ಮಿಹಿಕಾ ದಗ್ಗುಬಾಟಿ - ರಾಣಾ ದಗ್ಗುಬಾಟಿ 
ಸಿನಿಮಾ ಸುದ್ದಿ

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ದಗ್ಗುಬಾಟಿ: ವರದಿ

ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅವರು ಮಿಹಿಕಾ ಬಜಾಜ್ ಅವರೊಂದಿಗೆ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಆದರೆ ಈಗ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಆದರೆ, ದಂಪತಿ ಅಥವಾ ಕುಟುಂಬದ ಯಾರೊಬ್ಬರಿಂದಲೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅವರು ಮಿಹಿಕಾ ಬಜಾಜ್ ಅವರೊಂದಿಗೆ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಆದರೆ ಈಗ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಆದರೆ, ದಂಪತಿ ಅಥವಾ ಕುಟುಂಬದ ಯಾರೊಬ್ಬರಿಂದಲೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಇತ್ತೀಚೆಗೆ, ಬಾಹುಬಲಿ ನಟ ದಗ್ಗುಬಾಟಿ ತನ್ನೆಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಅಳಿಸಿ ಮತ್ತು ಸಾಮಾಜಿಕ ಮಾಧ್ಯಮದಿಂದ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಹೇಳಿದ್ದರು.

ಕೆಲ ದಿನಗಳಿಂದ ದಂಪತಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಊಹಾಪೋಹವೂ ಎದ್ದಿತ್ತು. ಆದಾಗ್ಯೂ, ಮಿಹಿಕಾ ಅವರ ಕರ್ವಾ ಚೌತ್ ಪೋಸ್ಟ್ ಅಂತಹ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ತಮ್ಮ ಮದುವೆಯ ಉಂಗುರಗಳನ್ನು ಪ್ರದರ್ಶಿಸುತ್ತಾ ಅವರ ಕೈಗಳ ಫೋಟೊವನ್ನು ಹಂಚಿಕೊಂಡಿದ್ದಾರೆ. '2 ಆತ್ಮಗಳು, 2 ಜನರು, 2 ಕೈಗಳು, 1 ಭರವಸೆ. ಒಟ್ಟಿಗೆ ಅನಂತ. ಇಂದು ಮತ್ತು ಪ್ರತಿದಿನ ಪ್ರೀತಿಯನ್ನು ಆಚರಿಸೋಣ. ನೀವು ನನ್ನನ್ನು ಸಂಪೂರ್ಣಗೊಳಿಸಿದ್ದೀರಿ!' ಎಂದು ಬರೆದುಕೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ದಂಪತಿ ತಮ್ಮ ಎರಡನೇ ವಾರ್ಷಿಕೋತ್ಸವದ ಕ್ಷಣಗಳನ್ನು ಸಹ ಹಂಚಿಕೊಂಡಿದ್ದಾರೆ. ರಾಣಾ ಜೊತೆಗಿನ ಫೋಟೋಗಳ ಸರಣಿಯನ್ನು ಮಿಹಿಕಾ ಹಂಚಿಕೊಂಡಿದ್ದಾರೆ. ಆಲ್ಬಮ್‌ನಲ್ಲಿನ ಕೊನೆಯ ಫೋಟೋ ತಮ್ಮ ಪ್ಯಾರಿಸ್ ಪ್ರಯಾಣದಲ್ಲಿನ ಐಫೆಲ್ ಟವರ್‌ನ ಮುಂದೆ ತೆಗೆದುಕೊಂಡ ಅವರ ಸೆಲ್ಫಿಯಾಗಿದೆ.

ರಾಣಾ ದಗ್ಗುಬಾಟಿ ಅವರು ತಮ್ಮ ಮುಂದಿನ ವೆಬ್ ಸರಣಿ ರಾಣಾ ನಾಯ್ಡುನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಚಿಕ್ಕಪ್ಪ ವೆಂಕಟೇಶ್ ದಗ್ಗುಬಾಟಿ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಜೋಡಿ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ, ಅವರು ಸಾಯಿ ಪಲ್ಲವಿ ನಟಿಸಿದ್ದ ವಿರಾಟ ಪರ್ವಂ ಸಿನಿಮಾದ ಮೂಲಕ ಕೊನೆಯ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ