ಬ್ಯಾಚುಲರ್ ಪಾರ್ 
ಸಿನಿಮಾ ಸುದ್ದಿ

ಅಭಿಜಿತ್ ಮಹೇಶ್ ಚೊಚ್ಚಲ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ'ಗೆ ರಕ್ಷಿತ್ ಶೆಟ್ಟಿ ಪ್ರೊಡ್ಯೂಸರ್

ರಕ್ಷಿತ್  ಶೆಟ್ಟಿ ಒಡೆತನದ ಪರಮಾವ್ ಸ್ಟುಡಿಯೋ ಪರಮಾವ್ ಸ್ಟುಡಿಯೋ ಹೊಸ ಸಿನಿಮಾ ಘೋಷಣೆ ಮಾಡಿದೆ. ಅಭಿಷೇಕ್ ಮಹೇಶ್ ನಿರ್ದೇಶನದ ಚಿತ್ರಕ್ಕೆ ‘ಬ್ಯಾಚುಲರ್ ಪಾರ್ಟಿ’ ಎಂದು ಹೆಸರಿಡಲಾಗಿದೆ.

ರಕ್ಷಿತ್  ಶೆಟ್ಟಿ ಒಡೆತನದ ಪರಮಾವ್ ಸ್ಟುಡಿಯೋ ಪರಮಾವ್ ಸ್ಟುಡಿಯೋ ಹೊಸ ಸಿನಿಮಾ ಘೋಷಣೆ ಮಾಡಿದೆ. ಅಭಿಷೇಕ್ ಮಹೇಶ್ ನಿರ್ದೇಶನದ ಚಿತ್ರಕ್ಕೆ ‘ಬ್ಯಾಚುಲರ್ ಪಾರ್ಟಿ’ ಎಂದು ಹೆಸರಿಡಲಾಗಿದೆ.

ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ರಿಷಭ್ ಶೆಟ್ಟಿ, ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಿರಿ ರವಿಕುಮಾರ್, ಅರ್ಚರಾ ಕಿರ್ಕ್, ಪ್ರಕಾಶ್ ತುಮಿನಾಡು ಮುಂತಾದವರು ತಾರಾಗಣದಲ್ಲಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ತಂಡದಲ್ಲಿದ್ದ ಈ ಹಿಂದೆ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಸ.ಹಿ.ಪ್ರಾ.ಶಾ. ಕಾಸರಗೋಡು ಚಿತ್ರಗಳ ಕಥೆ- ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದ ಅಭಿಜಿತ್ ಮಹೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಬ್ಯಾಚುಲರ್ ಪಾರ್ಟಿ ಚಿತ್ರದ ಕಥೆ- ಚಿತ್ರಕಥೆ ಅಭಿಜಿತ್ ಮಹೇಶ್ ಅವರದ್ದೇ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತವಿದ್ದು, ಅರವಿಂದ ಎಸ್ ಕಶ್ಯಪ್ ಛಾಯಾಗ್ರಹಣವಿದೆ.

ನಾನು ಕಿರುಚಿತ್ರ ನಿರ್ದೇಶಕನಾಗಿ ಕೆಲಸ ಆರಂಭಿಸಿದಾಗಿನಿಂದ ರಕ್ಷಿತ್ ಶೆಟ್ಟಿಯೊಂದಿಗೆ ನನ್ನ ಪ್ರಯಾಣ ಪ್ರಾರಂಭವಾಯಿತು. ಕಿರಿಕ್ ಪಾರ್ಟಿ ನಂತರ ನಾವು ಪೂರ್ಣ ಪ್ರಮಾಣದ ಕಾಮಿಡಿ ಎಂಟರ್‌ಟೈನರ್ ಮಾಡಿಲ್ಲ. ಬ್ಯಾಚುಲರ್ ಪಾರ್ಟಿ ಶೀರ್ಷಿಕೆಯಂತೆ ಸಿನಿಮಾ ಕಥೆ ಕೂಡ ಪ್ರೆಶ್ ಆಗಿದೆ, ಅದರಂತೆ ಕಥೆ ಕೂಡ ಹೊಸದಾಗಿದೆ ಎಂದು ನಿರ್ದೇಶಕ ಅಭಿಜಿತ್ ತಿಳಿಸಿದ್ದಾರೆ.

ರಕ್ಷಿತ್ ಮತ್ತು ರಿಷಬ್  ಅವರೊಂದಿಗೆ ಬೆರೆಯುವುದು ಯಾವಾಗಲೂ ಖುಷಿಯಾಗುತ್ತದೆ. ಆದರೆ ದಿಗಂತ್ ಜೊತೆ ಇದೇ ಮೊದಲು ಕೆಲಸ ಮಾಡುತ್ತಿದ್ದೇನೆ, ಅವರು ಕೂಡ ನಮ್ಮ ಜೊತೆ ಸಲೀಸಾಗಿ ಹೊಂದಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮದುವೆ ಮತ್ತು ಪ್ರೇಮ ಜೀವನವನ್ನು ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ