ಬನಾರಸ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಝೈದ್ ಖಾನ್ ಅವರೊಂದಿಗೆ ನಟ ದರ್ಶನ್ ಮತ್ತು ವಿನೋದ್ ಪ್ರಭಾಕರ್ 
ಸಿನಿಮಾ ಸುದ್ದಿ

ತೆಲುಗು, ತಮಿಳು, ಮಲಯಾಳಂ ಸೇರಿ 600ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಝೈದ್ ಖಾನ್ ಅಭಿನಯದ ಬನಾರಸ್ ಬಿಡುಗಡೆ

ಬನಾರಸ್ ಸಿನಿಮಾ ಕರ್ನಾಟಕದಲ್ಲಿ ಸುಮಾರು 250, ತೆಲುಗು ರಾಜ್ಯಗಳಲ್ಲಿ 300 ಮತ್ತು ತಮಿಳು ಮತ್ತು ಮಲಯಾಳಂನಲ್ಲಿ ತಲಾ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತರ ಭಾರತದಲ್ಲಿ ಸುಮಾರು 400 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್ ಮತ್ತು ಪ್ರೇಮ್ ಜೊತೆಗೆ ಚಿತ್ರದ ನಿರ್ದೇಶಕ ಜಯತೀರ್ಥ ಮತ್ತು ನಾಯಕಿ ಸೋನಾಲ್ ಮೊಂತೇರೊ ಭಾಗವಹಿಸಿದ್ದರು.

'ನನ್ನ ಚೊಚ್ಚಲ ಸಿನಿಮಾಗೆ ಸಿಗುತ್ತಿರುವ ಬೆಂಬಲಕ್ಕಾಗಿ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರಕ್ಕೆ ಬೆಂಬಲ ನೀಡಲು ಬಂದಿದ್ದಾರೆ ಮತ್ತು ನನ್ನ ತಂದೆ (ಜಮೀರ್ ಅಹ್ಮದ್) ಅವರ ಉಪಸ್ಥಿತಿಯನ್ನು ನೋಡಿ ನಾನು ಉತ್ಸುಕನಾದೆ' ಎನ್ನುತ್ತಾರೆ ಝೈದ್ ಖಾನ್.

ನವೆಂಬರ್ 4 ರಂದು ತೆರೆಗೆ ಬರಲಿರುವ ಝೈದ್ ಖಾನ್ ಅವರ ಚೊಚ್ಚಲ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್ ಆಗಲಿದೆ ಮತ್ತು ಬಿಡುಗಡೆಯಾಗಲಿದೆ.

ಪ್ರಮುಖ ವಿತರಣಾ ಕಂಪನಿಗಳು ತಮ್ಮ ತಮ್ಮ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿವೆ. ಬನಾರಸ್ ಅನ್ನು ಹಿಂದಿಯಲ್ಲಿ ಅಜಯ್ ದೇವಗನ್ ಅವರ ಪನೋರಮಾ ಸ್ಟುಡಿಯೋಸ್ ವಿತರಿಸಿದರೆ, ಮುಳಕುಪ್ಪಡಂ ಮತ್ತು ಶಕ್ತಿ ವೇಲು ಕ್ರಮವಾಗಿ ಮಲಯಾಳಂ ಮತ್ತು ತಮಿಳು ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.

ಈಮಧ್ಯೆ, ಜಯತೀರ್ಥ ನಿರ್ದೇಶನದ ಬನಾರಸ್ ಅನ್ನು ನಿಗೂಢ ಪ್ರೇಮ ಕಥೆಯನ್ನು ಒಳಗೊಂಡಿದೆ ಎಂದು ಬಿಂಬಿಸಲಾಗಿದೆ. ಬನಾರಸ್ ಸಿನಿಮಾ ಕರ್ನಾಟಕದಲ್ಲಿ ಸುಮಾರು 250, ತೆಲುಗು ರಾಜ್ಯಗಳಲ್ಲಿ 300 ಮತ್ತು ತಮಿಳು ಮತ್ತು ಮಲಯಾಳಂನಲ್ಲಿ ತಲಾ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತರ ಭಾರತದಲ್ಲಿ ಸುಮಾರು 400 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ತಿಲಕರಾಜ್ ಬಲ್ಲಾಳ್ ನಿರ್ಮಿಸಿರುವ ಬನಾರಸ್ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಮತ್ತು ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT