ಮಾನ್ಸೂನ್ ರಾಗ ಸ್ಟಿಲ್ 
ಸಿನಿಮಾ ಸುದ್ದಿ

'ಮಾನ್ಸೂನ್ ರಾಗ' ದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ಘನತೆಯಿಂದ ನಿಭಾಯಿಸಲಾಗಿದೆ: ರಚಿತಾ ರಾಮ್

9 ವರ್ಷಗಳ ಸುದೀರ್ಘ ಸಿನಿಮಾ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಚಿತಾ ಈ ಚಿತ್ರದಲ್ಲಿ ಮೊದಲ ಬಾರಿಗೆ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎಸ್ ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ರಚಿತಾ ರಾಮ್‌ಗೆ ಇಮೇಜ್ ಹೊಸ ಮೇಕ್ ಓವರ್ ನೀಡಲಿದೆ.. 9 ವರ್ಷಗಳ ಸುದೀರ್ಘ ಸಿನಿಮಾ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಚಿತಾ ಈ ಚಿತ್ರದಲ್ಲಿ ಮೊದಲ ಬಾರಿಗೆ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆಗೂ ಮುಂಚಿತವಾಗಿ ಮಾನ್ಸೂನ್ ರಾಗದ ಬಗ್ಗೆ ರಚಿತಾ ಮಾತನಾಡಿದ್ದಾರೆ. ಸಿನಿಮಾ ಆರಂಭಕ್ಕೂ ಮೊದಲು ಕಥೆ ಕೇಳಿದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿಗ ರಚಿತಾ , ಕ್ಷಮಿಸಿ, ಪಾತ್ರದ ವೃತ್ತಿ ಏನು? ಎಂಬುದು  ನನ್ನ ಮೊದಲ ಪ್ರತಿಕ್ರಿಯೆ ಆಗಿತ್ತು.  ಇದು ಸವಾಲಿನ ವಿಷಯ ಎಂದು ನನಗೆ ತಿಳಿದಿತ್ತು. ಆದರೆ ಅಂತಹ ಪಾತ್ರಗಳನ್ನು ಮಾಡುವಾಗ, ತಂಡದ ಮತ್ತು ಸಹ ಕಲಾವಿದರು ಕೂಡ ಮುಖ್ಯವಾಗಿರುತ್ತದೆ.

ನಾನು ಪುಷ್ಪಕ ವಿಮಾನದಲ್ಲಿ ಕೆಲಸ ಮಾಡಿದ್ದ ನಿರ್ದೇಶಕ ರವೀಂದ್ರನಾಥ್ ಮತ್ತು ನಿರ್ಮಾಪಕ ವಿಖ್ಯಾತ್ ಅವರಿಂದ ಆಫರ್ ಬಂದಿದ್ದರಿಂದ, ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ, ಈ ಪಾತ್ರ ನಿರ್ವಹಿಸಿದ ರೀತಿಯಿಂದ ನಾನು ತೃಪ್ತಳಾಗಿದ್ದೇನೆ ಎಂದು ಹೇಳುತ್ತಾರೆ ಡಿಂಪಲ್ ಕ್ವೀನ್.

ನಿರ್ದೇಶಕ ರವೀಂದ್ರನಾಥ್ ಅವರ ಜೊತೆ ಇದು ನನ್ನ ಎರಡನೇ ಸಿನಿಮಾ, ಚಿತ್ರದ ಪಾತ್ರಕ್ಕಗಿ ಏನು ಬೇಕು ಎಂಬ ಸ್ಪಷ್ಟತೆ ನಿರ್ದೇಶಕರು ಮತ್ತು ಅವರ ತಂಡಕ್ಕಿತ್ತು, ಹೀಗಾಗಿ ಸಿನಿಮಾದಲ್ಲಿ ನನ್ನ ಪಾತ್ರವನ್ನು ಘನತೆಯಿಂದ ಹೊರತಂದಿದ್ದಾರೆ ಎಂದಿದ್ದಾರೆ ರಚಿತಾ.

"ಜನರು ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಯೋಚಿಸಿದಾಗ ಅವರು ಸಾಮಾನ್ಯವಾಗಿ ಬೋಲ್ಡ್  ಆಗಿ ವರ್ತಿಸುವ ಯಾರನ್ನಾದರೂ ನೆನಪಿಸಿಕೊಳ್ಳುತ್ತಾರೆ, ಎಕ್ಸ್ ಪೋಸ್ ಮಾಡುವ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಗಾಢವಾದ ಲಿಪ್ಸ್ಟಿಕ್ ಹಾಕುತ್ತಾರೆ ಎಂಬ ಯೋಚನೆ ಬರುತ್ತದೆ. ಆದರೆ, ಮಾನ್ಸೂನ್ ರಾಗದಲ್ಲಿ  'ಬಾನು' ಎಂಬ ನನ್ನ ಪಾತ್ರವನ್ನು ಸುಂದರವಾಗಿ ಮತ್ತು ಗೌರವಯುತವಾಗಿ ಚಿತ್ರೀಕರಿಸಲಾಗಿದೆ ಇದು ಬಯೋಪಿಕ್ ಅಲ್ಲದ ಕಾರಣ ತಾನು ಹೆಚ್ಚು ಹೋಮ್‌ವರ್ಕ್ ಮಾಡಲಿಲ್ಲ ಎಂದು ರಚಿತಾ ಹೇಳಿದ್ದಾರೆ.

ಇದು ಇತರ ಎಲ್ಲ ಪಾತ್ರಗಳಂತೆ. ನನ್ನ ಪಾತ್ರದಲ್ಲಿ ಆಕೆ  ಈ ವೃತ್ತಿಯನ್ನು ತೆಗೆದುಕೊಳ್ಳಲು ಕಾರಣವಿದೆ. ಅವಳು ಮುಗ್ಧಳು ಮತ್ತು ಪ್ರಬುದ್ಧಳು. ಮಾನ್ಸೂನ್ ರಾಗವು ಎರಡು ಸುಂದರ ಆತ್ಮಗಳ ಕಥೆಯಾಗಿದೆ - ಒಬ್ಬ ಲೈಂಗಿಕ ಕಾರ್ಯಕರ್ತೆ ಮತ್ತು ಒಬ್ಬ ಸಾಮಾನ್ಯ ಮನುಷ್ಯ  ಪ್ರೀತಿಯಲ್ಲಿ ಸಿಲುಕುವ ಕಥೆ. ಆಳವಾದ ಭಾವನಾತ್ಮಕ ಕಥೆಯನ್ನು ಬಹಳ ಸೂಕ್ಷ್ಮತೆಯಿಂದ ನಿರ್ವಹಿಸಲಾಗಿದೆ, ಎಂದು ರಚಿತಾ ವಿವರಿಸಿದ್ದಾರೆ. ರೆಟ್ರೋ ಕಾಲದಂತೆ ಚಿತ್ರಿಸಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ ಎಂದಿದ್ದಾರೆ.

ನಾವು 70 ಮತ್ತು 80 ರ ದಶಕದ ಚಲನಚಿತ್ರಗಳ ಅನುಭವ ಪಡೆಯುತ್ತೇವೆ. ಅಂತಹ ಸೆಟಪ್‌ಗೆ ಪ್ರವೇಶಿಸುವುದು ನನಗೆ ವಿಶಿಷ್ಟ ಅನುಭವ ನೀಡಿತು.  ವಿಂಟೇಜ್ ಪಫ್ ಸ್ಲೀವ್‌ ಬ್ಲೌಸ್  ಫ್ಲವರ್ ಪ್ರಿಂಟೆಡ್ ಸೀರೆಗಳು ನನಗೆ ಬಹಳ ವಿಶಿಷ್ಟವೆನಿಸ್ತು. ನಾವು ಮುಂಗಾರು ಮಳೆ ಸೀಸನ್ ನಲ್ಲಿ ಸಿನಿಮಾ ಚಿತ್ರೀಕರಿಸಿದ್ದೇವೆ, ಪ್ರತಿ ದೃಶ್ಯದಲ್ಲೂ ಮಳೆಯ ಹಿನ್ನೆಲೆಯಿದೆ. ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕೆ ಹೆಚ್ಚಿನ ಆಳವನ್ನು ನೀಡುತ್ತದೆ. ಮಾನ್ಸೂನ್ ರಾಗದಲ್ಲಿ ಮೊದಲ ಬಾರಿಗೆ ಧನಂಜಯ್ ಜೊತೆ ರಚಿತಾ ರಾಮ್ ಜೋಡಿಯಾಗಿದ್ದಾರೆ.

ಧನಂಜಯ ಆಸಾಧಾರಣ ನಟ, ಮಾನ್ಸೂನ್ ರಾಗಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಪ್ರತಿ ದೃಶ್ಯವನ್ನು ಸವಾಲಾಗಿ ಪರಿಗಣಿಸುತ್ತಾರೆ. ಅವರು ಸೆಟ್‌ಗಳಲ್ಲಿ ತುಂಬಾ ನ್ಯಾಚುರಲ್ ಆಗಿರುತ್ತಾರೆ, ಭಾಷೆಯ ಮೇಲಿನ ಅವನ ಹಿಡಿತವು ಪ್ರಭಾವಶಾಲಿಯಾಗಿದೆ. ಅವರ ಜೊತೆ ಕೆಲಸ ಮಾಡಿದ ನನಗೆ ಅದ್ಭುತ ಅನುಭವ ನೀಡಿತು ಎಂದು ರಚಿತಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT