂ ರವಿ, 'ಇಂದು ಸಂಜೆ ನನಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ನಾನು ತಕ್ಷಣವೇ ಪ್ರತ್ಯೇಕವಾಸದಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಅಗತ್ಯವಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಮಾಸ್ಕ್. ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ! ದೇವರ ಆಶೀರ್ವಾದವಿರಲಿ' ಎಂದಿದ್ದಾರೆ.

ಹಲವಾರು ಸೆಲೆಬ್ರಿಟಿಗಳು ರವಿ ಅವರು ಕೋವಿಡ್‌ನಿಂದ ಶೀಘ್ರವಾಗಿ ಮತ್ತು ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ರವಿ ಅವರ ಜೊತೆ ಒಂದೆರಡು ಚಿತ್ರಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಅಹಮದ್, 'ಅಯ್ಯೋ ಇಲ್ಲ, ಬೇಗ ಗುಣಮುಖರಾಗಿ ರವಿ' ಎಂದು ರವಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ರವಿ ಅವರಿಗೆ ಕೋವಿಡ್ ದೃಢಪಟ್ಟಿರುವ ಈ ಘೋಷಣೆಯು ಕೋವಿಡ್‌ ಎಂಬುದು ಗತಕಾಲದ ಸಂಗತಿ ಎಂದು ಭಾವಿಸಿದ್ದ ಚಿತ್ರರಂಗದ ಅನೇಕರಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.

ಜನರು ತಮ್ಮ ಮನೆಗಳಿಂದ ಹೊರಬರುವಾಗ ಮಾಸ್ಕ್ ಧರಿಸದಿರುವ ತಮ್ಮ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇದು ಈಗ ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT