ಸೌಂದರ್ಯ ರಜನಿಕಾಂತ್ 
ಸಿನಿಮಾ ಸುದ್ದಿ

ಸೌಂದರ್ಯ ರಜನಿಕಾಂತ್ ಗೆ ಗಂಡು ಮಗು ಜನನ: ರಜನಿಕಾಂತ್ ಮನೆಯಲ್ಲಿ ಸಂಭ್ರಮ !

ಸೂಪರ್​ ಸ್ಟಾರ್ ರಜನಿಕಾಂತ್​ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 11ರ ರಾತ್ರಿ ಸೋಶಿಯಲ್​ ಮೀಡಿಯಾ ಮೂಲಕ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.

ಸೂಪರ್​ ಸ್ಟಾರ್ ರಜನಿಕಾಂತ್​ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 11ರ ರಾತ್ರಿ ಸೋಶಿಯಲ್​ ಮೀಡಿಯಾ ಮೂಲಕ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.

ಈ ಮೂಲಕ ರಜನಿಕಾಂತ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿರುವ ಅವರು ಮಗುವಿನ ಕೈ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಸೌಂದರ್ಯಾ ಅವರಿಗೆ ವೇದ್​ ಎಂಬ ಪುತ್ರನಿದ್ದಾನೆ. ಈಗ ಅವರು ಎರಡನೇ ಮಗನ ಆಗಮನದಿಂದ ಖುಷಿ ಆಗಿದ್ದಾರೆ. ಈ ಮಗನಿಗೆ ವೀರ್ ರಜನಿಕಾಂತ್​ ವನಂಗಮುಡಿ​ ಎಂದು ಹೆಸರು ಇಡಲಾಗಿದೆ.

‘ದೇವರ  ಕೃಪೆ ಮತ್ತು ತಂದೆ-ತಾಯಿ ಆಶೀರ್ವಾದದಿಂದ ಸೆಪ್ಟೆಂಬರ್​ 11ರಂದು ವೀರ್​ ರಜನಿಕಾಂತ್​ ವನಂಗಮುಡಿಗೆ ನಾನು, ವಿಶಾಗನ್​ ಮತ್ತು ವೇದ್​ ಸ್ವಾಗತ ಕೋರಿದ್ದೇವೆ’ ಎಂದು ಸೌಂದರ್ಯಾ ರಜನಿಕಾಂತ್​ ಟ್ವೀಟ್​ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ವೈದ್ಯರಿಗೆ ಅವರು ಧನವಾದ ಅರ್ಪಿಸಿದ್ದಾರೆ.

ಸೌಂದರ್ಯಾ ಅವರು ಅಶ್ವಿನ್ ರಾಮ್​ಕುಮಾರ್​ ಜೊತೆ 2010ರಲ್ಲಿ ಮದುವೆ ಆಗಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತು. 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್​ ವನಂಗಮುಡಿ ಜೊತೆ ಸೌಂದರ್ಯಾ ಎರಡನೇ ಮದುವೆ ಮಾಡಿಕೊಂಡರು. ಈಗ ಈ ದಂಪತಿಗೆ ಮಗು ಜನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT